ಬುಧವಾರ, ಮೇ 12, 2021
19 °C

ಆಟಿಕೆಯ ಪಾಸ್‌ಪೋರ್ಟ್ ತಂದ ಆತಂಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಬ್ರಿಟನ್ನಿನ ಒಂಬತ್ತು ವರ್ಷದ ಬಾಲಕಿಯೊಬ್ಬಳು ಇರಿಸಿಕೊಂಡಿದ್ದ  ಪಾಸ್‌ಪೋರ್ಟ್‌ನಂತೆ ಕಾಣುವ ಆಟಿಕೆಗೆ ಅಧಿಕಾರಿಗಳು ಮುದ್ರೆಯೊತ್ತಿದ ಆಶ್ಚರ್ಯಕರ ಘಟನೆ ವರದಿಯಾಗಿದೆ.ಸೌತ್ ವೇಲ್ಸ್‌ನ ಶಾಲಾ ವಿದ್ಯಾರ್ಥಿನಿಯಾದ ಇಮ್ಲಿ ಹ್ಯಾರಿಸ್ ಪೋಷಕರೊಂದಿಗೆ ಟರ್ಕಿಗೆ ಪ್ರವಾಸಹೋಗಿದ್ದಳು. ಪ್ರವಾಸ ಕಾಲದಲ್ಲಿ ಗುಲಾಬಿ ಬಣ್ಣದ ಪಾಸ್‌ಪೋರ್ಟ್‌ನಂತೆಯೇ ತೋರುವ `ಲಲ್ಲಿ ಹ್ಯಾರಿಸ್' ಹೆಸರಿನ `ಯೂನಿಕಾರ್ನ್' ಆಟಿಕೆಯನ್ನು ಇರಿಸಿಕೊಳ್ಳುವುದು ಆಕೆಯ ಅಭ್ಯಾಸ.ಇಮ್ಲಿಯ ತಾಯಿ ನಿಕ್ಕಿ ಗಡಿಬಿಡಿಯಲ್ಲಿ ಈ ಆಟಿಕೆಯನ್ನೆ ಪಾಸ್‌ಪೋರ್ಟ್ ಕಚೇರಿಯ ಅಧಿಕಾರಿಗಳ ಮುಂದೆ ಹಾಜರು ಮಾಡಿದ್ದರು. ಪಾಸ್‌ಪೋರ್ಟ್‌ನಂತೆ ಕಂಡರೂ ಆಕಾರದಲ್ಲಿ ಭಿನ್ನವಾಗಿದ್ದ ಈ ಆಟಿಕೆಯನ್ನು ಸರಿಯಾಗಿ ಪರಿಶೀಲಿಸದ ಅಧಿಕಾರಿಗಳು ಅದಕ್ಕೆ ಮುದ್ರೆಯೊತ್ತಿದ್ದರು.ಆದರೆ, ಅದು ಆಟಿಕೆಯ ಪಾಸ್‌ಪೋರ್ಟ್ ಎಂದು ಗೊತ್ತಾಗಿದ್ದು ಟರ್ಕಿಯ ಆಂಟಲಿಯಾ ವಿಮಾನ ನಿಲ್ದಾಣದಲ್ಲಿ. ಇದರಿಂದ ಇಮ್ಲಿಯ ಪೋಷಕರು ಆತಂಕಗೊಂಡಿದ್ದರು. ಅಸಲಿ ಪಾಸ್‌ಪೋರ್ಟ್ ಇದ್ದ ಕಾರಣ  ಊರು ಸೇರಿದರು ಎಂದು `ದಿ ಡೈಲಿ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.