ಸೋಮವಾರ, ಮಾರ್ಚ್ 1, 2021
24 °C

ಆಡಳಿತಗಾರರ ಮಕ್ಕಳಿಂದಲೇ ಕಾನೂನು ಉಲ್ಲಂಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಡಳಿತಗಾರರ ಮಕ್ಕಳಿಂದಲೇ ಕಾನೂನು ಉಲ್ಲಂಘನೆ

ಬೆಂಗಳೂರು:  ‘ರಾಜಕೀಯ ಕ್ಷೇತ್ರದ ಸೈದ್ಧಾಂತಿಕ ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವ ವ್ಯವಸ್ಥೆಗೆ  ಪೂರಕ. ಈ ಹಿಂದೆ ರಾಜಕಾರಣಿಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇತ್ತು. ಆದರೆ, ಇಂದು ರಾಜಕಾರಣಿಗಳಲ್ಲಿ ಕುರ್ಚಿಗಾಗಿ ಕಾದಾಟ ನಡೆದಿದೆ’  ಎಂದು ಲಾಲ್‌ ಬಹದ್ದೂರ್‌ ಶಾಸ್ತ್ರಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಟ್ರಸ್ಟಿ ಅನಿಲ್ ಶಾಸ್ತ್ರಿ ಬೇಸರ ವ್ಯಕ್ತಪಡಿಸಿದರು. ಎಂ.ವಿ.ಆರ್‌.ಪ್ರತಿಷ್ಠಾನ, ಲಾಲ್‌ ಬಹದ್ದೂರ್‌ ಶಾಸ್ತ್ರಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ 

ನಿಧಿಯ ಆಶ್ರಯದಲ್ಲಿ ಗಾಂಧಿಭವನದಲ್ಲಿ ಮಂಗಳವಾರ ನಡೆದ ‘ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ನೆನಪು– ರಾಜಕೀಯದಲ್ಲಿ ಮೌಲ್ಯಗಳು ಹಾಗೂ ಸಿದ್ಧಾಂತಗಳು’ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.‘1952ರಲ್ಲಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ಉತ್ತರ ಪ್ರದೇಶದ ಗೃಹ ಸಚಿವರಾಗಿದ್ದರು. ಶಾಸ್ತ್ರಿ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲು ಪ್ರಧಾನಿ ನೆಹರೂ ಒಲವು ತೋರಿದ್ದರು. ಆ ಸಮಯದಲ್ಲಿ ನೆಹರೂ ಹಾಗೂ ಕಾಂಗ್ರೆಸ್‌ ಮುಖಂಡ ಪುರುಷೋತ್ತಮ ದಾಸ್‌ ಟಂಡನ್‌ ನಡುವೆ ಭಿನ್ನಾಭಿಪ್ರಾಯ ಇತ್ತು. ಈ ನೇಮಕಕ್ಕೆ ಟಂಡನ್‌ ಅವರನ್ನು ಒಪ್ಪಿಸಬೇಕು ಎಂದು ನೆಹರೂ ಅವರು ಷರತ್ತು ಹಾಕಿದ್ದರು. ಶಾಸ್ತ್ರಿ ಅವರು ಟಂಡನ್‌ ಅವರ ಬಳಿ ಈ ವಿಷಯ ಪ್ರಸ್ತಾಪಿಸಿದಾಗ ಸಂತೋಷದಿಂದಲೇ ಒಪ್ಪಿದ್ದರು.ಬಹುಕಾಲದ ಬಳಿಕ ನೆಹರೂ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದೂ ಟಂಡನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದರು’ ಎಂದರು.ನೆಲದ ಕಾನೂನು ಬದಲಾವಣೆ ಅಗತ್ಯ:  ‘ನಮ್ಮ ದೇಶದಲ್ಲಿ ಈಗಲೂ ಬ್ರಿಟಿಷರ ಕಾಲದ ಕಾನೂನುಗಳು ಇವೆ. ಈ ನೆಲದ ಕಾನೂನುಗಳು ಬದಲಾಗಬೇಕು’ ಎಂದು ಅವರು ಆಶಿಸಿದರು.ಎಂ.ವಿ.ಆರ್‌.ಪ್ರತಿಷ್ಠಾನದ ಉಪಾ ಧ್ಯಕ್ಷ ಎಚ್‌. ಹನುಮಂತಪ್ಪ ಮಾತನಾಡಿ, ‘ರಾಜಕೀಯ ಕ್ಷೇತ್ರದಲ್ಲಿ ಇಂದು ಮೌಲ್ಯ ಹಾಗೂ ಸಿದ್ಧಾಂತಗಳಿಗೆ ಬೆಲೆಯಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.