ಬುಧವಾರ, ನವೆಂಬರ್ 20, 2019
27 °C

ಆಘಾತಕಾರಿ ಸುದ್ದಿ!

Published:
Updated:

ಮಾಜಿ ಸಚಿವರುಗಳ ಮತ್ತು ಶಾಸಕರುಗಳ ಆಸ್ತಿ ವಿವರಗಳನ್ನು ಬಹಿರಂಗಗೊಳಿಸಲಾಗಿದೆ. 2008 ಕ್ಕೆ ಹೋಲಿಸಿದರೆ 2013 ರಲ್ಲಿ ಇವರುಗಳ ಆಸ್ತಿ ದ್ವಿಗುಣಗೊಂಡಿದೆ. ಎಲ್ಲರೂ ಅಭಿವದ್ಧಿ ಹೊಂದಿರುತ್ತಾರೆ ಅಷ್ಟೆ ಎನ್ನುವಿರಾ? ಇದು ಕಟು ಸತ್ಯ ಇದನ್ನು ಯಾರು ಅಲ್ಲಗಳೆಯುವಂತಿಲ್ಲ.ಆದರೂ ಒಂದು ವಿಚಿತ್ರವೆಂದರೆ 8 ಶಾಸಕರುಗಳ ಆಸ್ತಿ ಮೌಲ್ಯ 2008 ಕ್ಕೆ ಹೋಲಿಸಿದರೆ ಕಡಿಮೆಯಾಗಿದೆ, ಮತ್ತೊಂದು ಅಘಾತಕಾರಿಯಾದ ವಿಷಯವೇನೆಂದರೆ ಪ್ರಸ್ತುತ ಉನ್ನತ ಶಿಕ್ಷಣ ಸಚಿವರ ಆಸ್ತಿ 2008ಕ್ಕೆ ಹೋಲಿಸಿದರೆ 2013 ರಲ್ಲಿ ಶೇ 50 ಕಡಿಮೆಯಾಗಿದೆ.  ಇದೊಂದು ಆತಂಕಕಾರಿ ಸುದ್ದಿಯೆನಿಸುವುದಿಲ್ಲವೇ. ಸಾಮಾನ್ಯ ಪಾಲಿಕೆ ಸದಸ್ಯರೇ ವಿಧಾನಸಭೆ ಚುನಾವಣೆಗೆ ನಿಲ್ಲಲ್ಲು ನಾ ಮುಂದು ತಾಮುಂದು ಎನ್ನುತ್ತಿರುವಾಗ ಈ 8 ಶಾಸಕರ ವಿಷಯ ಕೇಳಿ ದಿಗ್ಬ್ರಮೆಯಾಗದಿರುವುದೇ?

ಪ್ರತಿಕ್ರಿಯಿಸಿ (+)