ಆಗ್ಲೇ ಇಲ್ಲ

7

ಆಗ್ಲೇ ಇಲ್ಲ

Published:
Updated:

ಮಿಕಿ- ಮಿಕಿ

`ನಮ್ ಬೀದೀಲಿ ನಾಯಿಗಳ ಕಾಟ, ಅವುಗಳ ಬೊಗಳಾಟದಿಂದ ನಿದ್ರೇನೇ ಬರ‌್ತಾ ಇಲ್ಲ~ ಅಂತ ಗುಂಡ ಡಾಕ್ಟರ್ ಹತ್ರ ಬೇಜಾರು ತೋಡ್ಕೊಂಡ. ಅವ್ರ ಒಂದಷ್ಟು ಮಾತ್ರೆಗಳನ್ನು ಕೊಟ್ಟು `ತಗೋ ನಿನ್ನ ಸಮಸ್ಯೆ ಪರಿಹಾರವಾಗುತ್ತೆ~ ಅಂತ ಹೇಳಿ ಕಳುಹಿಸಿದ್ರು.ಮೂರು ದಿನ ಬಿಟ್ಟು ಮತ್ತೆ ಡಾಕ್ಟರ್ ಹತ್ರ ಬಂದ ಗುಂಡನ ಕಣ್ಣೆಲ್ಲಾ ಕೆಂಪು ಕೆಂಪು, ನಿದ್ದೆ ಮಾಡಿದ ಕುರುಹೇ ಇರ‌್ಲಿಲ್ಲ. ಡಾಕ್ಟರು ಆತಂಕದಿಂದ `ಯಾಕೆ ಮಾತ್ರೆ ಏನ್ ಮಾಡ್ದೆ~ ಅಂತ ಕೇಳಿದ್ರು. `ಅಯ್ಯೋ ರಾತ್ರಿ ಎಲ್ಲ ಕಣ್ಣು ಮುಚ್ದೆ ಕಾಯ್ದು ಕಷ್ಟಾಪಟ್ಟು ನಾಯಿಗಳ್ನೇನೋ ಹಿಡ್ದೆ, ಆದ್ರೆ ಏನ್ಮಾಡ್ಲಿ ಕೊನೆಗೂ ಅವುಗಳ್ಗೆ ಮಾತ್ರೆ ನುಂಗಿಸಕ್ಕೆ ಮಾತ್ರ ನನ್ ಕೈಲಿ ಆಗ್ಲೇ ಇಲ್ಲ ನೋಡಿ~ ಅಂದ.

                                     

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry