ಆಟೊ ಸಂಘದ ವಿರುದ್ಧ ಪ್ರತಿಭಟನೆ

7

ಆಟೊ ಸಂಘದ ವಿರುದ್ಧ ಪ್ರತಿಭಟನೆ

Published:
Updated:

ಮೂಡಿಗೆರೆ: ತಾಲ್ಲೂಕಿನಲ್ಲಿ ಕೆಲವು ದುಷ್ಟ ವ್ಯಕ್ತಿಗಳು ಶಾಂತಿ ಕದಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಣಚೂರು ವಿನೋದ್ ಆರೋಪಿಸಿದರು. ಕಳೆದ ತಿಂಗಳು ಪಟ್ಟಣದಲ್ಲಿ ನಡೆದ ಆಟೊ ಸಂಘದ ಕಾರ್ಯಕ್ರಮವೊಂದರಲ್ಲಿ ಪ್ರಚೋದನಕಾರಿ ಭಾಷಣದ ವಿರುದ್ಧ ಶುಕ್ರವಾರ ನಡೆದ ಪ್ರತಿಭಟನೆ ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಳೆದ ಇಪ್ಪತ್ತು ದಿನಗಳ ಹಿಂದೆ ಆಟೊ ಚಾಲಕ ಮತ್ತು ಪಟ್ಟಣದ ಕೆಲವು ವ್ಯಕ್ತಿಗಳ ನಡುವೆ ನಡೆದ ಗಲಾಟೆ ಕ್ಷುಲ್ಲಕ ವಿಷಯವಾಗಿದ್ದು, ಪ್ರಕರಣವನ್ನು ಬೆಳೆಸುವ ಉದ್ದೇಶದಿಂದಲೇ, ಗಲಾಟೆಯ ವಿಚಾರ ವನ್ನು ಸಂಘಟನೆಗಳೊಂದಿಗೆ ತಳುಕು ಹಾಕಲಾಗಿದೆ. ಅಲ್ಲದೇ ಗಲಾಟೆಯಲ್ಲಿ ಭಾಗಿಯಾಗಿದ್ದರೆನ್ನಲಾದ ವ್ಯಕ್ತಿಗಳ ವಿರುದ್ಧ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದರೂ, ಅನವಶ್ಯಕವಾಗಿ ಪ್ರತಿಭಟನೆ ನಡೆಸಿ, ಆ ಪ್ರತಿಭಟನೆಯಲ್ಲಿ ಗಲಾಟೆಯಾದವರ ಕುಟುಂಬದ ಸದಸ್ಯರನ್ನು, ವ್ಯಕ್ತಿಗಳು ಗುರುತಿಸಿಕೊಂಡಿದ್ದ ಸಂಘಟನೆಗಳನ್ನು ಗುರಿಯಾಗಿರಿಸಿಕೊಂಡು ಅವ್ಯಾಚ ಶಬ್ದಗಳಿಂದ ನಿಂದಿಸಲಾಗಿದೆ ಎಂದರು.ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಗ್ರಹಳ್ಳಿ ಪ್ರದೀಪ ಮಾತನಾಡಿ, ಆಟೊ ಸಂಘದ ಕೆಲವು ಪದಾಧಿಕಾರಿಗಳ ಈ ಕೃತ್ಯದಿಂದ ಇಡೀ ಆಟೊ ಚಾಲಕರೇ ತಲೆ ತಗ್ಗಿಸುವಂತಾಗಿದ್ದು, ಪ್ರಾಮಾಣಿಕ ಆಟೊ ಚಾಲಕರಿಗೆ ಇರಿಸುಮುರಿಸಾಗಿದೆ ಎಂದರು.

ಪಟ್ಟಣದಲ್ಲಿ ಆಟೊ ನಿಲ್ದಾಣಕ್ಕಾಗಿ ನೀಡಿರುವ ಸ್ಥಳದಲ್ಲಿಯೇ ನಿಲುಗಡೆಗೊಳಿಸಬೇಕು. ಸಾರಿಗೆ ಇಲಾಖೆ ನಿಗದಿ ಮಾಡಿರುವಷ್ಟೇ ಪ್ರಯಾಣಿಕರನ್ನು ಸಾಗಿಸಬೇಕು.

ಪರವನಾಗಿ ಇಲ್ಲದೇ ಶಾಲಾ ಮಕ್ಕಳನ್ನು ಸಾಗಿಸಬಾರದು. ಎಲ್ಲಾ ಆಟೊಗಳಿಗೂ, ಸ್ಥಳೀಯ ನಂಬರ್ ನೀಡಬೇಕು ಮುಂತಾದ ನಿಯಮಗಳನ್ನುಳ್ಳ ಮನವಿ ಪತ್ರವನ್ನು ಸಾರಿಗೆ ಇಲಾಖೆ ಮತ್ತು ತಾಲ್ಲೂಕು ಆಡಳಿತಕ್ಕೆ ನೀಡಿದರು.ಸಾವಿರಾರು ಸಂಖ್ಯೆಯಲ್ಲಿ ಪಕ್ಷ ಭೇದ ಮರೆತು ಭಾಗವಿಸಿದ್ದ ಪ್ರತಿಭಟನೆ ಮೆರವಣಿಗೆ ಪ್ರವಾಸಿ ಮಂದಿರದಿಂದ ಹೊರಟು, ಎಂ.ಜಿ. ರಸ್ತೆಯ ಮೂಲಕ ಸಾಗಿ, ಲಯನ್ಸ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry