ಗುರುವಾರ , ಜೂನ್ 24, 2021
23 °C

ಆಡಿ ಬಾ ನನ ಕಂದ ಅಂಗಾಲ ತೊಳೆದೇನು...

ಶರಣು ಗಡೇದ,ತಾಳಿಕೋಟೆ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮೇಲ: ‘ಬಾಲಕಾಯ್ದೆ ಜಾರಿಯಾದಾಗಿ ನಿಂದ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಘೋಷಣೆಗಳು ಪ್ರಾರಂಭವಾಗಿವೆ. ಆದರೂ  ಅವರ ಬಗ್ಗೆ ಕಾಳಜಿ ಇಲ್ಲ’ ಎಂದು ಮಕ್ಕಳ ಸಾಹಿತಿ ಹ.ಮ. ಪೂಜಾರಿ ಬೇಸರ ವ್ಯಕ್ತಪಡಿಸಿದರು.ಸಾಹಿತ್ಯ ಸಮ್ಮೇಳನದ ಮೊದಲ ದಿನ ‘ಸಾಹಿತ್ಯ ಸಂಸ್ಕೃತಿ’ ಗೋಷ್ಠಿಯಲ್ಲಿ ‘ಮಕ್ಕಳ ಸಾಹಿತ್ಯದ ನೆಲೆಗಳು’ಕುರಿತು ಮಾತನಾಡಿದ ಅವರು, ‘ಜನಪದ ಸಾಹಿತ್ಯದಿಂದಲೇ ಮಕ್ಕಳ ಸಾಹಿತ್ಯ ಬೆಳೆದುಬಂದಿದೆ. ಆಡಿಬಾ ನನ ಕಂದ ಅಂಗಾಲು ತೊಳದೇನು, ಆಚಾರಕ್ಕರಸಾಗು ಮೊದಲಾದ ಜನಪದ ಸಾಹಿತ್ಯ ಮಕ್ಕಳನ್ನು ಕುರಿತು ರಚನೆ ಯಾಗಿವೆ. ಮಕ್ಕಳ ಸಾಹಿತ್ಯದಲ್ಲಿನ ಮಕ್ಕಳ ಹಾಡುಗಳು ಮಕ್ಕಳ ಮನಸ್ಸುಗಳನ್ನು ಅರಳಿಸು ತ್ತವೆ. ಇದಕ್ಕೆ ಮಾತೃಭಾಷೆಯಲ್ಲಿ ಶಿಕ್ಷಣ ದೊರೆ ತರೆ ಮಾತ್ರ ಮಗು ಅದನ್ನು ಅರ್ಥೈಸಿಕೊಳ್ಳಲು, ಮಕ್ಕಳ ಮನಸ್ಸು ವಿಕಾಸಕ್ಕೆ ನೆರವಾಗುತ್ತವೆ ಎಂದರು.‘ಜನಪದ ಸಾಹಿತ್ಯ ರಚಿಸಿದವರಲ್ಲಿ ಶೇ.80 ರಷ್ಟು ಮಹಿಳೆಯರೇ ಇದ್ದರೂ ಕೂಡ ಅವರ ಹರಕೆ ಕೇವಲ ಗಂಡುಮಕ್ಕಳ ಕಡೆಗೆ ಮಾತ್ರ ಇದೆ. ಮಕ್ಕಳ ಸಾಹಿತ್ಯದಲ್ಲೂ ಮಹಿಳೆಯರ ಕಡೆಗಣನೆ ಯಾಗಿದೆ’ ಎಂದು ಮಾತು ಕೂಡಿಸಿದವರು ‘ಮಹಿಳಾ ಸಾಹಿತ್ಯ ಸಾಧನೆ’ ಬಗ್ಗೆ ಉಪನ್ಯಾಸ ನೀಡಿದ ವಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಡಾ.ವಿಜಯಾದೇವಿ.‘ಜಗತ್ತಿಗೆ ಮಾತು ಕಲಿಸಿದ ಮಾತೆಯೇ ಮಹಿಳೆಯನ್ನು  ನಿರ್ಲಕ್ಷಿಸಿದಳು. ಮಹಿಳೆಗೆ ತಾಯಿಯಿಂದ ಹರಕೆಯ ಬದಲು ಶಿಕ್ಷೆಯ ಶಿಕ್ಷಣ ಸಿಕ್ಕಿದೆ. ಶಿಷ್ಟ ಸಾಹಿತ್ಯ, ಜನಪದ ಸಾಹಿತ್ಯದಲ್ಲಿ ಮಹಿಳಾ ಸಾಹಿತ್ಯದ ಬಗ್ಗೆ ಕಣ್ಮುಚ್ಚಿದರೂ, ಕಾಲ ಕಣ್ಣು ತೆರೆದು ಇಂದು ಅನೇಕ ಮಹಿಳಾ ಸಾಹಿತಿ ಗಳು ಬೆಳೆದು ಬರಲು ಕಾರಣವಾಗಿದೆ’ ಎಂದರು.‘ದಲಿತ ಸಾಹಿತ್ಯ–ವರ್ತಮಾನದ ಗತಿಶೀಲತೆ’ ಬಗೆಗೆ ಮಾತನಾಡಿದ ಡಾ.ಅರ್ಜುನ ಗೊಳಸಂಗಿ, ‘ಶೋಷಿತ ಸಮುದಾಯದ ಬವಣೆಯೇ ದಲಿತ ಸಾಹಿತ್ಯ. ಅದು ಬೆವರಿನ ಸಾಹಿತ್ಯ.  ಶ್ರಮಿಕರ ಸಾಹಿತ್ಯ. ಸ್ವಾತಂತ್ರ್ಯಾನಂತರವೂ ಕೇರಿಗಳಲ್ಲಿ ಸ್ವಾತಂತ್ರ್ಯ ಕನಸಾಗಿದೆ. ಅವು ಸುಧಾರಣೆಯಾ ಗಿಲ್ಲ. ದಲಿತ ಪ್ರಜ್ಞೆಯ ನೆಲೆಯಲ್ಲಿ ನುಡಿ ಯಲ್ಲಿರುವ ಸಮಾನತೆ ನಡೆಯಲ್ಲಿ ಬಂದಾಗ ದಲಿತರಿಗೆ ಮತ್ತು ಅವರ ಸಾಹಿತ್ಯಕ್ಕೆ ಬೆಲೆ ಬಂದೀತು’ ಎಂದರು.ಸಮಾರೋಪ ಭಾಷಣ ಮಾತನಾಡಿದ ಹಿರಿಯ ಸಾಹಿತಿ ಡಾ.ಎಂ.ಎಂ. ಪಡಶೆಟ್ಟಿ, ‘ಕನ್ನಡ ಸಾಹಿತ್ಯದ ಪ್ರಧಾನ ವಾಹಿನಿಯಲ್ಲಿ ಅಂಚಿನಲ್ಲಿ ನಿಂತವು ಮಕ್ಕಳ ಸಾಹಿತ್ಯ, ಮಹಿಳಾ ಸಾಹಿತ್ಯ ಹಾಗೂ ದಲಿತ ಸಾಹಿತ್ಯ.  ಮಹಿಳೆಯರಿಗೆ ನ್ಯಾಯ, ಸ್ವಾತಂತ್ರ್ಯ ಸಮಾನತೆ ಕೊಟ್ಟವರು ವಚನಕಾರರು. ಆಗ ದಲಿತ ಸಾಹಿತ್ಯ, ಮಹಿಳಾ ಸಾಹಿತ್ಯ ಬೆಳೆದುಬಂದವು. ಆದರೆ, ನಮ್ಮನ್ನಾಳುವ ಪ್ರಭುತ್ವ ಹಾಗೂ ಅದಕ್ಕೆ ಬೆಂಬಲವಾಗಿ ನಿಂತ ಪುರೋಹಿತಶಾಹಿಗಳಿಂದಾಗಿ ಶರಣ ಸಾಹಿತ್ಯ ಸಂಸ್ಕೃತಿ ಅಳಿಯಲು ಕಾರಣವಾಯಿತು’ ಎಂದರು.‘ವಿಜಾಪುರ ಮಕ್ಕಳ ಸಾಹಿತ್ಯದ ತೊಟ್ಟಿಲು. ವಚನ ಸಾಹಿತ್ಯದ ತೊಟ್ಟಿಲು. ಆದರೆ, ಶರಣ ಚಳವಳಿಯನ್ನು ಪ್ರಸಾರ–ಪ್ರಚಾರ ಮಾಡುವಲ್ಲಿ ಇಂದಿಗೂ ವಿಫಲರಾಗಿದ್ದೇವೆ.  ಇಂದಿನ ಪ್ರಸ್ತುತತೆ ಯಲ್ಲಿ ಸಾಹಿತ್ಯದ ಪ್ರಧಾನ ವಾಹಿನಿಯಲ್ಲಿ ಅಳಿವನಂಚಿನಲ್ಲಿ ಉಳಿದಿರುವ ಮಹಿಳಾ, ಮಕ್ಕಳ ಹಾಗೂ ದಲಿತ ಸಾಹಿತ್ಯದ ಬೇರುಗಳು ಆಳವಾಗಬೇಕು’ ಎಂದು ಅಭಿಪ್ರಾಯಪಟ್ಟರು.ಇಂಡಿ ಡಿವೈಎಸ್‌ಪಿ ಡಾ.ಶಿವಕುಮಾರ ಗುಣಾರಿ, ಸಮ್ಮೆಳನ ಸರ್ವಾಧ್ಯಕ್ಷೆ ಶಶಿಕಲಾ ವಸ್ತ್ರದ ಉಪಸ್ಥಿತರಿದ್ದರು.  ಡಾ.ಶ್ರೀಶೈಲ ಪಾಟೀಲ ಸ್ವಾಗತಿಸಿದರು. ಎಸ್‌.ಬಿ.ಚೌಧರಿ ನಿರೂಪಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.