ಸೋಮವಾರ, ಜನವರಿ 20, 2020
29 °C

ಆಟದ ಮೂಡ್‌ನಲ್ಲಿ ಗೃಹ ರಕ್ಷಕ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಶಿಸ್ತು ಕಾಪಾಡುವ ಗೃಹ ರಕ್ಷಕ ದಳ ಸಿಬ್ಬಂದಿ ಆಟದ ಮೂಡ್‌­ನಲ್ಲಿದ್ದರು. ನಗರದಲ್ಲಿ ನಡೆಯುತ್ತಿ­ರುವ ಕೇಂದ್ರೀಯ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದಾರೆ.ಬೆಂಗಳೂರು ಕೇಂದ್ರ, ನಗರ, ಗ್ರಾಮಾಂತರ, ರಾಮನಗರ, ತುಮ­ಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯನ್ನು ಒಳಗೊಂಡ ಕ್ರೀಡಾ­ಕೂಟ­ದಲ್ಲಿ 400ಕ್ಕೂ ಹೆಚ್ಚು ಕಮಾಂಡೋ­ಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ­ದ್ದಾರೆ.ರೋಚಕ ಕಬ್ಬಡಿ: ಕೋಲಾರ ಮತ್ತು ತುಮಕೂರು ನಡುವಿನ ಕಬ್ಬಡಿ ಪಂದ್ಯ ಕುತೂಹಲ ಮೂಡಿಸಿತ್ತು, ಎರಡು ತಂಡಗಳು ಸಮಬಲದ ಹೋರಾಟ ನಡೆಸಿದವು, ಕೋಲಾರದ ಪರ ದಾಳಿ ನಡೆಸಿದ ಬಾಬು ಹೋರಾಟ ವ್ಯರ್ಥವಾಯಿತು. ಪಾವಗಡದ ಜಿ.ನಾಗ­ರಾಜು ಕ್ಯಾಚ್‌ಗೆ ಕೋಲಾರ ತಂಡ ಪಂದ್ಯದಿಂದ ಹೊರಗುಳಿಯುವಂತಾಯಿತು.ಫೈನಲ್‌ ಪಂದ್ಯದಲ್ಲಿ ಬಲಿಷ್ಠವಾಗಿದ್ದ ಚಿಕ್ಕಬಳ್ಳಾಪುರ ತಂಡವನ್ನು ಎದುರಿಸಿದ ತುಮಕೂರು ತಂಡ ಗೆಲುವು ಸಾಧಿ­ಸಿತು. ತಂಡದ ಪರವಾಗಿ ನಾಗರಾಜು, ನವೀನ್‌ ಉತ್ತಮ ಪ್ರದರ್ಶನ ನೀಡಿದರು.ಭುಜಬಲ ಪ್ರದರ್ಶನ: ಹಗ್ಗ ಜಗ್ಗಾಟದಲ್ಲಿ ಬಲ ಪ್ರದರ್ಶಿಸಲು ಮುಂದಾಗಿದ್ದ ತುಮಕೂರು ತಂಡ, ಬೆಂಗಳೂರು ಕೇಂದ್ರ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸೋಲನ್ನಪ್ಪುವ ಮೂಲಕ ಮೊದಲ ಸುತ್ತಿನಲ್ಲೇ ನಿರ್ಗಮಿಸಿತು.ಎರಡನೇ ತಂಡವಾಗಿ ಕಣಕ್ಕಿಳಿದ ಕೋಲಾರ, ಚಿಕ್ಕಬಳ್ಳಾಪುರ ತಂಡಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಬಲ ಪ್ರದರ್ಶನದಲ್ಲಿ ಚಿಕ್ಕಬಳ್ಳಾಪುರ ತಂಡದ ಆಟಗಾರರ ಮುಂದೆ ಕೋಲಾರ ತಂಡ ಹಿಂದೆ ಸರಿಯ­ಬೇಕಾ­ಯಿತು. ತಕ್ಕ ಹೋರಾಟ ನೀಡಿದ ಕೋಲಾರ ತಂಡ ಕೊನೆಗಳಿಗೆಯ­ವರೆಗೂ ಚಿಕ್ಕಬಳ್ಳಾಪುರಕ್ಕೆ ಗೆಲುವು ನೀಡಲಿಲ್ಲ, ಎರಡೂ ಬಾರಿಯೂ ಚಿಕ್ಕಬಳ್ಳಾಪುರ ತಂಡದ ‘ಬಲ ಪ್ರದ­ರ್ಶನ’ದ ಮುಂದೆ ಕೋಲಾರ ತಂಡದ ಆಟಗಾರರು ಸುಸ್ತಾದರು.ಶಿಸ್ತು ಪ್ರದರ್ಶನ: ರೈಫಲ್‌ ಸ್ಕ್ವಾಂಡ್‌ ಡ್ರೀಲ್‌ ತಂಡ ತಾಲೀಮಿನಲ್ಲಿ ಬೆಂಗಳೂರು ಕೇಂದ್ರ ತಂಡ ಶಿಸ್ತಿನ ಪ್ರದರ್ಶನ ನೀಡುವುದರ ಮೂಲಕ ಪ್ರಥಮ ಸ್ಥಾನ ಪಡೆದು ಕೊಂಡಿತು. ಉಳಿದ ಎರಡು ಸ್ಥಾನಗಳು ಬೆಂಗಳೂರು ನಗರ, ಗ್ರಾಮಾಂತರ ತಂಡದ ಪಾಲಾದವು.ಕ್ರೀಡಾಕೂಟದ ಫಲಿತಾಂಶ (ಕ್ರಮ­ವಾಗಿ ಮೊದಲ ಮೂರು ಸ್ಥಾನ ಪಡೆದವರು): 100 ಮೀ ಓಟ– ಜಿ.ಬಾಬು, ಕೋಲಾರ, ಸಮೀವುಲ್ಲಾ, ತುಮಕೂರು, ಅರುಣ್‌, ಬೆಂ.ಗ್ರಾಮಾಂತರ.100 ಮೀ ಓಟ– ಮಹಿಳೆಯರು– ವಿಜಯಕುಮಾರಿ, ಬೆಂಗಳೂರು ಕೇಂದ್ರ. ಸಿ.ಸೌಮ್ಯಾ, ರಾಮನಗರ, ಎನ್‌.ನಳಿನಾ, ಬೆಂಗಳೂರು ಕೇಂದ್ರ. 400 ಮೀ ಓಟ– ಆಶಾಲಾವಣ್ಯ, ಬೆಂಗಳೂರು ಕೇಂದ್ರ, ಇಂದ್ರಾವತಿ, ಸುಜಾತ ಕೋಲಾರ.400 ಮೀ ಮಹಿಳೆಯರ ರಿಲೇ:  ವಿಜಯಕುಮಾರಿ, ನಳಿನಾ, ಇಂದ್ರಾ­ವತಿ, ಆಶಾಲಾವಣ್ಯ, ಬೆಂಗ­ಳೂರು ಕೇಂದ್ರ ತಂಡ. ಕೆ.ಸವಿತಾ, ವರಲಕ್ಷ್ಮೀ, ಲಕ್ಷ್ಮೀ, ನಾಗಲಕ್ಷ್ಮೀ, ಬೆಂಗ­ಳೂರು ಗ್ರಾಮಾಂತರ ತಂಡ. ಪುರುಷರ ರಿಲೇ– ಸಮೀವುಲ್ಲಾ, ಬಿ.ಬಿ.ರಂಗಸ್ವಾಮಿ, ನಾಗೇಂದ್ರ, ಬಿ.ಎಂ.ಗಂಗಾಧರ ತುಮ­ಕೂರು. ಜಿ.ಬಾಬು, ಟಿ.ಜಿ.ಸುನೀಲ್‌, ಎಸ್‌.ವಿ.ಅಂಬರೀಷ್‌, ಎಚ್‌.­ಶ್ರೀನಿವಾಸ್‌ ಕೋಲಾರ. ರೈಫಲ್‌ ಶೂಟಿಂಗ್‌– ಜೆ.ಕಾರ್ತೀಕ್‌, ಬೆಂ.­ಗ್ರಾಮಾಂತರ. ಜಿ.ಜಗನ್ನಾಥ್‌ ರೆಡ್ಡಿ, ಬೆಂಗಳೂರು ಕೇಂದ್ರ. ಕೆ.ಶಿವಣ್ಣ ತುಮ­ಕೂರು. ವಾಲಿಬಾಲ್‌್– ಕೋಲಾರ ಪ್ರಥಮ, ಬೆಂಗಳೂರು ದ್ವಿತೀಯ.

ಪ್ರತಿಕ್ರಿಯಿಸಿ (+)