ಆಟ್ಟುಕಾಲ್ ಉತ್ಸವ: 35 ಲಕ್ಷ ಮಹಿಳೆಯರು

7

ಆಟ್ಟುಕಾಲ್ ಉತ್ಸವ: 35 ಲಕ್ಷ ಮಹಿಳೆಯರು

Published:
Updated:

ತಿರುವನಂತಪುರ (ಐಎಎನ್‌ಎಸ್): ಇಲ್ಲಿನ ಅಟ್ಟುಕಾಲ್ ಭಗವತಿ ದೇವಸ್ಥಾನದಲ್ಲಿ ಶನಿವಾರ ನಡೆದ ಪೊಂಗಲ್ ಉತ್ಸವದಲ್ಲಿ  35 ಲಕ್ಷಕ್ಕೂ ಅಧಿಕ ಮಹಿಳೆಯರು ಮಣ್ಣಿನ ಮಡಕೆ, ಅಡುಗೆ ಸಾಮಗ್ರಿಗಳೊಂದಿಗೆ ಪಾಲ್ಗೊಂಡು, ಪೊಂಗಲ್ ತಯಾರಿಸಿ  ಕಣ್ಮನ ಸೆಳೆದರು.ಹತ್ತು ದಿನಗಳ ಅಟ್ಟುಕಾಲ್ ಪೊಂಗಲ್ ಉತ್ಸವದ 9ನೇ ದಿನ ಈ ಸಾಮೂಹಿಕ ಪೊಂಗಲ್ ತಯಾರಿಕಾ ಉತ್ಸವ ನಡೆಯುತ್ತದೆ. ಈ ದಿನ ಇಲ್ಲಿಗೆ ಬರುವುದೆಂದರೆ ಮಹಿಳೆಯರಿಗೆ ಶಬರಿಮಲೆ ಯಾತ್ರೆ ಮಾಡಿದಷ್ಟೇ ಶ್ರೇಷ್ಠ ಎಂಬ ನಂಬಿಕೆ ಇದೆ.ಹೊಸ ಸೀರೆ ಉಟ್ಟ ಮಹಿಳೆಯರೇ ರಾಜಧಾನಿಯ ತುಂಬೆಲ್ಲ ತುಂಬಿಕೊಂಡಿದ್ದರು. ಪ್ರಮುಖ ರಸ್ತೆಗಳಲ್ಲಿ ಸಾಲು ಸಾಲಾಗಿ ನಿಂತಿದ್ದ ಅವರ ಸರದಿ ಸಾಲಿನ ಉದ್ದ 13 ಚದರ ಕಿ.ಮೀ. ವ್ಯಾಪ್ತಿಯಷ್ಟು ಚಾಚಿಕೊಂಡಿತ್ತು. 1997ರಲ್ಲಿ ಇಲ್ಲಿ 15 ಲಕ್ಷ ಮಹಿಳೆಯರು ಪಾಲ್ಗೊಳ್ಳುವ ಮೂಲಕ ಒಂದೇ ಕಡೆ ಅತಿ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದ ಗಿನ್ನಿಸ್ ದಾಖಲೆ ನಿರ್ಮಾಣವಾಗಿತ್ತು.ನಟಿಯರಾದ ಚಿಪ್ಪಿ (ಶಿಲ್ಪಾ), ಕಲ್ಪನಾ ಸಹಿತ ಹಲವು ಖ್ಯಾತನಾಮರು ಸಹ ಪೊಂಗಲ್ ತಯಾರಿಕೆಯಲ್ಲಿ ತೊಡಗಿದ್ದು ಕಂಡುಬಂತು.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry