ಆಚಾರ್ಯ ನಿಧನಕ್ಕೆ ಗಣ್ಯರ ಸಂತಾಪ

7

ಆಚಾರ್ಯ ನಿಧನಕ್ಕೆ ಗಣ್ಯರ ಸಂತಾಪ

Published:
Updated:

ಹುಬ್ಬಳ್ಳಿ: ರಾಜ್ಯ ಉನ್ನತ ಶಿಕ್ಷಣ, ಯೋಜನೆ ಮತ್ತು ಸಾಂಖ್ಯಿಕ  ಧಾರ್ಮಿಕ ದತ್ತಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾಗಿದ್ದ ಡಾ. ವಿ.ಎಸ್. ಆಚಾರ್ಯ ಅವರ ನಿಧನಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.ವೈದ್ಯಕೀಯ, ಶಿಕ್ಷಣ, ಗೃಹ ಹಾಗೂ ಉನ್ನತ ಶಿಕ್ಷಣದಂತಹ ಮಹತ್ವದ ಖಾತೆಗಳನ್ನು ನಿಭಾಯಿಸಿ ಆ ಇಲಾಖೆಗಳಲ್ಲಿ ಅನೇಕ ಸುಧಾರಣೆ ಗಳನ್ನು ಜಾರಿಗೆ ತಂದರು. ಅವರದು ಸರಳ ಮತ್ತು ಸಜ್ಜನಿಕೆಯಿಂದ ಕೂಡಿದ ವ್ಯಕ್ತಿತ್ವ ಎಂದು ಅವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ. 

 

ಹಾಲಹರವಿ ಸಂತಾಪ:  ಆಚಾರ್ಯ ನಿಧನದಿಂದ ಹಿರಿಯ ನಾಯಕರನ್ನು ಕಳೆದುಕೊಂಡಂತಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೂರ್ವ ಮೀಸಲು ಕ್ಷೇತ್ರದ ಶಾಸಕ ವೀರಭದ್ರಪ್ಪ ಹಾಲಹರವಿ ಜೊತೆಗೆ ಹುಡಾ ಅಧ್ಯಕ್ಷ ದತ್ತಾ ಡೋರ್ಲೆ ಸಂತಾಪ ಸೂಚಿಸಿದ್ದಾರೆ.ಶಾಸಕಿ ದುಃಖ: ರಾಜ್ಯದಲ್ಲಿ ಅಧಿ ಕಾರದ ಚುಕ್ಕಾಣಿ ಹಿಡಿಯುವಲ್ಲಿ ಆಚಾರ್ಯರು ಪ್ರಮುಖ ಪಾತ್ರ ವಹಿಸಿ ್ದದರು. ಅವರ ನಿಧನದಿಂದಾಗಿ ರಾಜ್ಯ ರಾಜಕಾರಣ ಬಡವಾಗಿದೆ ಎಂದು ಶಾಸಕಿ ಸೀಮಾ ಮಸೂತಿ ದುಃಖ ವ್ಯಕ್ತಪಡಿಸಿದ್ದಾರೆ.ಸಂತಾಪ ಸಭೆ:
ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜ ಬಾಂಧ ವರು ಇಲ್ಲಿಯ ದೇಶಪಾಂಡೆನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಸಂತಾಪ ಸೂಚಕ ಸಭೆ ನಡೆಸಿದರು.ಸಮಾಜದ ಅಧ್ಯಕ್ಷರಾದ ಶ್ರೀಕಾಂತ ಕೆಮ್ತೂರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.ಎಚ್.ಕೆ. ಪಾಟೀಲ: ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎಚ್.ಕೆ. ಪಾಟೀಲ ಅವರು ಆಚಾರ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.ಬಿಜೆಪಿ ಶ್ರದ್ಧಾಂಜಲಿ: ದೇಶಪಾಂಡೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಶ್ರದ್ಧಾಂಜಲಿ ಸಭೆ ನಡೆಯಿತು. ಹು-ಧಾ ಪೂರ್ವ ವಿಧಾನ ಸಭಾ ಅಧ್ಯಕ್ಷ ಶಂಕ್ರಪ್ಪ ಛಬ್ಬಿ, ಪ್ರಧಾನ ಕಾರ್ಯದರ್ಶಿ ಸತೀಶ ಶೇಜವಾಡಕರ, ಶಿವು ಮೆಣಸಿನಕಾಯಿ, ಮೋಹನ ಲಾಲ್ ಜೈನ್, ವಿಠಲ ಬ್ಯಾಹಟ್ಟಿ, ಕಿಟ್ಟು ಬಿಜವಾಡ, ಗುರುಸಿದ್ಧನಗೌಡ ಪಾಟೀಲ, ಶೋಭಾ ನಾಕೋಡ, ರಾಜಶೇಖರ ಕಡಕೋಳ, ಮುಸ್ತಾಕ್ ಕುಂಬಿ, ಶೇಖಣ್ಣ ಕಳ್ಳಿಮಠ, ಪ್ರಭು ನವಲಗುಂದ, ರಂಗನಾಯಕ, ತಿಪ್ಪಣ್ಣ ಪಟ್ಟಣ, ವಾಸು ಸುಳ್ಳದ, ಗೋಪಾಲ ಅರಸಿದ್ದ, ಶಿವಾಜಿ ಶೆಟ್ಟರ, ಜಗದೀಶ ಬುಳ್ಳಣ್ಣವರ, ದೀಪಕ್ ಮೆಹರವಾಡೆ, ಪ್ರಶಾಂತ ರಾಯ್ಕರ, ಜಗದೀಶ ಕಂಬಳಿ ಭಾಗವಹಿಸಿದ್ದರು.ಬ್ರಾಹ್ಮಣ ಸಂಘದ ಕಂಬನಿ: ಆಚಾರ್ಯರ ನಿಧನಕ್ಕೆ ಧಾರವಾಡ ಜಿಲ್ಲಾ ಬ್ರಾಹ್ಮಣ ಸಂಘ ಕಂಬನಿ ಮಿಡಿದಿದೆ. ಸಂತಾಪ ಸೂಚಕ ಸಭೆ ಅಧ್ಯಕ್ಷತೆ ಯನ್ನು ಎಂ.ಬಿ.ನಾತು ಅಧ್ಯಕ್ಷತೆ ವಹಿಸಿದ್ದರು.   ಪದಾಧಿಕಾರಿ ಗಳಾದ ವಸಂತ ನಾಡ ಜೋಶಿ, ಮುರಳಿ ಕರ್ಜಗಿ, ರಾಜಾ ದೇಸಾಯಿ, ಡಿ.ಪಿ. ಪಾಟೀಲ ಮಾತನಾಡಿದರು.ಕೆಸಿಸಿಐ: ಕರ್ನಾಟಕ ವಾಣಿಜ್ಯೋ ದ್ಯಮ ಸಂಸ್ಥೆ ಅಧ್ಯಕ್ಷ ಎನ್.ಪಿ. ಜವಳಿ, ಉಪಾಧ್ಯಕ್ಷರಾದ ವಸಂತ ಲದವಾ, ಅಂದಾನಪ್ಪ ಸಜ್ಜನರ, ಮಹೇಂದ್ರ ಲದ್ದಡ, ಗೌರವ ಕಾರ್ಯದರ್ಶಿ ವಿಶ್ವನಾಥ ಗಿಣಿಮಾವ, ಜೊತೆ ಗೌರವ ಕಾರ್ಯದರ್ಶಿ ಸಿ.ಎನ್. ಕರಿಕಟ್ಟಿ ಸಂತಾಪ ಸೂಚಿಸಿದ್ದಾರೆ.ಆಕ್ಸ್‌ಫರ್ಡ್ ಪಾಲಿಟೆಕ್ನಿಕ್:
ಗಾಯತ್ರಿನಗರದ ಆಕ್ಸ್‌ಫರ್ಡ್ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ಗಳು ಹಾಗೂ ಸಿಬ್ಬಂದಿ ಮಂಗಳವಾರ ಸಭೆ ಸೇರಿ ಆಚಾರ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸಭೆಯಲ್ಲಿ ತಾಂತ್ರಿಕ ನಿರ್ದೇಶಕ ಡಿ.ಕೆ. ಕುಲಕರ್ಣಿ, ಪ್ರಾಚಾರ್ಯ  ಮಹಾಜನ ಶೆಟ್ಟರ , ವಿಜಯಲಕ್ಷ್ಮಿ ಮಾತನಾಡಿದರು.ಸರ್ಕಾರಿ ಪಾಲಿಟೆಕ್ನಿಕ್: ತಾರಿ ಹಾಳದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮಂಗಳವಾರ 2 ನಿಮಿಷ ಮೌನ ಆಚರಿಸುವ ಮೂಲಕ ಡಾ.ವಿ.ಎಸ್. ಆಚಾರ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.ಕಲಘಟಗಿಯಲ್ಲಿ ಸಂತಾಪ:
ಉನ್ನತ ಶಿಕ್ಷಣ ಸಚಿವ ವಿ.ಎಸ್. ಆಚಾರ್ಯ ಅವರ ನಿಧನಕ್ಕೆ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷ ಸಿ.ಎಂ. ನಿಂಬಣ್ಣವರ, ಬಿಜೆಪಿ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಸದಾ ನಂದ ಚಿಂತಾಮಣಿ, ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕಲ್ಲಯ್ಯ ಕುರ್ಡಿಕೇರಿ ಹಾಗೂ ಸದಸ್ಯರು, ತಾ.ಪಂ. ಅಧ್ಯಕ್ಷ ಶೇಕಪ್ಪ ಹುಲಗೂರ, ಉಪಾಧ್ಯಕ್ಷೆ ಸಾವಕ್ಕ ಪಾಟೀಲ, ಬ್ರಹ್ಮಕುಮಾರ ಅಳಗವಾಡಿ ಹಾಗೂ ವಿರೂಪಾಕ್ಷ ನೂಲ್ವಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಹಿರೇಮಠ ಸಂತಾಪ


ಅಳ್ನಾವರ: ಉನ್ನತ ಶಿಕ್ಷಣ ಸಚಿವ ವಿ.ಎಸ್. ಆಚಾರ್ಯ ನಿಧನಕ್ಕೆ ರಾಜ್ಯ ನಗರ ಪುರಸಭೆ ಮತ್ತು ಪಟ್ಟಣ ಪಂಚಾಯತ ಮಹಾ ಮಂಡಳದ ಕಾರ್ಯಾ ಧ್ಯಕ್ಷ ಹಾಗೂ ಅಖಿಲ ಭಾತರ ಸ್ಥಳೀಯ ಸಂಸ್ಥೆಗಳ ಸದಸ್ಯ ಎಂ.ಸಿ. ಹಿರೇಮಠ ತೀವ್ರ ಸಂತಾಪ ವ್ಯಕ್ತ ಪಡಿಸಿ ದ್ದಾರೆ.  ಚಂದ್ರಕಾಂತ ಬೆಲ್ಲದ ಕಂಬನಿ

ಧಾರವಾಡ: ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್.ಆಚಾರ್ಯ ಅವರ ನಿಧನಕ್ಕೆ ನಗರದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ.ಸರಳ, ಸಜ್ಜನಿಕೆಯ ವ್ಯಕ್ತಿಯನ್ನು ಕಳೆದುಕೊಮಡು ರಾಜ್ಯ ರಾಜಕಾರಣಕ್ಕೆ ತುಂಬಿಬಾರದ ಹಾನಿ ಯುಂಟಾಗಿದೆ ಎಂದು ಶಾಸಕ ಚಂದ್ರಕಾಂತ ಬೆಲ್ಲದ ಶೋಕ ವ್ಯಕ್ತಪಡಿಸಿದ್ದಾರೆ.

 

ಆಚಾರ್ಯ ಅವರ ನಿಧನದಿಂದ ಸರ್ಕಾರದ ಆಧಾರ ಸ್ತಂಭವೇ ಕಳಚಿ ಬಿದ್ದಂತಾಗಿದೆ ಎಂದು ಭಾರತೀಯ ಜನತಾ ಪಕ್ಷದ ಮುಖಂಡ ಕಲಂದರ ಮುಲ್ಲಾ, ಕನಕ ಸಮಾಜ ವೇದಿಕೆ ಅಧ್ಯಕ್ಷ ಹೇಮಂತ ಗುರ್ಲಹೊಸೂರ, ಆರ್.ಕೆ.ಛಾಯಾ ಫೌಂಡೇಶನ್‌ದ ರಾಮಚಂದ್ರ ಕುಲಕರ್ಣಿ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಸಂತಾಪ ಸೂಚಕ ಸಭೆ ನಡೆಸಿ ಡಾ. ಆಚಾರ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಿಡಲಾರದ ಧಾರವಾಡ ನಂಟು

ಧಾರವಾಡ: ಸರಳ, ಸಜ್ಜನ, ಸಾತ್ವಿಕ ರಾಜಕಾರಣಕ್ಕೆ ಹೆಸರಾಗಿದ್ದ ಉನ್ನತ ಶಿಕ್ಷಣ ಸಚಿವ ಡಾ. ಆಚಾರ್ಯ ಅವರಿಗೆ ಹಾಗೂ ಧಾರ ವಾಡಕ್ಕೆ ಬಿಡಲಾರದ ನಂಟು ಇದೆ.ಡಾ. ಆಚಾರ್ಯ ಅವರ ನಿಧನದ ಸುದ್ದಿ ಗೊತ್ತಾಗುತ್ತಿದ್ದಂತೆ ಅವರ ಅಕ್ಕ ರಮಾದೇವಿ ಮನೆಯಲ್ಲಿ ಸೂತಕದ ಛಾಯೆ ಆವರಿಸಿತು. ಆಚಾರ್ಯ ಅವರು ಧಾರವಾಡಕ್ಕೆ ಆಗಮಿಸಿದ ಸಂದರ್ಭದಲ್ಲಿ ತಮ್ಮ ಅಕ್ಕನ ಮನೆಗೆ ಭೇಟಿ ನೀಡದೇ ಹೊಗುತ್ತಿರಲಿಲ್ಲ. ಅವರ ಇತ್ತೀಚಿನ ಭೇಟಿಯನ್ನು ಮನೆಯಲ್ಲಿದ್ದವರು ನೆನಪಿಸಿಕೊಂಡು ದುಃಖಿಸಿದರು.

 

ಅವರ ಸಹೋದರಿ ಮನೆಯಲ್ಲಿರದಿದ್ದರೂ, ಅವರ ಅಳಿಯ ಡಾ. ಕೃಷ್ಣಮೂರ್ತಿ ಹರಿ ದಾಸ್ ಕಿದಿಯೂರ ಅವರ ಕಣ್ಣುಗಳು ತೇವಗೊಂಡಿದ್ದವು. `ಡಾ. ವಿ.ಎಸ್.ಆಚಾರ್ಯ ಅವರು 1960ರಲ್ಲಿ ತಮ್ಮ ಬಿಎಸ್‌ಸಿ ಪದವಿಯನ್ನು ಇಲ್ಲಿನ ಕರ್ನಾಟಕ ಕಾಲೇಜಿನಲ್ಲಿ ಅಭ್ಯಸಿ ಸಿದ್ದಾರೆ.

 

ನಂತರ ಅಂದಿನ ದಿನಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಅಧೀನದಲ್ಲಿಯೇ ಇದ್ದ ಮಣಿಪಾಲ್‌ನ ಕೆಎಂಸಿಯಲ್ಲಿ ಎಂಬಿಬಿಎಸ್ ಪದವಿ ಪಡೆದರು. ಕಾಲೇಜು ದಿನಗಳಲ್ಲಿಯೇ ರಾಜಕೀ ಯದ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಿದ್ದ ಅವರು, ನಗರಸಭೆ ಸದಸ್ಯರಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದರು~ ಎಂದು ಡಾ. ಕಿದಿಯೂರ ಸ್ಮರಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry