ಆಗಸಕ್ಕೇರಿದ ಸುದ್ದಿಗಾರರು..

7

ಆಗಸಕ್ಕೇರಿದ ಸುದ್ದಿಗಾರರು..

Published:
Updated:

ಯಲಹಂಕ ವಾಯುನೆಲೆ: ಏರೊ ಇಂಡಿಯಾ ಕಾರ್ಯಕ್ರಮದ ಮೂರನೆಯ ದಿನವಾದ ಶುಕ್ರವಾರ ವಿವಿಧ ಮಾಧ್ಯಮಗಳ ಪ್ರತಿನಿಧಿಗಳೂ ಬಾನಂಗಳದಲ್ಲಿ ಸುಮಾರು ಒಂದು ತಾಸಿನ ಕಾಲ ಹಾರಾಟ ನಡೆಸಿದ  ಅನುಭವ  ಪಡೆದರು.

‘ಗ್ರಿಫೆನ್’ ಯುದ್ಧ ವಿಮಾನಗಳನ್ನು ತಯಾರಿಸುವ ಸ್ವೀಡನ್ ಮೂಲದ ಕಂಪೆನಿ ಸ್ಯಾಬ್ ಟೆಕ್ನಾಲಜಿಸ್ ಸಂಸ್ಥೆ ತನ್ನ ‘ಸ್ಯಾಬ್-2000’ ನಾಗರಿಕ ವಿಮಾನದಲ್ಲಿ ಸುಮಾರು 30 ಮಂದಿಯನ್ನು ಒಂದು ತಾಸಿನ ಕಾಲ ಆಕಾಶದಲ್ಲಿ ಸುತ್ತು ಹೊಡೆಸಿತು.

ಬೆಳಿಗ್ಗೆ ನಡೆದ ಯುದ್ಧ ವಿಮಾನಗಳ ಏರೋಬ್ಯಾಟಿಕ್ಸ್ ಪ್ರದರ್ಶನದ ನಂತರ ರನ್‌ವೇನಿಂದ ಜಿಗಿದ ಸ್ಯಾಬ್-2000 ವಿಮಾನ ಸುಮಾರು ಒಂದು ತಾಸಿನ ಕಾಲ ಬೆಂಗಳೂರು ನಗರದ ದಕ್ಷಿಣ ದಿಕ್ಕಿನಲ್ಲಿ ಹಾರಾಟ ನಡೆಸಿದ ನಂತರ ಯಲಹಂಕ ವಾಯುನೆಲೆಗೆ ಹಿಂದಿರುಗಿತು. 50 ಸೀಟುಗಳುಳ್ಳ ಈ ವಿಮಾನ ಭೂಮಟ್ಟದಿಂದ ಸುಮಾರು 31 ಸಾವಿರ ಅಡಿ ಎತ್ತರದಲ್ಲಿ ಹಾರಾಟ   ನಡೆಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry