ಸೋಮವಾರ, ಏಪ್ರಿಲ್ 19, 2021
32 °C

ಆಟಿ ಆಹಾರಕ್ಕೆ ಔಷಧೀಯ ಮಹತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ: `ಆಟಿ ತಿಂಗಳ ತಿಂಡಿತಿನಿಸುಗಳು, ಆಹಾರ ಕ್ರಮಗಳು ತನ್ನದೇ ಆದ ವೈಶಿಷ್ಟ್ಯ ಹೊಂದಿವೆ. ಅನೇಕ ಆಹಾರಗಳು ಔಷಧೀಯ ಗುಣಗಳನ್ನು ಹೊಂದಿವೆ. ಆಟಿ ತಿಂಗಳ ಮಹತ್ವವನ್ನು ಅರಿಯುವ ಮೂಲಕ ಹಿರಿಯರು ಕೊಟ್ಟ ಈ ಸಂಪ್ರದಾಯವನ್ನು ಉಳಿಸಬೇಕು~ ಎಂದು ಲೇಖಕ, ಶಿಕ್ಷಕ ಮುನಿರಾಜ ರೆಂಜಾಳ ಹೇಳಿದರು.ಮಾರ್ಪಾಡಿ ಕಲ್ಲಬೆಟ್ಟು ನಡ್ಯೋಡಿ ಮಹಿಳಾ ಮಂಡಲದ ಆಶ್ರಯದಲ್ಲಿ ಭಾನುವಾರ ನಡ್ಯೋಡಿ ದೈವಸ್ಥಾನದಲ್ಲಿ ನಡೆದ `ಆಟಿದ ನೆಂಪು-2012~ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.`ಆಟಿ ತಿಂಗಳಲ್ಲಿ ಹೆಂಡತಿ ಗಂಡನ ಜತೆ ಇದ್ದು ಗರ್ಭಿಣಿಯಾದರೆ ಸುಗ್ಗಿ ಮಾಸದಲ್ಲಿ ಆಕೆ ಮಗುವಿಗೆ ಜನ್ಮ ನೀಡುತ್ತಾಳೆ. ಆ ತಿಂಗಳು ಸೆಕೆ ಮತ್ತು ಕೆಲಸದ ದಿನಗಳಾಗಿರುವುದರಿಂದ ಮಗುವಿನ ಆರೈಕೆಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಹೆಂಡತಿಯನ್ನು ತವರು ಮನೆಗೆ ಕರೆಸಿಕೊಳ್ಳುತ್ತಾರೆ. ಇದಕ್ಕೆ ಬೇರೆ ಅರ್ಥ ಇಲ್ಲ.ಆಟಿ ತಿಂಗಳು ಅಶುಭ ಅಲ್ಲ. ಹಿಂದಿನವರಿಗೆ ಈ ತಿಂಗಳಲ್ಲಿ ಮದುವೆ ಇನ್ನಿತರ ಶುಭ ಕಾರ್ಯಗಳನ್ನು ನಡೆಸಲು ಆರ್ಥಿಕ ಸಮಸ್ಯೆ ಇದ್ದುದರಿಂದ ಆ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರಲಿಲ್ಲ~ ಎಂದರು.

ಹಿರಿಯರಾದ ವಸಂತ ಶೆಟ್ಟಿ ಆಟಿ ಕಳಂಜ ವೇಷಧಾರಿಗೆ ಅಕ್ಕಿ, ಕಾಯಿ, ಅಡಿಕೆ ಹಾಗೂ ವೀಳ್ಯವನ್ನು ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ದೈವ ನರ್ತಕ ಎನ್.ಕೆ. ಸಾಲ್ಯಾನ್ ಮತ್ತು ನಾಟಿವೈದ್ಯೆ ಲಲಿತಾ ಎ. ಅವರನ್ನು ಮಹಿಳಾ ಮಂಡಲದ ಗೌರವ ಅಧ್ಯಕ್ಷೆ ಗೀತಾ.ಪಿ ಶೆಟ್ಟಿ ಹಾಗೂ ಅಧ್ಯಕ್ಷೆ ರೋಹಿಣಿ ಶೆಟ್ಟಿ ಸನ್ಮಾನಿಸಿದರು.ನಡ್ಯೋಡಿ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಪುರಸಭೆ ಸದಸ್ಯ ಶಿವರಾಜ್ ರೈ ಇದ್ದರು. ಮಹಿಳಾ ಮಂಡಲದ ಖಜಾಂಜಿ ಕಾತ್ಯಾಯಿನಿ ಆರ್. ಶೆಟ್ಟಿ ಸ್ವಾಗತಿಸಿದರು. ಅಪರ್ಣಾ.ಪಿ ಹೆಗ್ಡೆ ಸನ್ಮಾನ ಪತ್ರ ವಾಚಿಸಿದರು. ಸುಜಯಾ ಎ. ಜೈನ್ ನಿರೂಪಿಸಿ, ಹೇಮಾವತಿ.ಆರ್ ಪೂಜಾರಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.