ಶುಕ್ರವಾರ, ಜೂನ್ 18, 2021
23 °C

ಆಚಾರ್ಯದಲ್ಲಿ ರಂಗಿನ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಲೇಜು ತುಂಬೆಲ್ಲಾ ಹಬ್ಬದ ವಾತಾವರಣ. ಇಡೀ ಕಾಲೇಜು ಕ್ಯಾಂಪಸ್ ಬಲೂನ್‌ಗಳಿಂದ ಅಲಂಕೃತಗೊಂಡಿತ್ತು. ನಗರದ ವಿವಿಧೆಡೆಯಿಂದ ಸುಮಾರು 30,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಆಗಮಿಸಿದ್ದರು. ಇದೆಲ್ಲಾ ಕಂಡುಬಂದಿದ್ದು ಆಚಾರ್ಯ ಕಾಲೇಜು ಆಯೋಜಿಸಿದ್ದ `ಆಚಾರ್ಯ ಹಬ್ಬ~ದಲ್ಲಿ.ಪ್ರತಿವರ್ಷದಂತೆ ಈ ವರ್ಷವೂ ಆಚಾರ್ಯ ಕಾಲೇಜು ತನ್ನ ಸಾಂಸ್ಕೃತಿಕ ಕಾರ್ಯಕ್ರಮ `ಆಚಾರ್ಯ ಹಬ್ಬ~ವನ್ನು ಹಮ್ಮಿಕೊಂಡಿತ್ತು. ಮಾರ್ಚ್ 15ರಿಂದ 17ರವರೆಗೆ ಮೂರು ದಿನಗಳ ಕಾಲ ಹಬ್ಬ ಸಂಭ್ರದಿಂದ ನಡೆಯಿತು.ಬೆಂಗಳೂರಿನ 40 ಕಾಲೇಜುಗಳಿಂದ ಸುಮಾರು 30,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಭಾ ಪ್ರದರ್ಶನ ನೀಡಿದರು. ಬೆಂಗಳೂರಿಗರು ಮಾತ್ರವಲ್ಲದೆ ತಾಂಜೇನಿಯಾ, ಇರಾಕ್, ಭೂತಾನ್, ಚೀನಾ, ಶ್ರೀಲಂಕಾ, ಕಾಂಗೊ, ಆಫ್ಘಾನಿಸ್ತಾನ, ದಕ್ಷಿಣ ಕೊರಿಯಾ ಹೀಗೆ ವಿವಿಧ ದೇಶಗಳ ಮೂಲದ ವಿದ್ಯಾರ್ಥಿಗಳೂ ಪಾಲ್ಗೊಂಡು ತಮ್ಮ ವಿಭಿನ್ನ ಸಂಸ್ಕೃತಿಯನ್ನು ಪರಿಚಯಿಸಿದರು.ಆಚಾರ್ಯ ಹಬ್ಬದ ಉದ್ಘಾಟನಾ ಸಮಾರಂಭವೇ ರಂಗುರಂಗಾಗಿತ್ತು. ಬಾಲಿವುಡ್ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಬಲೂನುಗಳನ್ನು ಹಾರಿಬಿಡುತ್ತಾ ಹಬ್ಬವನ್ನು ಆರಂಭಿಸಿದರು. ವಿದ್ಯಾರ್ಥಿಗಳೆಲ್ಲಾ ಸಾಂಪ್ರದಾಯಿಕ ದಿರಿಸು ತೊಟ್ಟು ಸಾಂಸ್ಕೃತಿಕ ದಿನಕ್ಕೂ ಚಾಲನೆ ನೀಡಿದರು.ಮಾಧ್ಯಮಗಳಿಗೆಂದು 17 ತಂಡಗಳಿದ್ದ `ಮೀಡಿಯಾ ಕಪ್~ ಕ್ರಿಕೆಟ್ ಟೂರ್ನಿಯನ್ನು ಆಚಾರ್ಯ ಸಂಸ್ಥೆ ಆಯೋಜಿಸಿದ್ದು ಈ ಬಾರಿಯ ವಿಶೇಷವಾಗಿತ್ತು. ಒಟ್ಟು 33 ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿನ ತಾಂತ್ರಿಕತೆ, ಕ್ರಿಯಾಶೀಲತೆ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿತ್ತು.ರಂಗೋಲಿ, ಟ್ರೆಶರ್ ಹಂಟ್, ಮ್ಯಾಡ್ ಆಡ್ಸ್, ಫನ್ ಸ್ಪೀಕ್, ಸ್ಟ್ರೀಟ್ ಪ್ಲೇ, ರಾಕ್ ಶೋ, ಸಮೂಹ ನೃತ್ಯ, ಸಮೂಹ ಗಾಯನ, ಡ್ಯೂಯೆಟ್ ಡ್ಯಾನ್ಸ್, ವೆಜಿಟೆಬಲ್ ಕಾರ್ವಿಂಗ್, ಟಗ್ ಆಫ್ ವಾರ್, ಫೈರ್‌ಲೆಸ್ ಕುಕಿಂಗ್, ರಾಗ್ಸ್‌ಟು ರಿಚಸ್, ಆಚಾರ್ಯಾಸ್ ಗಾಟ್ ಟ್ಯಾಲೆಂಟ್, ಫೇಸ್ ಪೇಂಟಿಂಗ್ ಮೊದಲಾದ ಮನರಂಜನಾತ್ಮಕ ಸ್ಪರ್ಧೆಗಳು ಮಾತ್ರವಲ್ಲದೆ ಗಣಿತ ರಸಪ್ರಶ್ನೆ,ಆನ್ ಸ್ಪಾಟ್ ಪ್ರೋಗ್ರಾಮಿಂಗ್, ವೆಬ್ ಡಿಸೈನಿಂಗ್, ಕಂಪ್ಯೂಟರ್ ಗೇಮಿಂಗ್, ಮಾರ್ಕೆಟಿಂಗ್, ಬೆಸ್ಟ್ ಮ್ಯಾನೇಜರ್, ಕ್ರಿಯೇಟಿವ್ ಅಡ್ವರ್‌ಟೈಸ್‌ಮೆಂಟ್, ಬಿಸಿನೆಸ್ ಕ್ವಿಜ್, ಫೋಟೊಗ್ರಫಿಯಂತಹ ತಾಂತ್ರಿಕ ಕ್ರಿಯಾಶೀಲತೆ ತೋರುವ ಸ್ಪರ್ಧೆಗಳೂ ನಡೆದವು.`ಮಿಸ್ಟರ್~ ಅಂಡ್ `ಮಿಸ್ ಹಬ್ಬ~ ಎಂಬ ಬಿರುದುಗಳನ್ನೂ ಇಬ್ಬರು ವಿದ್ಯಾರ್ಥಿಗಳಿಗೆ ನೀಡಲಾಯಿತು. ಆಚಾರ್ಯ ಹಬ್ಬದ ಸಲುವಾಗಿ ಊಟದ ವ್ಯವಸ್ಥೆಯನ್ನು ಮಂತ್ರಿ ಮತ್ತು ಫೋರಂ ಮಾಲ್‌ಗಳಲ್ಲಿ ಮಾಡಲಾಗಿತ್ತು. ಹಬ್ಬದ ಮೊದಲ ದಿನ ಕನ್ನಡ ಚಲನಚಿತ್ರ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಆಗಮಿಸಿ ಯುವಜನತೆಯೊಂದಿಗೆ ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದ  ಅನುಭವಗಳನ್ನು ಹಂಚಿಕೊಂಡರು.ಎರಡನೇ ದಿನ ನಿರ್ದೇಶಕ ಮಹೇಶ್ ಸುಖಧರೆ, ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆಚಾರ್ಯ ಹಬ್ಬದ ಅಂತಿಮ ದಿನ ನಟ, ನಿರ್ದೇಶಕ ಪ್ರೇಮ್, ಶ್ರೇಯಾ ದಿನಕರನ್ ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದರು.ಇವರೊಂದಿಗೆ ಬೆಂಗಳೂರಿನ ಬೀಟ್ ಗುರೂಸ್, ಕಾಶ್ಮೀರದ ಪರ್ವೀಜ್ ಬಂದ್ ವಿಶೇಷ ಕಾರ್ಯಕ್ರಮಗಳೊಂದಿಗೆ ಸ್ಪರ್ಧೆ ಮುಕ್ತಾಯಗೊಂಡಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.