ಆಗುಂಬೆಯಲ್ಲಿ 11 ಸೆಂ.ಮೀ ಮಳೆ

7

ಆಗುಂಬೆಯಲ್ಲಿ 11 ಸೆಂ.ಮೀ ಮಳೆ

Published:
Updated:

ಬೆಂಗಳೂರು: ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿಯಲ್ಲಿ ನೈರುತ್ಯ ಮುಂಗಾರು ಚುರುಕು­ಗೊಂಡಿದೆ. ಉತ್ತರ ಒಳನಾಡಿನ ಹಲವು ಪ್ರದೇಶಗಳು ಮತ್ತು  ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದೆ.ಭಾಗಮಂಡಲ, ಆಗುಂಬೆಯಲ್ಲಿ 11 ಸೆಂ.ಮೀ. ಮಳೆಯಾಗಿದೆ. ಕೊಟ್ಟಿಗೆಹಾರ 10, ಸಕಲೇಶಪುರ, ಪೊನ್ನಂಪೇಟೆ 9, ಮೂಡಿಗೆರೆ 8, ಬಾಳ್ಳುಪೇಟೆ 7, ಮಾಣಿ, ಬೆಳ್ತಂಗಡಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಉಡುಪಿ 6, ಬಂಟ್ವಾಳ, ಕಾರ್ಕಳ, ಸಿದ್ದಾಪುರ, ಹುಮನಾಬಾದ್‌ 5,ಮೂಡುಬಿದಿರೆ, ಉಪ್ಪಿನಂಗಡಿ, ಪಣಂ­ಬೂರು, ಹೊನ್ನಾವರ, ಗೋಕರ್ಣ, ಮಡಿಕೇರಿ, ನಾಪೋಕ್ಲು, ಕಳಸ, ಕಮ್ಮರಡಿ 4, ಮಂಗಳೂರು ವಿಮಾನ ನಿಲ್ದಾಣ, ಮಂಗಳೂರು, ಪುತ್ತೂರು, ಕೋಟ, ಕೊಲ್ಲೂರು, ಇಂಡಿ, ಚಿಟಗುಪ್ಪ, ಶೃಂಗೇರಿ, ತೀರ್ಥಹಳ್ಳಿ 3, ಮಾದಾಪುರ, ಸೋಮವಾರಪೇಟೆ, ಶಿರಾಳಕೊಪ್ಪ, ಕೊಪ್ಪ, ಆಲೂರು, ಹಾಸನ 2 ಸೆಂ.ಮೀ. ಮಳೆಯಾಗಿದೆ.ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವೆಡೆ  ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry