ಶುಕ್ರವಾರ, ಅಕ್ಟೋಬರ್ 18, 2019
27 °C

ಆಗುಂಬೆಗೆ ಸೈಕಲ್ ಯಾತ್ರೆ

Published:
Updated:

ಬೆಂಗಳೂರು: ಯುವಕರು ಸೇನೆಗೆ ಸೇರುವಂತೆ ಹುರಿದುಂಬಿಸಲು ಹಾಗೂ ಸಾಹಸ ಮನೋಭಾವ ಬೆಳೆಸುವ ಸಲುವಾಗಿ ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬೆಂಗಳೂರಿನಿಂದ ಆಗುಂಬೆಗೆ ಮಂಗಳವಾರ ಸೈಕಲ್ ಯಾತ್ರೆ ಆರಂಭಿಸಿದರು.ಎನ್‌ಸಿಸಿ ಕೆಡೆಟ್‌ಗಳೂ ಆಗಿರುವ ವಿ.ವಿ.ಯ ಹನ್ನೆರಡು ವಿದ್ಯಾರ್ಥಿಗಳು ಯಾತ್ರೆ ಹೊರಟರು. ನಗರದ ಜೆ.ಸಿ.ರಸ್ತೆಯಿಂದ ಆರಂಭವಾದ ಯಾತ್ರೆಗೆ ರಾಜ್ಯ ಎನ್‌ಸಿಸಿ ಬೆಟಾಲಿಯನ್ ಗ್ರೂಪ್ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ಅಲೋಕ್ ಗುಹಾ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.`ಕಾಳಿಂಗ ಸರ್ಪಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಮಹಿಳಾ ಸಬಲೀಕರಣವನ್ನು ಉತ್ತೇಜಿಸುವುದು. ಸೇನೆಯ ಮಹತ್ವವನ್ನು ತಿಳಿಸಿಕೊಡುವುದು, ಯುವಕರಲ್ಲಿ ಸಾಹಸ ಮನೋಭಾವ ಬೆಳೆಸುವುದು ಯಾತ್ರೆಯ ಉದ್ದೇಶ~ ಎಂದು ವಿದ್ಯಾರ್ಥಿ ರೋಹಿತ್ ಹೇಳಿದರು. ಈ ಜಾಥಾ ಜ.18ಕ್ಕೆ ಮುಕ್ತಾಯವಾಗಲಿದೆ. ವಿ.ವಿ ಕುಲಪತಿ ಡಾ.ಎನ್.ಸುಂದರ್‌ರಾಜನ್, ಪಿಯುಸಿ ಶಿಕ್ಷಣ ವಿಭಾಗದ ನಿರ್ದೇಶಕ  ಡಾ.ಬಿ.ಟಿ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

Post Comments (+)