ಆಚಾರ್ಯ ಕಾಲೇಜಿನಲ್ಲಿ ಐಟಿ ಉತ್ಸವ

7

ಆಚಾರ್ಯ ಕಾಲೇಜಿನಲ್ಲಿ ಐಟಿ ಉತ್ಸವ

Published:
Updated:

ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಗ್ರಾಜುವೇಟ್ ಸ್ಟಡೀಸ್‌ನ ಬಿಸಿಎ ವಿಭಾಗ ಏರ್ಪಡಿಸಿದ್ದ ಎರಡು ದಿನಗಳ ಐಟಿ ಉತ್ಸವ `ಟೆಕ್‌ಮೈಂಡ್ಸ್ ಫೀಸ್ಟಾ-2012~ದಲ್ಲಿ 40 ಕಾಲೇಜುಗಳ 350ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಕೌಂಟರ್ ಸ್ಟ್ರೈಕ್, ಇಮೇಜ್ ಮೇನಿಯಾ, ಐಟಿ ಕ್ವ್ಿ, ಕೋಡಿಂಗ್ ಆಂಡ್ ಡಿಬಗ್ಗಿಂಗ್, ಎನ್‌ಎಫ್‌ಎಸ್ ಹಾಗೂ ವೆಬ್‌ಡಿಸೈನಿಂಗ್ ಸೇರಿದಂತೆ 6 ಸ್ಪರ್ಧೆಗಳನ್ನು ನಡೆಸಲಾಯಿತು.ಗೇಮಿಂಗ್ ಸಾಫ್ಟ್‌ವೇರ್‌ನಲ್ಲಿ ಎದುರು ತಂಡದ ಪೈಪೋಟಿಗೆ ಉತ್ತರ ನೀಡುವಲ್ಲಿ ಸಫಲರಾದ ವಿವೇಕಾನಂದ ಪದವಿ ಕಾಲೇಜಿನ ತಿಲಕ್, ಅಜಯ್, ಮಧುಗೌಡ, ಶ್ರೀರಾಮ್ ಕೌಂಟರ್ ಸ್ಟ್ರೈಕ್ ಪ್ರಶಸ್ತಿಯನ್ನು ಪಡೆದುಕೊಂಡರು. 21 ತಂಡಗಳು ಪಾಲ್ಗೊಂಡಿದ್ದ ನೀಡ್ ಫಾರ್ ಸ್ಪೀಡ್ (ಎನ್‌ಎಫ್‌ಸಿ) ಸ್ಪರ್ಧೆಯಲ್ಲಿ ಅದೇ ಕಾಲೇಜಿನ ಮಂಜುನಾಥ್ ಎಸ್.ಪ್ರಶಸ್ತಿ ಗಳಿಸಿದರು.ನಿರ್ದಿಷ್ಟ ಉತ್ಪನ್ನಕ್ಕೆ ವೆಬ್‌ಪೇಜ್ ವಿನ್ಯಾಸಗೊಳಿಸುವ `ಇಮೇಜ್ ಮೆನಿಯಾ~ದಲ್ಲಿ 30 ತಂಡಗಳು ಪಾಲ್ಗೊಂಡಿದ್ದವು. ಕ್ರಿಸ್ಟು ಜಯಂತಿ ಕಾಲೇಜಿನ ಆಂಟನಿ ಹಾಗೂ ವಿನಯ್ ಕುಮಾರ್ ಪ್ರಥಮ ಸ್ಥಾನ ಪಡೆದರು.

 

ಎಲ್ಲಾ 40 ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಐಟಿ ಕ್ವ್ಿ ರೋಮಾಂಚಕಾರಿಯಾಗಿತ್ತು. ಕೊನೆಯ ಹಂತಕ್ಕೆ ಆರು ತಂಡಗಳು ಆಯ್ಕೆಯಾದರೂ ಕ್ರೈಸ್ಟ್ ವಿವಿಯ ರಾಘವ್, ಪ್ರಶಾಂತ್, ರವಿ, ಸುಧಾಂಶು ಶರ್ಮ ಪ್ರಶಸ್ತಿ ಪಡೆಯುವಲ್ಲಿ ಸಫಲರಾದರು.ಉತ್ಸವದುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರಿಸ್ಟು ಜಯಂತಿ ಕಾಲೇಜು ರೋಲಿಂಗ್ ಟ್ರೋಫಿ `ಟೆಕ್‌ಮೈಂಡ್ಸ್ ಫೀಸ್ಟಾ-2012~ಯನ್ನು ಪಡೆದುಕೊಂಡಿತು. ಬಿಸಿಎ ವಿಭಾಗದ ಮುಖ್ಯಸ್ಥ ಬಿಜು ಕೆ.ಬಾಲನ್ `ರಾಜ್ಯದೆಲ್ಲೆಡೆಯಿಂದ ಅತ್ಯುತ್ಸಾಹಿ ವಿದ್ಯಾರ್ಥಿಗಳು ಎರಡು ದಿನದ ಐಟಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ ಎಂಬುದು ಸಂತಸದ ವಿಷಯ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry