ಆಟೊಮೊಬೈಲ್‌, ರಿಟೇಲ್‌ ಕೋರ್ಸ್‌ ಆರಂಭಕ್ಕೆ ಸಿದ್ಧತೆ

7
150ನೇ ವರ್ಷದ ಹೊಸ್ತಿಲಲ್ಲಿ ಸರ್ಕಾರಿ ಪ್ರೌಢಶಾಲೆ

ಆಟೊಮೊಬೈಲ್‌, ರಿಟೇಲ್‌ ಕೋರ್ಸ್‌ ಆರಂಭಕ್ಕೆ ಸಿದ್ಧತೆ

Published:
Updated:

ಕಾರವಾರ: ‘ನಗರದ ಸರ್ಕಾರಿ ಪ್ರೌಢಶಾಲೆ 150ನೇ ವರ್ಷದ ಹೊಸ್ತಿಲಲ್ಲಿದೆ. ಈ  ಹಿನ್ನೆಲೆಯಲ್ಲಿ 150ರ ಸಂಭ್ರಮವನ್ನು ಅದ್ದೂರಿ ಯಾಗಿ ಆಚರಿಸಲು ಸಿದ್ಧತೆ ನಡೆಸಲಾ ಗುತ್ತಿದ್ದು, ಹಲವು ಮಾದರಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗು ತ್ತಿದೆ’ ಎಂದು ಮುಖ್ಯ ಶಿಕ್ಷಕಿ ಭಾರತಿ ಪಾವುಸ್ಕರ ತಿಳಿಸಿದರು.ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ 150 ವರ್ಷ ದಾಟಿದ ಮೊದಲ ಸರ್ಕಾರಿ ಪ್ರೌಢಶಾಲೆ ಇದಾಗಿದೆ. ಇದರ ನೆನಪಿಗಾಗಿ ಅತ್ಯಾಧುನಿಕ ಕಂಪ್ಯೂಟರ್‌ ಕೊಠಡಿ, ಇ–ಗ್ರಂಥಾಲಯ ವ್ಯವಸ್ಥೆ ಇರುವ ವಾಚನಾಲಯ, ಶಾಲೆಯ ವಿದ್ಯಾರ್ಥಿ ಗಳಿಗೆ ಪ್ರತ್ಯೇಕ ಸಮವಸ್ತ್ರ ಹಾಗೂ ಉತ್ತಮ ಮಟ್ಟದ ಮೂಲ ಸೌಲಭ್ಯ ಕಲ್ಪಿಸಲಾಗುವುದು’ ಎಂದರು.‘ಶಾಲೆಯಲ್ಲಿ ಪ್ರಸ್ತುತ 193 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲಿ ಬಾಲಮಂದಿರ ಹಾಗೂ ವಸತಿ ನಿಲಯಗಳಿಂದ ಬರುವ ವಿದ್ಯಾರ್ಥಿಗಳೇ ಹೆಚ್ಚು. ಹೀಗಾಗಿ ವರ್ಷಾಚರಣೆಯ ಹಿನ್ನೆಲೆಯಲ್ಲಿ ‘ದತ್ತು’ ಯೋಜನೆ ಪ್ರಾರಂಭಿಸುವ ಉದ್ದೇಶ ಹೊಂದಲಾಗಿದೆ’ ಎಂದು ಹೇಳಿದರು.‘ಇಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ವರ್ಷಾಚರಣೆಯ ನಿಮಿತ್ತ ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿ ಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಶಾಲೆಯ ವೆಬ್‌ಸೈಟನ್ನು ಸಹ ತಯಾರಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.‘1864ರಲ್ಲಿ ಪಾರಂಭವಾದ ಸರ್ಕಾರಿ ಶಾಲೆ ಜೂನ್‌ 1, 2014 ಕ್ಕೆ ಸರಿಯಾಗಿ 150 ವರ್ಷ ಪೂರೈಸಲಿದೆ. ಈ ವರ್ಷದ ಶೈಕ್ಷಣಿಕ ವರ್ಷದಲ್ಲಿಯೇ ಅಂದರೆ ಮೇ ತಿಂಗಳ ಅಂತ್ಯದಲ್ಲಿ ವರ್ಷಾಚರಣೆಯ ಕಾರ್ಯಕ್ರಮ ಹಮ್ಮಿ ಕೊಳ್ಳುವ ಉದ್ದೇಶ ಹೊಂದ ಲಾಗಿದೆ. ಆದರೆ, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಇನ್ನು ದಿನಾಂಕ ಹಾಗೂ ಕಾರ್ಯಕ್ರಮಗಳ ಬಗ್ಗೆ ನಿರ್ಧರಿಸಿಲ್ಲ. ಈ ಕುರಿತು ಚರ್ಚಿಸಲು ಇದೇ ಜ. 17 ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ’ ಎಂದು ತಿಳಿಸಿದರು.ಶಾಲೆಯ ಹಳೆಯ ವಿದ್ಯಾರ್ಥಿಗಳು headmasterghskwr@gmail.com, ಫೇಸ್‌ಬುಕ್‌ನಲ್ಲಿ ghs karwar ಅಥವಾ ಮೊ: 94828 83103, 93433 90181, ದೂ: 08382–220130 ಮೂಲಕ ಸಂಪರ್ಕಿಸ ಬಹುದು ಎಂದು ವಿನಂತಿಸಿದರು.ಶಾಲೆ ಎಸ್‌ಡಿಎಂಸಿ ಅಧ್ಯಕ್ಷೆ ಶೀತಲಾ ಮಡಿವಾಳ, ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಎ.ಎಂ. ಶೇಖ್‌, ಎಂ.ಆರ್‌ ನಾಯ್ಕ, ಖಮೀರುಲ್ಲಾ ಶೇಖ ಉಪಸ್ಥಿತರಿದ್ದರು.ವೃತ್ತಿ ಶಿಕ್ಷಣ ಕೋರ್ಸ್‌

‘ಪ್ರೌಢಶಾಲೆ ಹಾಗೂ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವೃತ್ತಿ ಶಿಕ್ಷಣ ಕೋರ್ಸ್‌ ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದು, ಸದ್ಯಕ್ಕೆ ಆಟೊ ಮೊಬೈಲ್‌ ಮತ್ತು ರಿಟೇಲರ್‌ ಕೋರ್ಸ್‌ಗಳ ತರಗತಿಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಅನುದಾನ ಮಂಜೂರಾಗಿದ್ದು, ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸಹ ಶೀಘ್ರದಲ್ಲಿ ನಡೆಯಲಿದೆ’ ಎಂದು ಭಾರತಿ ಪಾವುಸ್ಕರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry