ಆಗಸ್ಟಾ ವೆಸ್ಟ್‌ಲ್ಯಾಂಡ್‌: ಬ್ಯಾಂಕ್‌ ಖಾತರಿ ಮುಟ್ಟುಗೋಲಿಗೆ ಚಾಲನೆ

7

ಆಗಸ್ಟಾ ವೆಸ್ಟ್‌ಲ್ಯಾಂಡ್‌: ಬ್ಯಾಂಕ್‌ ಖಾತರಿ ಮುಟ್ಟುಗೋಲಿಗೆ ಚಾಲನೆ

Published:
Updated:

ನವದೆಹಲಿ: ವಾಯುಪಡೆಯ ಅತಿ ಗಣ್ಯರ ಬಳಕೆಗಾಗಿ ಹೆಲಿಕಾಪ್ಟರ್‌ ಪೂರೈ­­ಸುವ ಒಪ್ಪಂದ ರದ್ದುಪಡಿಸಿದ ಬೆನ್ನಲ್ಲೇ ರಕ್ಷಣಾ ಸಚಿವಾಲಯ, ಇಟಲಿಯ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪೆನಿ ನೀಡಿದ್ದ ಬ್ಯಾಂಕ್‌ ಖಾತರಿ ಮೊತ್ತವನ್ನು ಮುಟ್ಟು­ಗೋಲು ಹಾಕಿಕೊಳ್ಳಲು ಮುಂದಾಗಿದೆ. ರೂ.3,600 ಕೋಟಿ  ಮೊತ್ತದ ಹೆಲಿ­­ಕಾಪ್ಟರ್‌ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಆಗಸ್ಟಾ ವೆಸ್ಟ್‌­ಲ್ಯಾಂಡ್‌ ಕಂಪೆನಿ ಭಾರತ ಸರ್ಕಾರಕ್ಕೆ ರೂ.1800 ಕೋಟಿ ಮೊತ್ತದ ಬ್ಯಾಂಕ್‌ ಖಾತರಿ ನೀಡಿತ್ತು.ಭಾರತ ಸರ್ಕಾರ ಆಗಸ್ಟಾ ವೆಸ್ಟ್‌­ಲ್ಯಾಂಡ್‌ ಕಂಪೆನಿಗೆ ಒಪ್ಪಂದದ ಮೊತ್ತ­ವಾಗಿದ್ದ ರೂ.3,600ಕೋಟಿಯ ಶೇ­­ 40­­­ರಷ್ಟು ಹಣವನ್ನು ಮುಂಗಡ ರೂಪ­ದಲ್ಲಿ ನೀಡಿದೆ. ಇದೀಗ ವೆಸ್ಟ್‌ಲ್ಯಾಂಡ್‌ ಕಂಪೆನಿ ನೀಡಿದ್ದ ರೂ.1800 ಕೋಟಿ  ಬ್ಯಾಂಕ್‌ ಖಾತರಿ ಮೊತ್ತವನ್ನು ಮುಟ್ಟುಗೋಲು ಹಾಕಿ­ಕೊಳ್ಳುವ ಮೂಲಕ ಸ್ವಲ್ಪ ಪ್ರಮಾ­ಣದ ಹಣವನ್ನು ಮರಳಿ ಪಡೆಯಲು ಮುಂದಾಗಿದೆ.ಬೆಂಬಲಕ್ಕೆ ನಿಂತ ಬ್ರಿಟನ್‌ (ಲಂಡನ್‌ ವರದಿ): ಲಂಚ ಆರೋಪಕ್ಕೆ ಸಂಬಂಧಿಸಿ­ದಂತೆ ಇಟಲಿಯ ಆಗಸ್ಟಾ ವೆಸ್ಟ್‌­ಲ್ಯಾಂಡ್‌ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ವಾಸ್ತವಾಂಶ ಸಾಬೀತುಪಡಿಸಲು  ಸಮಯ ನೀಡಬೇಕಿತ್ತು ಎಂದು ಹೇಳುವ ಮೂಲಕ ಬ್ರಿಟನ್‌ ಸರ್ಕಾರ ಕಂಪೆನಿ­ಯನ್ನು ಸಮರ್ಥಿಸಿ­ಕೊಂಡಿದೆ.ಅತಿ ಗಣ್ಯರ ಹೆಲಿಕಾಪ್ಟರ್‌ ಖರೀದಿ ಸಂಬಂಧ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಜೊತೆಗಿನ ರೂ.3,600 ಕೋಟಿ ಒಪ್ಪಂದ­ವನ್ನು ಭಾರತ ಬುಧವಾರ ರದ್ದು­ಗೊಳಿಸಿದ ಬೆನ್ನಲ್ಲೇ ಆ ದೇಶದಿಂದ ಈ ಹೇಳಿಕೆ ಹೊರಬಿದ್ದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry