ಶುಕ್ರವಾರ, ಮೇ 7, 2021
19 °C

ಆಟೊ ಕಿರಿಕಿರಿಗೆ ಇದೆ ಪರಿಹಾರ

ಇ.ಎಸ್. ಸುಧೀಂದ್ರಪ್ರಸಾದ್ Updated:

ಅಕ್ಷರ ಗಾತ್ರ : | |

ಆಟೊ ಕಿರಿಕಿರಿಗೆ ಇದೆ ಪರಿಹಾರ

ಬೆಂಗಳೂರಿನ ನಾಗರಿಕರು, ಹೊರಗಿನಿಂದ ಬಂದವರು ಒಂದಲ್ಲ ಒಂದು ಸಂದರ್ಭದಲ್ಲಿ ಆಟೊ ಹತ್ತಿಯೇ ಇರುತ್ತಾರೆ. ಅವರಿಗೆ ಎಂದಾದರೂ ಇಂಥದ್ದೊಂದು ಅನುಭವ ಆಗಿಯೇ ಇರುತ್ತದೆ. ಈ ಮಾತನ್ನು ಬಹುಶಃ ಯಾರೂ ಅಲ್ಲಗಳೆಯಲಾರರು.ಯಾಕೆಂದರೆ ಈ ನಗರದ ಆಟೊಗಳದ್ದೇ ಒಂದು ಸ್ಪೆಷಾಲಿಟಿ. ಸಾಲಾಗಿ ನಿಂತ ಆಟೊಗಳತ್ತ ಹೋಗಿ `ಬರ್ತಿರಾ?~ ಎಂದು ಕೇಳಿ ನೋಡಿ. ಅದಕ್ಕೆ ಆತ ಕೊಡುವ ಉತ್ತರ `200 ರೂಪಾಯಿ ಆಗುತ್ತೆ~. `ಅಲ್ಲರೀ ಮೆಜೆಸ್ಟಿಕ್‌ಗೆ ಆಗೋದು ಬರೀ ನೂರು ರೂಪಾಯಿ ಮಾತ್ರ~ ಎಂದು ಕೇಳಿದರೆ `ತುಂಬಾ ರಷ್ ಇರುತ್ತೆ~ ಎಂದು ರಪ್ಪನೆ ಹೇಳಿ ಮುಖ ತಿರುಗಿಸುತ್ತಾರೆ. ಸರಿ ಎಂದು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಿನ ಆಟೋ ಬಳಿ ಹೋಗಿ ನಿಂತರೆ ಆಗಲೂ ಅದೇ ಉತ್ತರ. ತುರ್ತು ಕೆಲಸ ಇದ್ದರಂತೂ ವಿಧಿಯಿಲ್ಲದೆ ಆತ ಹೇಳಿದಷ್ಟು ಕೊಡಲು ಒಪ್ಪುತ್ತಾರೆ.ಈ ರೀತಿಯ ಘಟನೆಗಳು ನಗರದಲ್ಲಿ ಅಲ್ಲಲ್ಲಿ ನಿತ್ಯವೂ ನಡೆಯುತ್ತಲೇ ಇರುತ್ತದೆ. ನೀವು ಹೋಗಬೇಕಾದ ಹಾದಿಯಲ್ಲಿ ಆಟೊಗಳು ಬರುವುದು ಕಡಿಮೆ. ಬಂದರೂ ಅದಕ್ಕೆ ಮೀಟರ್‌ಗಿಂತಲೂ ಹೆಚ್ಚು ಹಣ ನೀಡುವ ಅನಿವಾರ್ಯತೆ. ಗೊಣಗುತ್ತಲೇ ಆಟೊ ಹತ್ತುತ್ತೀರಿ. ನಿಮ್ಮ ಸ್ಥಳ ತಲುಪಿದ ನಂತರ ವಿಷಯವನ್ನು ಮರೆತೇ ಬಿಡುತ್ತೀರಿ. ಇಂಥ ನಿರ್ಲಕ್ಷ್ಯಕ್ಕೂ ಕಾಸು ಕೊಡುತ್ತ ನಿಮ್ಮ ಮೇಲಾಗುವ ಇಂಥ ದೌರ್ಜನ್ಯವನ್ನು ಸಹನೆಯಿಂದ ಸ್ವೀಕರಿಸುತ್ತೀರಿ.ಇದಕ್ಕೆ ಕೊನೆ ಇಲ್ಲವೇ? ಪೆಟ್ರೋಲ್ ದರ ಏರಿದಂತೆ ಆಟೊ ದರ ಹೆಚ್ಚಬೇಕು ಎಂದು ಒತ್ತಡ ಹೇರುವ ಇವರು ಗ್ರಾಹಕರನ್ನು ಕಂಡೊಡನೆ `ಮಿಕ~ಗಳನ್ನು ಕಂಡಂತೆ ಮಾಡುವುದಾದರೂ ಏತಕ್ಕೆ?ಇದನ್ನು ನಿಯಂತ್ರಿಸಲು ಹಾಗೂ ಆಟೊ ಪ್ರಯಾಣಿಕರ ಹಿತ ಕಾಪಾಡಲು ಕಾನೂನಿನ ಪ್ರಕಾರ ಯಾವ ಕ್ರಮವನ್ನೂ ಕೈಗೊಳ್ಳುವಂತಿಲ್ಲವೇ? ಎಂಬಿತ್ಯಾದಿ ಪ್ರಶ್ನೆಗಳು ಆ ಕ್ಷಣದಲ್ಲಿ ತಲೆಯನ್ನು ಕೊರೆದು ರಕ್ತದೊತ್ತಡವನ್ನು ಹೆಚ್ಚು ಮಾಡುತ್ತದೆ.ಇದಕ್ಕೆ ಉತ್ತರ ಆರ್‌ಟಿಒ ಕಚೇರಿಗಳಲ್ಲಿ ಲಭ್ಯ! ಏನು ಈ ಉತ್ತರ?

ನಿಮಗೆಂದಾದರೂ ಇಂಥದ್ದೊಂದು ಕಿರಿಕಿರಿಯಾದಲ್ಲಿ ತಕ್ಷಣ ಆ ಆಟೊ ನೋಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ. ನಂತರ ಸವಿವರವಾಗಿ ನಡೆದ ಘಟನೆಯನ್ನು ಠ್ಟಿಚ್ಞಠ್ಚಟಞಃಚ್ಟ.್ಞಜ್ಚಿ.ಜ್ಞಿ ಇ-ಮೇಲ್ ಮಾಡಿ. ಕಳುಹಿಸಿದ ದೂರಿನಲ್ಲಿ ವಾಹನ ನೋಂದಣಿಯ ಮೊದಲ ನಾಲ್ಕು ಡಿಜಿಟ್‌ನ ಮಾಹಿತಿಯ ಆಧಾರದ ಮೇಲೆ ಅದನ್ನು ಸಂಬಂಧಪಟ್ಟ ಆರ್‌ಟಿಒ ಕಚೇರಿಗೆ ಕಳುಹಿಸಲಾಗುತ್ತದೆ.ಇ-ಮೇಲ್ ಮೂಲಕ ಅಥವಾ ದೂರುದಾರರು ಕಂಪ್ಯೂಟರ್ ಅನಕ್ಷರಸ್ಥರಾಗಿದ್ದಲ್ಲಿ ದೂರವಾಣಿಯ ಮೂಲಕ ದೂರು ದಾಖಲಿಸಬಹುದು. ಆದರೆ, ಆಶ್ಚರ್ಯವೆಂದರೆ ಬೆಂಗಳೂರು ನಗರದಲ್ಲಿರುವ ಒಂದು ಲಕ್ಷ ಆಟೊಗಳಿಗೆ ಪ್ರತಿ ತಿಂಗಳು ದಾಖಲಾಗುತ್ತಿರುವ ದೂರುಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.ಸಂಬಂಧಪಟ್ಟ ಆರ್‌ಟಿಒ ಕಚೇರಿಗೆ ದೂರು ತಲುಪಿದ ತಕ್ಷಣ ಸದರಿ ಆಟೊಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ನೋಟಿಸ್ ತಲುಪಿದ ಏಳು ದಿನದೊಳಗೆ ಸಂಬಂಧಪಟ್ಟ ಆಟೊ ಮಾಲೀಕ ಸಾರಿಗೆ ಅಧಿಕಾರಿಗಳನ್ನು ಭೇಟಿ ಮಾಡಲೇಬೇಕು.ಪ್ರತಿಯೊಂದು ಆರ್‌ಟಿಒಗಳಲ್ಲಿ 8-10 ಮಂದಿ ಮೋಟಾರು ವಾಹನ ಇನ್ಸ್‌ಪೆಕ್ಟರ್‌ಗಳಿರುತ್ತಾರೆ. ಅವರು ತನಿಖೆ ನಡೆಸುತ್ತಾರೆ. ದೂರು ದಾಖಲಾದ ಆಟೊಗೆ ಮೋಟಾರು ವಾಹನ ಕಾಯ್ದೆ  ಸೆಕ್ಷನ್ 200ರ ಅಡಿಯಲ್ಲಿ 100 ರೂಪಾಯಿ ದಂಡ ವಿಧಿಸಲಾಗುತ್ತದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.