ಶನಿವಾರ, ಮೇ 15, 2021
24 °C

ಆಗಸ್ಟ್31ರವರೆಗೂ ಯಶಸ್ವಿನಿ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಳೆಯ ನೋಂದಣಿಯಲ್ಲಿಯೇ ಆಗಸ್ಟ್ 31ರ ವರೆಗೆ ಯಶಸ್ವಿನಿ ಯೋಜನೆ ಅಡಿ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದೆ ಎಂದು ಯಶಸ್ವಿನಿ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆರ್.ಎಂ.ನಟರಾಜ್ `ಪ್ರಜಾವಾಣಿ'ಗೆ ತಿಳಿಸಿದರು.ಯೋಜನೆಗೆ ಸದಸ್ಯರಾಗಿದ್ದವರ 2012-13ನೇ ಸಾಲಿನ ಸದಸ್ಯತ್ವ ನವೀಕರಣಕ್ಕೆ ಮೇ 31 ಕಡೆಯ ದಿನಾಂಕವಾಗಿತ್ತು. ಸದಸ್ಯತ್ವದ ನವೀಕರಣಕ್ಕೆ ಸರ್ಕಾರದಿಂದ ಯಾವುದೇ ಆದೇಶ ಇರದಿದ್ದ ಕಾರಣ ನವೀಕರಣ ಹಾಗೂ ಹೊಸ ನೋಂದಣಿ ಪ್ರಕ್ರಿಯೆ ಕೈಗೊಂಡಿರಲಿಲ್ಲ. ಇದರಿಂದ ತುರ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಿದ್ದವರು ಆತಂಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಗಸ್ಟ್ 31ರ ವರೆಗೆ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.ಹಳೇ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯರ ನೋಂದಣಿ ಪ್ರಕ್ರಿಯೆ ಜುಲೈ 15ರಿಂದ ಆರಂಭವಾಗಲಿದೆ. ಹಳೇ ಸದಸ್ಯರು ಆಗಸ್ಟ್ 31ರ ಒಳಗೆ ನವೀಕರಣ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಹೊಸ ಸದ್ಯರ ನೋಂದಣಿಗೆ ಅ.31 ಅಂತಿಮ ದಿನಾಂಕವಾಗಿರುತ್ತದೆ. ಸದಸ್ಯತ್ವದ ಶುಲ್ಕ ್ಙ 210  ಎಂದು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.