ಆಟೋ ಟೆಕ್

ಶುಕ್ರವಾರ, ಮೇ 24, 2019
26 °C

ಆಟೋ ಟೆಕ್

Published:
Updated:

ಸೈಕಲ್‌ಗೆ ಸೋಲಾರ್ ಲೈಟ್

ಮುಗಿಯದ ಶಕ್ತಿಯ ಮೂಲ ಸೂರ್ಯನ ಕಿರಣಗಳು ಎಂಬುದು ತಿಳಿದೇ ಇದೆ. ಆದರೆ ಸೂರ್ಯನ ಕಿರಣಗಳನ್ನು ವಿದ್ಯುತ್ತಾಗಿ ಪರಿವರ್ತಿಸುವ ಉಪಕರಣಗಳು ತುಂಬಾ ದುಬಾರಿಯಾದ ಕಾರಣ ಎಲ್ಲ ಕ್ಷೇತ್ರಗಳಲ್ಲೂ ಸೌರ ವಿದ್ಯುತ್ ಬಳಕೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ.ಹಾಗೆಯೇ ವಾಹನಗಳಲ್ಲೂ ಈಗ ಸೋಲಾರ್ ಶಕ್ತಿ ಬಳಸಿಕೊಳ್ಳುವ ಪ್ರಯತ್ನಗಳು ಆಗುತ್ತಿವೆ. ಸೋಲಾರ್ ಕಾರುಗಳು, ಸ್ಕೂಟರ್‌ಗಳು ಪ್ರಯೋಗಶೀಲವಾಗಿ ಉತ್ಪಾದನೆಗೊಂಡಿವೆ. ಆದರೆ ಸೈಕಲ್ ಲೋಕದಲ್ಲಿ ಚಲಿಸಬೇಕಾದರೆ ತುಳಿಯಲೇಬೇಕು.ಕೆಲವು ವಿದ್ಯುಚ್ಚಾಲಿತ ಸೈಕಲ್ ಬಂದಿವೆಯಾದರೂ, ಪೆಡಲ್ ಮತ್ತು ಚೈನ್ ಇದ್ದೇ ಇರುತ್ತವೆ. ಆದರೆ ಸಣ್ಣ ಪ್ರಮಾಣದಲ್ಲಿ ಸೌರ ವಿದ್ಯುತ್ ಬಳಸಿಕೊಳ್ಳುವ ಪ್ರಯತ್ನಗಳು ಈಗಾಗಲೇ ಯಶಸ್ವಿಯಾಗಿದೆ. ಪ್ರಮುಖವಾದದ್ದು ಸೋಲಾರ್ ಟೇಲ್ ಲೈಟ್.

ಸೋಲಾರ್ ಟೇಲ್ ಲೈಟ್

ಇದೊಂದು ಸರಳ ಹಾಗೂ ಅಗ್ಗದ ಉಪಕರಣ. ಹೆಚ್ಚೆಂದರೆ 500 ರೂಪಾಯಿ ಆಗಬಹುದಷ್ಟೇ. ಸೈಕಲ್‌ಗೆ ದೀಪ ಬೇಕು ಎಂದು ಭಾರತೀಯರು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಆದರೆ ಆಧುನಿಕ ಸೈಕಲ್‌ಗಳಲ್ಲಿ ಮುಂದೆ ಹಾಗೂ ಹಿಂದಿನ ಭಾಗಗಳಲ್ಲಿ ದೀಪ ಹಾಕಿಸಿಕೊಳ್ಳುವುದು ಫ್ಯಾಷನ್ ಆಗಿದೆ. ಬ್ಯಾಟರಿ ಚಾಲಿತ ದೀಪಗಳಿವು.ಇದರ ಜತೆಗೆ ಈಗ ಸೌರಶಕ್ತಿಯ ದೀಪಗಳೂ ಬಂದಿವೆ. ಹಿಂಭಾಗದ ಈ ದೀಪದಲ್ಲಿ  ಫೋಟೋವಾಲ್ಟಿಕ್  ಸೌರಕೋಶಗಳಿದ್ದು, ಸಣ್ಣ ಪ್ರಮಾಣದ ವಿದ್ಯುತ್ ಉತ್ಪಾದಿಸಿ, ಎಲ್‌ಇಡಿ ದೀಪ ಬೆಳಗುತ್ತವೆ. ಇದು ಕೇವಲ ಹಿಂಭಾಗದ ದೀಪಕ್ಕೆ ಮಾತ್ರ.

 

ಏಕೆಂದರೆ ಮುಂಭಾಗದ ದೀಪ ಪ್ರಕಾಶಮಾನವಾಗಿದ್ದು, ಹೆಚ್ಚು ವಿದ್ಯುತ್ ಪೂರೈಸಲು ಕೋಶಗಳಿಗೆ ಆಗದು. ಹಿಂದಿನ ದೀಪ ಸಣ್ಣದ್ದು. ಜತೆಗೆ ಪ್ರಕಾಶಮಾನವಾಗಿ ಇರಬೇಕಾದ ಅಗತ್ಯವಿಲ್ಲ. ಇದೇನಿದ್ದರೂ ಎಚ್ಚರಿಕೆ ಸಂಕೇತವಷ್ಟೇ.

 

ಕ್ವಿಕ್ ರಿಲೀಸ್

ಈಗಿನ ಕಾಲದ ಇನ್‌ಸ್ಟಂಟ್ ಫುಡ್ ಇದ್ದಂತೆ, ಸೈಕಲ್‌ಗಳಲ್ಲಿ ಕ್ವಿಕ್ ರಿಲೀಸ್ ಅನುಕೂಲ ಕಲ್ಪಿಸಲಾಗಿದೆ. ಸೈಕಲ್‌ನ ಚಕ್ರಗಳು ಹಾಗೂ ಸೀಟ್ ಪೋಸ್ಟ್ (ಆಸನ ಕೂರುವ ಕಂಬಿ)ಗಳಲ್ಲಿ ಈ ಕ್ವಿಕ್ ರಿಲೀಸ್ ಇರುತ್ತದೆ. ಸೈಕಲ್‌ನ ಸೀಟ್‌ನ ಎತ್ತರವನ್ನು ವಿವಿಧ ರೀತಿಯ ರಸ್ತೆ ಪರಿಸ್ಥಿತಿ ಹಾಗೂ ಸವಾರನ ಎತ್ತರಕ್ಕೆ ಅನುಗುಣವಾಗಿ ಹೊಂದಿಸಬೇಕಾಗುತ್ತದೆ. ಇದನ್ನು ಯಾವಾಗೆಂದರೆ ಅವಾಗ ಸ್ಪ್ಯಾನರ್ ಹಿಡಿದು ಬದಲಿಸುವುದು ಕಷ್ಟ.

 

ಕ್ವಿಕ್ ರಿಲೀಸ್ ಸೌಲಭ್ಯ ಇರುವೆಡೆ ಸೈಕಲ್‌ನಲ್ಲಿ ಬೋಲ್ಟ್ ಇರುವುದೇ ಇಲ್ಲ. ಬದಲಿಗೆ ಈ ರಿಲೀಸ್ ಕೀಲಿಯನ್ನು ಗಟ್ಟಿಯಾಗಿ ಮೇಲೆತ್ತಿದರೆ ಸೀಟ್ ಪೋಸ್ಟ್ ಕಾಲರ್ ಸಡಿಲವಾಗುತ್ತದೆ. ಬೇಕಾದ ಎತ್ತರಕ್ಕೆ ಹೊಂದಿಸಿಕೊಂಡು ಮತ್ತೆ ಬಿಗಿಗೊಳಿಸಿದರೆ ಸಾಕು. ಅಂತೆಯೇ ಸೈಕಲ್ ಚಕ್ರಗಳನ್ನು ಬಿಚ್ಚಲೂ ಈ ಕ್ವಿಕ್ ರಿಲೀಸ್ ಇರುತ್ತದೆ. ಪ್ರವಾಸದ ವೇಳೆ ವಾಹನಗಳಲ್ಲಿ ಕೊಂಡೊಯ್ಯಲು ಇದು ಸಹಾಯಕಾರಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry