ಆಡುಗೋಡಿ ರೈಡರ್ಸ್‌ಗೆ ಐಪಿಎಲ್ ಬಹುಮಾನ

ಮಂಗಳವಾರ, ಜೂಲೈ 23, 2019
27 °C

ಆಡುಗೋಡಿ ರೈಡರ್ಸ್‌ಗೆ ಐಪಿಎಲ್ ಬಹುಮಾನ

Published:
Updated:

ರೇಡಿಯೊ ಸಿಟಿ 91.1 ಎಫ್‌ಎಂ ಆಯೋಜಿಸಿದ್ದ ಗಲ್ಲಿ ಪ್ರೀಮಿಯರ್ ಲೀಗ್‌ನ ಫೈನಲ್ಸ್‌ನಲ್ಲಿ ಆಡುಗೋಡಿ ರೈಡರ್ಸ್ ತಂಡ ವಿಜಯದ ನಗು ಬೀರಿದೆ.ರೇಡಿಯೋದ ಕೇಳುಗ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಫೈನಲ್ಸ್ ಫಲಿತಾಂಶದ ನಿರೀಕ್ಷೆಯಲ್ಲಿದ್ದರು. ಈ ಸರಣಿಯಲ್ಲಿ ಭಾಗವಹಿಸಲು ದೇಶದ ವಿವಿಧೆಡೆಯ 7000 ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದವು. 50 ಸಾವಿರ ರೂ ಬಹುಮಾನ ಬಾಚಿಕೊಳ್ಳಲು ಸೆಣಸಾಟ ನಡೆಸಿದ್ದವು.ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್, ಬೆಂಗಳೂರು, ಪುಣೆ ಮತ್ತು ಅಹಮದಾಬಾದ್ ನಲ್ಲಿ ಪೂರ್ವಭಾವಿ ಸುತ್ತಿನ ಪಂದ್ಯ ನಡೆದಿತ್ತು. ಕೊನೆಯಲ್ಲಿ ಜನ ಬೆಂಗಳೂರಿನ ಆಡುಗೋಡಿ ರೈಡರ್ಸ್ ಪಾಲಾಯಿತು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry