ಆಗಂತುಕನೊಡನೆ ಮುಖಾಮುಖಿ

7

ಆಗಂತುಕನೊಡನೆ ಮುಖಾಮುಖಿ

Published:
Updated:
ಆಗಂತುಕನೊಡನೆ ಮುಖಾಮುಖಿ

ಇದೀಗ 2005 ್ಗಖಿ55 ಎಂಬ ಪುಟ್ಟ ಕಾಯ ಪುನಃ ಭೂಮಿಯತ್ತ ಬರುತ್ತಿದೆ. ನವೆಂಬರ್ 8ರಂದು ಭಾರತೀಯ ಕಾಲಮಾನ ಬೆಳಗಿನ 5:28ಕ್ಕೆ ಅದು ಸುಮಾರು 325,000 ಕಿಮೀ ಅಂದರೆ ಚಂದ್ರನ ದೂರಕ್ಕಿಂತ ಸ್ವಲ್ಪ ಸಮೀಪದ ಅಂತರದಿಂದ ಭೂಮಿಯನ್ನು ಹಾದುಹೋಗಲಿದೆ.

 

ಇದು ಖಗೋಳದ ಅಳತೆಯಲ್ಲಿ ಸಮೀಪ ಎಂದೆನ್ನಿಸಿಕೊಳ್ಳುತ್ತದೆ. ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಮುಂದೊಂದು ಸಲ ಇದು ಭೂಮಿಯ ಮೇಲೆ ಅಪ್ಪಳಿಸಬಹುದೇ ಎಂಬುದನ್ನು ಲೆಕ್ಕ ಹಾಕಲು ಈ ಭೇಟಿಯ ವಿವರಗಳು ಅವಶ್ಯಕ.ನಮ್ಮ ಭೂಮಿಯತ್ತ ಆಗಾಗ್ಗೆ ಬರುವ ಆಗಂತುಕ ಕಾಯಗಳೆಂದರೆ ಸಾಮಾನ್ಯವಾಗಿ ಧೂಮಕೇತುಗಳೇ ನೆನಪಾಗುತ್ತವೆ. ಆದರೆ, ಈಗ್ಗೆ ಐದು ದಶಕಗಳಿಂದೀಚೆಗೆ ಪುಟ್ಟ ಕಾಯಗಳ ಬಗ್ಗೆ ತಿಳಿವಳಿಕೆ ಮೂಡಿದೆ.ಸಾಮಾನ್ಯವಾಗಿ ಮಂಗಳ ಮತ್ತು ಗುರು ಗ್ರಹಗಳ ಕಕ್ಷೆಗಳ ನಡುವೆ ಇರಬೇಕಾದ ಕ್ಷುದ್ರಗ್ರಹಗಳು ದಾರಿ ತಪ್ಪಿ ಭೂಮಿಯತ್ತ ಬರುತ್ತವೆ ಎಂಬ ಸಂಗತಿ ಬೆಳಕಿಗೆ ಬಂದದ್ದು ಈಚೆಗೆ. ನಿಯರ್ ಅರ್ತ್ ಅಸ್ಟೆರಾಯ್ಡ ಎಂಬ ಹೊಸ ವರ್ಗೀಕರಣ ಸಿದ್ಧವಾಯಿತು. ಇವುಗಳಲ್ಲಿ ಕೆಲವು ಭೂಮಿಯ ಕಕ್ಷೆಯನ್ನೇ ಹಾದು ಹೋಗುವುದರಿಂದ ಅವನ್ನು ಅಪಾಯಕಾರಿ ಎಂದು ವಿಶೇಷ ಉಪಾಧಿಯಿಂದ ಪಟ್ಟಿ ಮಾಡಲಾಗಿದೆ. (ಪೊಟೆನ್ಷಿಯಲಿ ಡೇಂಜರಸ್)ಕಳೆದ ದಶಕದಲ್ಲಿ ಇವುಗಳ ಅಧ್ಯಯನಕ್ಕಾಗಿ ಹೊಸ ಹೊಸ ಯೋಜನೆಗಳೇ ಆರಂಭವಾದವು. ಅರಿಝೋನಾದ ಸ್ಪೇಸ್ ವಾಚ್ ಅಂದರೆ ಆಕಾಶವನ್ನು ಕಾವಲು ಕಾಯುವ ಕೆಲಸ ಮಾಡುವ ಯೋಜನೆಯ ಅಡಿಯಲ್ಲಿ 2008ರ ಡಿಸೆಂಬರ್ 5 ರಂದು ಒಂದು ಹೊಸ ಚುಕ್ಕೆ ಪತ್ತೆಯಾಯಿತು.ಇದನ್ನು ಕಂಡುಹಿಡಿದವರು    ರಾಬರ್ಟ್ ಮೆಕ್ ಮಿಲನ್. ಇದಕ್ಕೆ ಕ್ಷುದ್ರಗ್ರಹಗಳ ಪಟ್ಟಿಯಲ್ಲಿ 2005 ್ಗಖಿ55 ಎಂಬ ಸಂಖ್ಯೆ ನಮೂದಾಗಿದೆ. ಇದು ಕಂಡು ಹಿಡಿದ ತಾರೀಖನ್ನು ಸೂಚಿಸುತ್ತದೆ.್ಗ ಎಂಬುದು ಡಿಸೆಂಬರನ ಪೂವಾರ್ಧವನ್ನು ಸೂಚಿಸುತ್ತದೆ. ಇವು ಬಹಳ ಚಿಕ್ಕ ಕಾಯಗಳಾದದ್ದರಿಂದ ದೊಡ್ಡ ದೊಡ್ಡ ದೂರದರ್ಶಕಗಳಿಗೆ ಮಾತ್ರ ಕಾಣುತ್ತವೆ. ಆದರೆ, ರಡಾರ್ ತಂತ್ರಜ್ಞಾನವನ್ನು ಬಳಸಿ ಅದರ ವಿವರಗಳನ್ನು ಪಡೆಯಬಹುದು. ಅದು ಹಿಂದೆ  2010ರ ಏಪ್ರಿಲ್‌ನಲ್ಲಿ ಬಂದು ಹೋದಾಗ ಅರೆಸಿಬೋದಲ್ಲಿ ಇರುವ ರಡಾರ್‌ನಿಂದ ಅದರ ವ್ಯಾಸ ಸುಮಾರು 400 ಕಿಮೀ ಎಂದು ತಿಳಿಯುವುದು ಸಾಧ್ಯವಾಯಿತು.ಅದರ ಪ್ರತಿಫಲನಾಂಕ ಕಡಿಮೆ ಅಂದರೆ ಅದು ಬಹುಶಃ ಕಪ್ಪು ಬಣ್ಣದ್ದು. ಇಂತಹ ಕ್ಷುದ್ರಗ್ರಹಗಳನ್ನು `ಸಿ~ ವರ್ಗದವು ಎಂದು ಗುರುತಿಸುತ್ತಾರೆ. ತರಂಗದ ಸೂಕ್ಷ್ಮ ವ್ಯತ್ಯಾಸಗಳಿಂದ ಅದು ಸುಮಾರು 20 ಗಂಟೆಗಳಿಗೊಮ್ಮೆ ತನ್ನ ಅಕ್ಷದ ಸುತ್ತ ತಿರುಗುತ್ತದೆ ಎಂದು ತಿಳಿದು ಬಂದಿತು.ಕೇವಲ 400 ಮೀಟರ್ ಗಾತ್ರದ ಈ ಪುಟ್ಟ ಕಾಯ ನಮಗೇನು ಮಾಡಬಲ್ಲದು ಎಂಬುದನ್ನು ಲೆಕ್ಕ ಹಾಕಿ ಮಾತ್ರ ಊಹಿಸಬಹುದು. ಹಿಂದೆ 1908ರಲ್ಲಿ ಸೈಬೀರಿಯಾದ ತುಂಗಷ್ಕಾ ಎಂಬಲ್ಲಿ ಹೀಗೊಂದು ಆಘಾತ ಉಂಟಾಗಿ ಕಾಡು ನಾಶವಾಯಿತು.ಅದರ ಪೂರ್ವಾಪರಗಳು ನಮಗೆ ತಿಳಿದಿರಲಿಲ್ಲ. ಆದರೆ, ಮುಂದೆ ಪುಟ್ಟ ಕಾಯಗಳನ್ನು ಗುರುತಿಸಿ ಅವು ಭೂಮಿಯ ಮೇಲೆ ಬೀಳುವ ಸಾಧ್ಯತೆಯನ್ನು ಊಹಿಸುವ ಲೆಕ್ಕಗಳನ್ನು ಮಾಡುವ ಕ್ಷಮತೆ ಬೆಳೆಯಿತು.ಹೀಗೆ 30ರ ದಶಕದಲ್ಲಿ ಹರ್ಮಿಸ್ ಎಂಬ ಬಂಡೆ ಭೂಮಿಯ ಮೇಲೆ ಬಿದ್ದುದು ದಾಖಲಾಯಿತು. 1992ರಲ್ಲಿ ನ್ಯೂಯಾರ್ಕ್‌ನ ಪೀಕ್ ಸ್ಕಿಲ್ ಎಂಬಲ್ಲಿ ಪುಟ್ಟ ಬಂಡೆಯೊಂದು ಕಾರಿನ ಮೇಲೆ ಅಪ್ಪಳಿಸಿತ್ತು.

 

ತೀರಾ ಇತ್ತೀಚೆಗೆ ಆಫ್ರಿಕಾದ ಮರುಭೂಮಿಯ ಮೇಲೆ ಬಂಡೆ ಬೀಳುವುದನ್ನು ಮುಂಚಿತವಾಗಿ ತಿಳಿದು ಚಿತ್ರೀಕರಿಸುವ ಪ್ರಯತ್ನ ನಡೆಯಿತು. ಇವೆಲ್ಲವೂ ಸಣ್ಣ ಸಣ್ಣ ಬಂಡೆಗಳು. 400 ಮಿಟರ್ ಗಾತ್ರದವಲ್ಲ. ಆದ್ದರಿಂದ ರಡಾರ್ ಚಿತ್ರೀಕರಣ ಸಾಧ್ಯವಾಗಿರಲಿಲ್ಲ.

 

ಈಗ ನವೆಂಬರ್ 3ರಿಂದ 11ರವರೆಗೂ ಅದರ ಚಲನೆಯನ್ನು ದಾಖಲು ಮಾಡಿಕೊಳ್ಳುವ ಪ್ರಯೋಗಗಳು ನಡೆಯುತ್ತಿವೆ. ಪ್ರಪಂಚದಾದ್ಯಂತ  ಎಲ್ಲ ದೂರದರ್ಶಕಗಳೂ ಇದರ ವಿವರಗಳನ್ನು ಪಡೆಯಲಿವೆ. ಅದರ ಮೇಲ್ಮೈಯ ವಿವರಗಳನ್ನು 4ಮೀ ಗಿಂತ ಹೆಚ್ಚಿನ ಹಳ್ಳ ತಿಟ್ಟುಗಳನ್ನೂ ದಾಖಲಿಸುವ ಪ್ರಯತ್ನ ನಡೆಯಲಿದೆ.ಭೂಮಿಗೆ ಸಮೀಪ ಎಂದ ಮೇಲೆ ಚಂದ್ರನಿಗೂ ಸಮೀಪ ಹಾದು ಹೋಗಲೇಬೇಕಲ್ಲವೇ. ಅದನ್ನೂ ಲೆಕ್ಕ ಹಾಕಿ ತಿಳಿಯಲಾಗಿದೆ. ಸುಮಾರು ಎಂಟು ಗಂಟೆಗಳ ನಂತರ ಅದು 240,000 ಕಿಮೀ ಅಂತರದಿಂದ ಚಂದ್ರನನ್ನು ಹಾದು ಹೋಗುವುದು. ಆಗ ನಮಗೆ ಹಗಲು. ನೋಡುವುದು ಸಾಧ್ಯವಿಲ್ಲ.ಸೂರ್ಯನ ದಿಕ್ಕಿನಿಂದಲೇ ಅದು ಭೂಮಿಯನ್ನು ಹಾದು ಹೋಗುವುದರಿಂದ ಈ ಸಾಮೀಪ್ಯ ಹಗಲಿನ ಘಟನೆಯಾಗುವುದು. ಆದ್ದರಿಂದ ದೃಕ್ ದೂರದರ್ಶಕ ಅದನ್ನು ವೀಕ್ಷಿಸಲು ರಾತ್ರಿಯವರೆಗೂ ಕಾಯಬೇಕಾಗುವುದು. ಈ ನಡುವೆ ಅದರ ಜಾಡು ಬದಲಾಗುವುದೇ ಎಂಬುದನ್ನು ರೇಡಿಯೋ ದೂರದರ್ಶಕಗಳು ಮಾತ್ರ ತಿಳಿಸಿಕೊಡಬಲ್ಲವು.          

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry