ಆಟಗಳು

7

ಆಟಗಳು

Published:
Updated:

ಕವಿತೆಗಳು

1

ನೀನೊಂದು ಕೈ ಸನ್ನೆ

ಎಸೆದರೆ ಸಾಕು

ಮರದ ಮೇಲೆ ಫಲಗಳು

ತೂಗುವವು.

ಇಷ್ಟಕ್ಕೂ, ಸ್ವಪ್ನಕ್ಕೆ ಸ್ವಪ್ನವೆಂದಲ್ಲದೆ

ಬೇರೆ ಹೆಸರ ಹುಡುಕಲು

ನನಗೆ ಏಕಿಂಥ ಜರೂರು?

2

ಕೈ ಕೈ ಹಿಡಿದು ಕೋಟೆ ಕಟ್ಟಿ

ಹುಲಿ ದನ ಆಟ ಆಡಿದ್ದೆ

ಬಾಲ್ಯದಲ್ಲಿ ಆದರೆ ನನಗಿಷ್ಟವಾದದ್ದು

ಲಗೋರಿಯು.

ಆ ಆಟಕ್ಕೊಂದು ನೋಟ ಬೇಕು

ಕಲ್ಲಿಗೆ ಬಾಣದ ಕೆಲಸ ಕೊಟ್ಟು

ಕೆಡವಿದೆನು ಗೋಪುರ ಮತ್ತೆ ಮತ್ತೆ ಕಟ್ಟಲು.

3

ಇಟ್ಟ ಜೋಡಿದ ಮಂಚದಲ್ಲಿ

ಇಡದ ಜೋಡದ ದೇಹಗಳು

ಸ್ವಪ್ನದಲ್ಲೋ ಎರಡು ದೇಹಗಳು

ನೀರಿನಂತೆ ಬೆರೆಯುವವು.

ಮನದ ಆಟಕ್ಕೆ ನಮ್ಮದೇ ಯೋಚನೆ

ಪುಟಿವ ಒಂದು ಚೆಂಡು

ಹೆಚ್ಚಾಗಿ ಗುರಿ ತಪ್ಪುವುದಾದರೂ

ಒಮ್ಮಮ್ಮೆ ತಾಗುವುದು.

4

ಆಟ ಒಂದು

ಹಕ್ಕಿಯ ಕೊಕ್ಕು ಮುಂದು.

ಆಟ ಎರಡು

ಅರಳಿ ಮುದ್ದೆಯಾದ ಕೆಂಪು ದಾಸವಾಳ

ಆಟ ಮೂರು

ತೊಟ್ಟು ಮುರಿದು ಸಣ್ಣ ನೋವು.5

ಕೇಳುತ್ತೇನೆ ನಾನು

ಅದು ಹೇಗೆ ಸೂರ್ಯನ ಸ್ಪರ್ಶಕ್ಕೆ ಹೂವು ಅರಳುತ್ತದೆ?

ಮೈಯ ಬಿಸುಪಿಗೆ ಮೊಟ್ಟೆ?

ಕಾವು ನಿನ್ನಯ

ಎರಡು ಕೈಗಳು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry