ಆಟೊಗೆ ಬಸ್ ಡಿಕ್ಕಿ: ನಗರದ ಇಬ್ಬರ ಸಾವು

7

ಆಟೊಗೆ ಬಸ್ ಡಿಕ್ಕಿ: ನಗರದ ಇಬ್ಬರ ಸಾವು

Published:
Updated:

ಕುಣಿಗಲ್: ಆಟೊಗೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ಕಲ್ಲೇಗೌಡನಪಾಳ್ಯ ಗೇಟ್ ಬಳಿ ಗುರುವಾರ ಸಂಭವಿಸಿದೆ. ಬೆಂಗಳೂರಿನ ಕುರುಬರಪಾಳ್ಯದ ಲೋಕೇಶ (35) ಮತ್ತು ಲೋಕೇಶ್ (28) ಮೃತಪಟ್ಟವರು.ಇವರು ಆಟೊದಲ್ಲಿ ಸಿ.ಎಸ್.ಪುರಕ್ಕೆ ತೆರಳುತ್ತಿದ್ದರು. ಹಾಸನ ಕಡೆಯಿಂದ ಬಂದ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ರೇಖಾ ಎಂಬುವವರಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಬೆಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry