ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಕೆಗೆ ವಿರೋಧ

7

ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಕೆಗೆ ವಿರೋಧ

Published:
Updated:

ಚಿತ್ರದುರ್ಗ: ನಗರದಲ್ಲಿ ರಸ್ತೆಗಳು ದುರಸ್ತಿ ಆಗುವವರೆಗೂ ಆಟೋ ರಿಕ್ಷಾಗಳಿಗೆ ಮೀಟರ್ ಕಡ್ಡಾಯಗೊಳಿಸಬಾರದು ಎಂದು ಆಗ್ರಹಿಸಿ ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ಇಲ್ಲಿನ ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಸಿದರೇ ರಸ್ತೆಗಳಲ್ಲಿ ಚಾಲನೆ ಮಾಡುವಾಗ ಮೀಟರ್ ಜಂಪ್ ಆಗುವ ಸಾಧ್ಯತೆಯಿದೆ. ಆದ್ದರಿಂದ, ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಬಾರದು ಎಂದು ಸಂಘದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಚಿತ್ರದುರ್ಗ ಕಸಬಾ ಪ್ರದೇಶದ ಪರವಾನಿಗೆ ಹೊಂದಿರುವ ಆಟೋರಿಕ್ಷಾಗಳು ನಗರದಲ್ಲಿ ಹೆಚ್ಚು ಸಂಚರಿಸುತ್ತಿದ್ದರೂ ಸಾರಿಗೆ ಮತ್ತು ಸಂಚಾರಿ ಪೊಲೀಸರು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.ಆಪೇ ಆಟೋಗಳಿಗೆ ನಾಲ್ಕು ಜನ ಪ್ರಯಾಣಿಕರು ಸಂಚಾರ ಮಾಡಲು ಅವಕಾಶವಿದ್ದರೂ ಮಾಲೀಕರು ಮತ್ತು ಚಾಲಕರು ಇಲಾಖೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದುಕೊಂಡು ಸಂಚಾರ ಮಾಡುತ್ತ್ದ್ದಿದಾರೆ ಮತ್ತು ನಗರದ ಹೊರವಲಯದ ವಿವಿಧ ಬಡಾವಣೆಗಳಿಂದ ಪ್ರಯಾಣಿಕರನ್ನು ಸೀಟ್‌ವೊಂದಕ್ಕೆ ್ಙ 5 ಕರೆದುಕೊಂಡು ಸಂಚರಿಸುತ್ತಿವುದು ನಗರದಲ್ಲಿ ಪರವಾನಗಿ ಹೊಂದಿದ ಆಟೋದವರಿಗೆ ತೊಂದೆಯಾಗುತ್ತಿದೆ. ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ಇಲ್ಲಿನ ಆಟೋಮೊಬೈಲ್ ಮಾಲೀಕರು ನಕಲಿ ಬಿಡಿಭಾಗಗಳನ್ನು ಹೆಚ್ಚಿನ ದರಗಳಲ್ಲಿ ಮಾರಾಟ ಮಾಡುತ್ತಿರುವ ಕಾರಣ ಆಟೋರಿಕ್ಷಾಗಳು ಮೂರು ತಿಂಗಳಿಗೊಮ್ಮೆ ರಿಪೇರಿಗೆ ಬರುತ್ತಿದ್ದು, ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಈ ರೀತಿಯ ನಕಲಿ ಬಿಡಿಭಾಗಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.ಆಟೋಮೊಬೈಲ್ ಅಂಗಡಿ ಮುಂದೆ ಬಿಡಿಭಾಗಗಳ ದರದ ಪಟ್ಟಿ ಹಾಕಲು ಸೂಚಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.ಈ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿದ ನಂತರ ಆಟೋರಿಕ್ಷಾಗಳಿಗೆ ಕಡ್ಡಾಯ ಮೀಟರ್ ಅಳವಡಿಸಲು ಆದೇಶ ಹೊರಡಿಸಬೇಕು ಎಂದು ಆಟೋ ಮಾಲೀಕರು ಮತ್ತು ಚಾಲಕರು ಮನವಿ ಸಲ್ಲಿಸಿದರು.ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಅಶು, ಕಾರ್ಯದರ್ಶಿ ತಿಪ್ಪೇಸ್ವಾಮಿ, ನಾಗರಾಜ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry