ಭಾನುವಾರ, ಜೂನ್ 20, 2021
20 °C

ಆಡಳಿತದ ಅನ್ಯಾಯಕ್ಕೆ ಕನ್ನಡಿ ಹಿಡಿದ ಶಿವಮ್ಮ:

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಒಂದು ನಿವೇಶನ, ಸೂರಿಗಾಗಿ ಎಷ್ಟು ವರ್ಷ ಕಾದಿರಬಹುದು? ಶಬರಿ ಕೂಡ ರಾಮನಿಗಾಗಿ ಕಾದಿದ್ದು 14 ವರ್ಷ. ಆದರೆ ಈಕೆ ಬರೋಬರಿ 26 ವರ್ಷ ಒಂದು ಮನೆಗಾಗಿ ತದೇಕ ಚಿತ್ತದಿಂದ ಕಾಯುತ್ತಾ ಕುಳಿತಿದ್ದಾರೆ. ಪ್ರತಿ ವರ್ಷವೂ ಕನಸು ಇಂಗಿದೆಯೇ ಹೊರತು ಮನೆ ಮಾತ್ರ ಸಿಕ್ಕಿಲ್ಲ.ಆಕೆಯ ಕಣ್ಣಲ್ಲಿ ನೀರು ಹರಿದಾಡುತ್ತಿತ್ತು. ಕೊನೆಗೂ ಮನೆ ಸಿಗಲಿಲ್ಲ. ಅಲ್ಲಿ-ಇಲ್ಲಿ ಓಡಾಡಿ, ಬಸವಳಿದು 20 ವರ್ಷಗಳ ಹಿಂದೆ ಸರ್ಕಾರಿ ಗೋಮಾಳದಲ್ಲಿ ಗುಡಿಸಲು ಹಾಕಿಕೊಂಡು ಅಲ್ಲಿ ಯೇ ಜೀವನ ನಡೆಸುತ್ತಿದ್ದರು. ಈಗ ಆ ಗುಡಿಸಲನ್ನು ಖಾಲಿ ಮಾಡಬೇಕಾಗಿದೆ.`ನಾವೀಗ ಎಲ್ಲಿಗೆ ಹೋಗೋದು. ನಮ್ಮ ಗುಡಿಸಲು ಜಾಗವನ್ನು ಬೇರೆಯವರಿಗೆ ಕೊಟ್ಟಿ ್ದದಾರೆ. ಹಕ್ಕುಪತ್ರದ ಜೊತೆಗೆ ಸರ್ಕಾರಿ ಮನೆ ಕೊಡುತ್ತೇನೆ ಎಂದಿದ್ದರು. ಇದ್ದಕ್ಕಿದ್ದಂತೆ ನನ್ನ ಗುಡಿಸಲಿನ ಜಾಗದ ಹಕ್ಕುಪತ್ರ ಬೇರೆಯವರ ಪಾಲಾಗಿದೆ. ಈಗ ಗುಡಿಸಲು ಖಾಲಿ ಮಾಡ್ಬೇ ಕಂತೆ. ಇಲ್ಲದಿದ್ದರೆ ಪೊಲೀಸರಿಗೆ ಹೇಳ್ತಾರಂತೆ. ನನ್ನ ಜಾಗ ನನಗೆ ಕೊಡೋದಿಕ್ಕೆ ಆಗೋದಿಲ್ವ~ ಎಂದು ಮತ್ತೇ ಆಕೆ ಕಣ್ಣೀರಾದರು.-ಇದು ಅಧಿಕಾರಿಗಳ ಬಳಿ ಅಲೆದಲೆದು ಬೇಸತ್ತು `ಪ್ರಜಾವಾಣಿ~ ಕಚೇರಿಗೆ ತನ್ನಲ್ಲಿದ್ದ ಮುರುಟಿದ್ದ ದಾಖಲೆಗಳೊಂದಿಗೆ ಬಂದಿದ್ದ ಶಿರಾದ ಸೀಬಿ ಅಗ್ರಹಾರ ಗ್ರಾಮ ಪಂಚಾಯಿತಿ ಹನುಮಂತ ನಗರದ ಶಿವಮ್ಮ ಕತೆ. ಆಕೆಯ ಸರ್ಕಾರಿ ಮನೆಯ ಕನಸು ಶಬರಿಗಿಂತಲೂ ಹೆಚ್ಚು ಸಂಕಷ್ಟದ್ದು.ಜೋಪಾನವಾಗಿ ಕಾದಿರಿಸಿಕೊಂಡಿದ್ದ 1987 ರಲ್ಲಿ ಗ್ರಾಮ ಪಂಚಾಯಿತಿಗೆ ಸಲ್ಲಿಸಿದ್ದ ಅರ್ಜಿ, 1997ರಲ್ಲಿ ನೀಡಿದ್ದ ಮತ್ತೊಂದು ಅರ್ಜಿಯನ್ನು ನೀಡಿದ ಆಕೆ `ನಮಗೆ ನ್ಯಾಯ ಎಂಬುದು ಇಲ್ಲವೇ?~ ಎಂದು ಪ್ರಶ್ನಿಸಿದರು.

ಶಿವಮ್ಮ ಅವರೊಂದಿಗೆ ಕಚೇರಿಗೆ ಬಂದಿದ್ದ ಹನುಮಂತಪುರದ 15-20 ಗುಡಿಸಲುವಾಸಿಗಳ ಪ್ರಶ್ನೆ ಕೂಡ `ನಮಗೆ ನ್ಯಾಯ ಎಂಬುದು ಇಲ್ಲವೇ?~ ಎಂದೇ ಆಗಿತ್ತು.ವಸಂತನರಾಸಪುರ ಕೈಗಾರಿಕಾ ಪ್ರದೇಶದಲ್ಲಿ ರುವ ಹನುಮಂತಪುರಕ್ಕೆ ಈಗ ಎಲ್ಲಿಲ್ಲದ ಬೇಡಿಕೆ. ಇಲ್ಲಿನ ಭೂಮಿಗೀಗ ಚಿನ್ನದ ಬೆಲೆ ಬಂದಿದೆ. ಚಿನ್ನದ ಬೆಲೆಯ ಭೂಮಿಯನ್ನು ಬಡವರಿಗೆ ಕೊಡಲು ಅಧಿಕಾರಿಗಳು, ಅಲ್ಲಿನ ಶಾಸಕರಿಗೆ ಮನಸ್ಸು ಎಲ್ಲಿಂದ ಬರಬೇಕು ಎಂಬುದಕ್ಕೆ ಈ ಜನರ ದನಿ ಅರ್ಥ ನೀಡುತ್ತಿತ್ತು.ಹನುಮಂತರಪುರದ ಮೂರೂವರೆ ಎಕರೆ ಗೋಮಾಳ ವಾಸಭೂಮಿ. ಗೋಮಾಳ ನಿವೇಶನ ವನ್ನಾಗಿ ಪರಿವರ್ತಿಸಲಾಗಿದೆ. ಆದರೆ ನಿವೇಶನ ಹಕ್ಕುಪತ್ರ ಮಾತ್ರ ಇವರಿಗೆ ಸಿಗದೆ ಅನ್ಯರ ಪಾಲಾಗುತ್ತಿದೆ. ಗುಡಿಸಲು ಖಾಲಿ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದರು.ಇಂದಿರಾ ಅವಾಜ್, ಬಸವ ವಸತಿ, ಅಂಬೇಡ್ಕರ್ ವಸತಿ, ಎಸ್‌ಡಿಪಿ ಯೋಜನೆಯಡಿ 70 ಸಾವಿರದಷ್ಟು ಮನೆಗಳು ಈ ವರ್ಷ ಬಂದಿವೆ. ಇವುಗಳ ಹಂಚಿಕೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಗ್ರಾಮ ಸಭೆಗಳಲ್ಲಿ ಈ ಮನೆಗಳ ಫಲಾನುಭವಿಗಳ ಹಂಚಿಕೆಯಾಗಬೇಕು.ಆದರೆ ಗ್ರಾಮಸಭೆ ಮೂಲಕ ನೆಪಮಾತ್ರಕ್ಕೆ ಮನೆ ಹಂಚಿಕೆ ದಾಖಲೆ ಗಳಲ್ಲಿ ನಮೂದಾದರೂ ಗ್ರಾಮ ಪಂಚಾಯತ್ ಸಭೆಗಳಲ್ಲಿ ನಿರ್ಣಯ ಕೈಗೊಳ್ಳುವಾಗ ರಾಜ ಕಾರಣಿಗಳ ಹಿಂಬಾಲಕರಿಗೆ ಮನೆ, ನಿವೇಶನ ನೀಡಲಾಗುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬಂದಿದೆ.ಗ್ರಾಮ ಸಭೆಯಲ್ಲಿ ಹಕ್ಕು ಪತ್ರ, ಮನೆ ನೀಡುವು ದಾಗಿ ಹೇಳಿದ್ದರು. ಆದರೆ ಈಗ ಹಕ್ಕುಪತ್ರ, ಮನೆ ಗ್ರಾಮದಲ್ಲಿ ವಾಸವಿಲ್ಲದ ಬೇರೊಬ್ಬರಿಗೆ ನೀಡಲಾ ಗಿದೆ. ಮನೆ ಹಂಚಿಕೆಯಲ್ಲಿ ಭಾರೀ ಮೋಸವಾಗಿದೆ ಎಂದು ಹನುಮಂತಪುರದ ಶಕೀಲಾ ದೂರಿದರು.`ಹಕ್ಕುಪತ್ರ, ಮನೆ ಹಂಚಿಕೆಯಲ್ಲಾದ ವಂಚನೆ ಕುರಿತು ವಸತಿ ಸಚಿವ ಸೋಮಣ್ಣ ಸಹಿತ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ, ಜಿಲ್ಲಾಧಿ ಕಾರಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ದೂರಲಾಗಿದೆ. ತುಮಕೂರು ಸೇರಿದಂತೆ ಹೊರಗಿನ ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಈ ಜನರು ಕೂಲಿ ಕಾರ್ಮಿಕರು.ಕಾನೂನಿನ ಕುರಿತು ಅವರಿಗೆ ತಿಳುವಳಿಕೆ ಇಲ್ಲ. ಪ್ರಕರಣ ತನಿಖೆ ಆಗಬೇಕು~ ಎಂದು ನಿವೃತ್ತ ಸರ್ಕಾರಿ ನೌಕರ ಪರಮಶಿವಯ್ಯ ಒತ್ತಾಯಿಸಿದರು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಶಿಳ್ಳೆಕ್ಯಾತ, ಹಂದಿಜೋಗಿ ಸಮುದಾಯದವರು. ಕಡು ಬಡತನ, ಕೂಲಿ ಮಾಡಿ ಜೀವನ ದೂಡುತ್ತಾ ಅನೇಕ ವರ್ಷಗಳಿಂದ ಇದೇ ಜಾಗದಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿರುವ ಈ ಜನರಿಗೆ ನಿಜವಾಗಿ ಹಕ್ಕು ಪತ್ರದೊಂದಿಗೆ ಮನೆ ನೀಡಬೇಕು. ಭೂಮಿಯ ಬೆಲೆ ಬಡವರು ಮತ್ತೆ ನಿರಾಶ್ರಿತ ರಾಗುವಂತೆ ಮಾಡುತ್ತಿದೆ.ವಸತಿ ಯೋಜನೆ ಹುಳುಕಿಗೆ, ರಾಜಕೀಯ, ಅಧಿಕಾರಸ್ತರ ಪ್ರಭಾವಕ್ಕೆ ಇದು ಉದಾಹರಣೆ. ಬೆಲೆ ಬಾಳುವ ಭೂಮಿ ಇರುವ ಬಹುತೇಕ ಕಡೆಗಳಲ್ಲಿ ಇಂತದೇ ಸ್ಥಿತಿ ಇರುತ್ತದೆ ಎನ್ನುತ್ತಾರೆ ವಕೀಲ ಎಸ್.ರಮೇಶ್.`ಯಾವುದೇ ಗ್ರಾಮಸಭೆ ನಿಗದಿತ ಸಮಯಕ್ಕೆ ಸೇರುವುದಿಲ್ಲ. ಅಧಿಕಾರಿಗಳು,ಶಾಸಕರು 3-4 ಗಂಟೆ ತಡವಾಗಿ ಸಭೆಗೆ ಬರುವುದರಿಂದ ಬಡವರು ಕಾಯದೇ ಕೂಲಿ ಕೆಲಸಕ್ಕೆ ಹೋಗುತ್ತಾರೆ. ರಾಜಕಾರಣಿಗಳ ಹಿಂಬಾಲಿಕರು ಸೇರಿ ದಾಖಲೆಗಾಗಿ ಗ್ರಾಮಸಭೆ ನಡೆಸುತ್ತಾರೆ. ನಿಜವಾದ ಫಲಾನುಭವಿ ಹೊರಗಿಟ್ಟು ಬೇಕಾದವರಿಗೆ ನಿವೇಶನ ಹಂಚುವುದರಿಂದ ಸಮಸ್ಯೆಗೆ ಕಾರಣ~ ಎನ್ನುತ್ತಾರೆ ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಸಯ್ಯದ್ ಮುಜೀಬ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.