ಆಟೋರಿಕ್ಷಾ ದರ ಪರಿಷ್ಕರಣೆ; ಜೂನ್ 1ರಿಂದ ಅನ್ವಯ

7

ಆಟೋರಿಕ್ಷಾ ದರ ಪರಿಷ್ಕರಣೆ; ಜೂನ್ 1ರಿಂದ ಅನ್ವಯ

Published:
Updated:

ಚಿತ್ರದುರ್ಗ: ಜಿಲ್ಲೆಯಲ್ಲಿನ ಆಟೋರಿಕ್ಷಾಗಳ ದರ ಪರಿಷ್ಕರಣೆ ಮಾಡಿದ್ದು, ಜೂನ್ 1ರಿಂದ ಕನಿಷ್ಠ 2 ಕಿ.ಮೀ.ಗೆ ರೂ 18 ನಿಗದಿ ಮಾಡಲಾಗಿದೆ.ಪರಿಷ್ಕರಿಸಿದ ದರವನ್ನು ಆಟೋ ಮೀಟರ್‌ನಲ್ಲಿ ಬದಲಾಯಿಸಿಕೊಳ್ಳಲು ಮೇ 9ರಂದು ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಎಲ್ಲಾ ಆಟೋಗಳಿಗೂ ಸೂಚನೆ ನೀಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್.ಜೆ. ತೆಂಬದ್ ತಿಳಿಸಿದ್ದಾರೆ.ಪ್ರತಿ 3 ಜನರಿಗೆ 2 ಕಿ.ಮೀ. ವರೆಗಿನ ಕನಿಷ್ಠ ದರ ರೂ 18 ಮತ್ತು ನಂತರದ ಪ್ರತಿ ಕಿಲೋಮೀಟರ್‌ಗೆ 9 ರೂಪಾಯಿಗಳಂತೆ ದರ ಪರಿಷ್ಕರಣೆ ಮಾಡಲಾಗಿದೆ. ರಾತ್ರಿ 10ರಿಂದ ಬೆಳಗಿನ ಜಾವ 5ರವರೆಗೆ ದರದ ಒಂದೂವರೆ ಪಟ್ಟು ಹಾಗೂ ಕಾಯಲು ಮೊದಲ 15 ನಿಮಿಷಕ್ಕೆ ಯಾವುದೇ ಶುಲ್ಕವಿಲ್ಲ. ನಂತರದ 15 ನಿಮಿಷಗಳವರೆಗೆ ರೂ 2 ಮತ್ತು ಪ್ರಯಾಣಿಕರೊಂದಿಗೆ 20 ಕೆ.ಜಿ.ಲಗೇಜು ಕೊಂಡೊಯ್ಯಲು ಉಚಿತ ಹಾಗೂ ನಂತರದ 20 ಕೆ.ಜಿ.ಗೆ ರೂ 3 ದರವನ್ನು ನಿಗದಿ ಮಾಡಲಾಗಿದೆ.ಮೇ 9ರಂದು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದರ ಪರಿಷ್ಕರಿಸಿ ಅದರಂತೆ ಆಟೋಮೀಟರ್‌ಗೆ ಕಾನೂನು ಮಾಪನಶಾಸ್ತ್ರ ಇಲಾಖೆಯಲ್ಲಿ ದರ ಬದಲಾಯಿಸಿಕೊಂಡು ಸತ್ಯಾಪನೆ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿತ್ತು. ಆದರೆ, ಇದುವರೆಗೂ ಆಟೋ ಮೀಟರ್‌ಗೆ ಬದಲಾದ ದರ ಅಳವಡಿಸಿಕೊಳ್ಳದೆ ಸಾರ್ವಜನಿಕವಾಗಿ ರಸ್ತೆಯಲ್ಲಿ ಚಲಿಸುತ್ತಿರುವುದನ್ನು ಜಿಲ್ಲಾ ಆಡಳಿತವು ಗಂಭೀರವಾಗಿ ಪರಿಗಣಿಸಿದೆ.ಜೂನ್ 1ರ ಒಳಗಾಗಿ ಆಟೋ ಮೀಟರ್‌ನಲ್ಲಿ ಬದಲಾದ ದರವನ್ನು ಅಳವಡಿಸಿಕೊಂಡು ಪ್ರಯಾಣಿಕರನ್ನು ಕೊಂಡೊಯ್ಯುವಾಗ ಕಡ್ಡಾಯವಾಗಿ ಆಟೋರಿಕ್ಷಾ ಮೀಟರ್ ಚಾಲನೆಯಲ್ಲಿಟ್ಟು ಆಟೋರಿಕ್ಷಾ ಮೀಟರ್‌ನಂತೆ ಬಾಡಿಗೆ ಪಡೆಯಬೇಕು. ಇಲ್ಲದಿದ್ದಲ್ಲಿ ಆಟೋರಿಕ್ಷಾ ವಾಹನಗಳ ಅರ್ಹತಾ ಪತ್ರ ನವೀಕರಣ ಮತ್ತು ಪರವಾನಗಿ ನವೀಕರಣ ಮಾಡುವುದಿಲ್ಲ. ವಾಹನಗಳ ರಹದಾರಿ, ನೋಂದಣಿ ಪತ್ರ, ವಾಹನ ಚಾಲಕರ ಚಾಲನಾ ಪರವಾಗಿ ರದ್ದುಪಡಿಸಲು ಮೋಟಾರು ವಾಹನ ಕಾಯಿದೆಯನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತೆಂಬದ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry