ಆಟಗಾರರು ಉಡುಗೊರೆ ಪಡೆಯುವಂತಿಲ್ಲ

7

ಆಟಗಾರರು ಉಡುಗೊರೆ ಪಡೆಯುವಂತಿಲ್ಲ

Published:
Updated:

ಕೋಲ್ಕತ್ತ: ಮುಂಬರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯಗಳ ವೇಳೆ ಆಟಗಾರರು ಯಾವುದೆ ಉಡುಗೊರೆ ಪಡೆಯುವಂತಿಲ್ಲ ಎಂದು ಬಿಸಿಸಿಐ ಸೂಚಿಸಿದೆ.ಅದೇ ರೀತಿ ಪ್ರತಿ ತಂಡಗಳು ಭದ್ರತಾ ಅಧಿಕಾರಿಯ ಜೊತೆ ಭ್ರಷ್ಟಾಚಾರ ತಡೆ ಅಧಿಕಾರಿಯನ್ನು ನೇಮಿಸುವಂತೆಯೂ ತಿಳಿಸಿದೆ. ಮಂಡಳಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.ಪಂದ್ಯಗಳ ವೇಳೆ ಆಟಗಾರರು ಕುಳಿತುಕೊಳ್ಳುವ `ಡಗ್‌ಔಟ್' ಸಮೀಪ ಹಾಗೂ ಪಂದ್ಯದ ಅಧಿಕಾರಿಗಳು ಕುಳಿತುಕೊಳ್ಳುವ ತಾಣದ ಸಮೀಪ ಇತರರ ಓಡಾಟದ ಮೇಲೆ ನಿಬರ್ಂಧ ಹೇರಲು ನಿರ್ಧರಿಸಲಾಗಿದೆ. ಐಪಿಎಲ್ ಟೂರ್ನಿಯ ವೇಳೆ `ಸ್ಪಾಟ್ ಫಿಕ್ಸಿಂಗ್' ವಿವಾದ ನಡೆದ ಹಿನ್ನೆಲೆಯಲ್ಲಿ ಮಂಡಳಿ ಇಂತಹ ತೀರ್ಮಾನ ಕೈಗೊಂಡಿದೆ.ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಅವರ ಸಲಹೆಯ ಮೇರೆಗೆ ಈ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ಸಂಜಯ್ ಪಟೇಲ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry