ಆಗಬೇಕಾದ ಬರಕಾಮಗಾರಿ

ಬುಧವಾರ, ಜೂಲೈ 17, 2019
26 °C

ಆಗಬೇಕಾದ ಬರಕಾಮಗಾರಿ

Published:
Updated:

ಬರ ಪರಿಹಾರಕ್ಕೆ ಸರ್ಕಾರ ಸಬೂಬು ಹೇಳುವುದಕ್ಕಿಂತ ಈ ಕೆಲಸಗಳನ್ನು ಮಾಡುವುದು ತುರ್ತು ಅಗತ್ಯ.ಗ್ರಾಮ ಪಂಚಾಯತ್ ಮೂಲಕ ಜಾನುವಾರುಗಳಿಗೆ ಉಚಿತವಾಗಿ ಮೇವು ಕೊಡಬೇಕು ಮತ್ತು ಕುಡಿಯುವ ನೀರು ಪೂರೈಸಬೇಕು, ಉದ್ಯೋಗ ಖಾತ್ರಿ ಯೋಜನೆಯನ್ನು ಬರ ಪರಿಹಾರ ಕಾಮಗಾರಿ ಭಾಗವಾಗಿಯೇ ಜಾರಿ ಮಾಡಬೇಕು, ಬರ ಇರುವುದರಿಂದ ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರತಿ ದಿನ ಕೆಲಸ ಒದಗಿಸಬೇಕು, ಯಾವುದೇ ಮಿತಿ ಇರಬಾರದು, ಕುಡಿಯುವ ನೀರು ಪೂರೈಕೆಗೆ ವ್ಯಾಪಕವಾದ ಕ್ರಮ ಕೈಗೊಳ್ಳಬೇಕು, ನ್ಯಾಯ ಬೆಲೆ ಅಂಗಡಿಗಳ ಮೂಲಕ ಬಿ.ಪಿ.ಎಲ್. ಅಥವಾ ಎ.ಪಿ.ಎಲ್. ಎಂಬ ವ್ಯತ್ಯಾಸ ಎಣಿಸದೇ ಅಗತ್ಯ ಆಹಾರ ಧಾನ್ಯ, ವಸ್ತುಗಳನ್ನು ವಿತರಿಸಬೇಕು, ಸಾಲ ಮನ್ನಾ ವಿಶೇಷವಾಗಿ ಖಾಸಗಿ ಲೇವಾದೇವಿಗಾರರಿಂದ ಪಡೆದುಕೊಳ್ಳಲಾದ ಸಾಲಗಳಿಂದ ರೈತರನ್ನು ಮುಕ್ತಿಗೊಳಿಸಬೇಕು, ಬೆಳೆ ಹಾನಿಗೆ ಪರಿಹಾರವೆಂದು ನೀರಾವರಿ - ಎಕರೆಗೆ 10 ಸಾವಿರ ರೂ., ಒಣ ಬೇಸಾಯ - ಎಕರೆಗೆ 5 ಸಾವಿರ ರೂ. ಗಳನ್ನು ನೀಡಬೇಕು, ಬರ ಪ್ರದೇಶದ ಮಕ್ಕಳ ಶಿಕ್ಷಣ ಶುಲ್ಕ ಮನ್ನಾ ಮಾಡಬೇಕು. ಹೀಗಾದರೆ ಮಾತ್ರ ಬರಪೀಡಿತ ಜನತೆಗೆ ಒಂದಷ್ಟು ನ್ಯಾಯ ಒದಗಿಸದಂತಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry