ಶುಕ್ರವಾರ, ಜೂನ್ 25, 2021
29 °C

ಆಗ ಅದು – ಈಗ ಇದು: ಯಾವುದು ಸರಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಪಕ್ಷದಿಂದ ಗೆದ್ದು ಸಂಸದೆಯಾದಾಗ  ಬಿಜೆಪಿಯ ತತ್ವ ಸಿದ್ಧಾಂತ ಗಳನ್ನು ವಿರೋಧಿಸಿ  ಪುಂಖಾನುಪುಂಖವಾಗಿ ಭಾಷಣ ಬಿಗಿಯುತ್ತಿದ್ದ ತೇಜಸ್ವಿನಿ ಗೌಡ ಅವರು ಈ ಚುನಾವಣೆಯಲ್ಲೂ ವಾಚಾಳಿತನವನ್ನು ನಿಲ್ಲಿಸಿಲ್ಲ. ಆದರೆ, ಅವರು ಟೀಕಿಸುತ್ತಿರುವ ಸಿದ್ಧಾಂತ ಮಾತ್ರ ಬದಲಾಗಿದೆ. ಈ ಬಾರಿ ಅವರಿಗೆ ಕಾಂಗ್ರೆಸ್‌ ಸಿದ್ಧಾಂತ ಅಪಥ್ಯವಾಗಿ,   ಬಿಜೆಪಿ ಸಿದ್ಧಾಂತದ ಮೇಲೆ ಏಕಾಏಕಿ ಒಲವು ಬೆಳೆದಿದೆ. ಬಿಜೆಪಿ ಮಂದಿಗೂ ಆಕೆ ಈ ಹಿಂದೆ ತಮ್ಮನ್ನು ಹಿಗ್ಗಾ ಮುಗ್ಗಾ ಬೈಯುತ್ತಿದ್ದುದು ಮರೆತೇ ಹೋಗಿದೆ.ಮಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಅವರ ಬಾಯಲ್ಲೇ ಒಂದು ಮಾತು ಹೊರಬಿತ್ತು, ‘ಆವಾಗ ಅದು ಸರಿ; ಈವಾಗ ಇದು ಸರಿ’...!ಇನ್ನೊಂದೆಡೆ, ಪಾಲಿಕೆ ಚುನಾವಣೆ ವೇಳೆ ನೀಡಿದ್ದ ಸ್ವಯಂಘೋಷಿತ ಆಸ್ತಿ ತೆರಿಗೆ ಹೆಚ್ಚಿಸುವುದಿಲ್ಲ ಎಂಬ ಭರವಸೆಯ ಬಗ್ಗೆ ಕಾಂಗ್ರೆಸ್‌ ನಾಯಕರು ಜಾಣ ಮರೆವು ಪ್ರದರ್ಶಿಸಿದ್ದಾರೆ. ಆಸ್ತಿ ತೆರಿಗೆ ಹೆಚ್ಚಳದ ನಡಾವಳಿಗೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಶಾಸಕದ್ವಯರಾದ ಮೊಯಿದ್ದೀನ್‌ ಬಾವ, ಜೆ.ಆರ್‌.ಲೋಬೊ ಸಹಿ ಹಾಕಿದ್ದಾರೆ. ‘ಚುನಾವಣೆ ಬಂದಾಗ ಈ ರೀತಿ ಭರವಸೆ ನೀಡಿದ್ದೂ ಸರಿ, ಈಗ ಆಸ್ತಿ ತೆರಿಗೆ ಹೆಚ್ಚಿಸಿದ್ದೂ ಸರಿ’.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.