ಆಡುವ ಮಗುವಿಗೂ ಹರೆಯ ಬಂತೇ?

7

ಆಡುವ ಮಗುವಿಗೂ ಹರೆಯ ಬಂತೇ?

Published:
Updated:

ಶ್ರೀಮತಿ ಪ್ರೇಮಾ (ಹೆಸರು ಬದಲಿಸಿದೆ) ಸಮಾಲೋಚನೆ ಸಲುವಾಗಿ ತಮ್ಮ ಪುತ್ರಿ ರಿಷಿಕಾಳನ್ನು ಕರೆ ತಂದಿದ್ದರು. ಆರು ವರ್ಷ ಆರು ತಿಂಗಳಿನ ಬಾಲಕಿಯ ಶರೀರದ ಆಕಾರವನ್ನು ಸಹಪಾಠಿಗಳು ಛೇಡಿಸುತ್ತಿದ್ದರು. ಸ್ಥೂಲಕಾಯದ ಆಕೆಯ ಸ್ತನ ಅಭಿವೃದ್ಧಿಯ ಹಂತದಲ್ಲಿರುವುದು ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗಿತ್ತು.ಅಂದರೆ ಆಕೆಯ ಸಹಪಾಠಿಗಳಿಗಿಂತ ಸಾಕಷ್ಟು ಮೊದಲೇ ಆಕೆಯಲ್ಲಿ ಪ್ರೌಢಾವಸ್ಥೆಯ ಲಕ್ಷಣಗಳು ಕಾಣಿಸತೊಡಗಿದ್ದವು. ರಿಷಿಕಾ ಪ್ರಕರಣದಲ್ಲಿ ಸ್ಥೂಲಕಾಯ ಶೀಘ್ರ ಪ್ರೌಢಾವಸ್ಥೆಗೆ ಕಾರಣವಾಗಿತ್ತು.

ಇಂದಿನ ದಿನಗಳಲ್ಲಿ ಬಾಲಕಿಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಬೇಗನೇ ಪ್ರೌಢಾವಸ್ಥೆಗೆ ಬರುವುದು ಸಾಮಾನ್ಯ.ಅಸಮರ್ಪಕ ಮತ್ತು ದೋಷಯುಕ್ತ ಆಹಾರ ಸೇವನೆ, ದೈಹಿಕ ಚಟುವಟಿಕೆಗಳ ಕೊರತೆಯ ಪರಿಣಾಮವಾಗಿ ಮಕ್ಕಳು ಬೇಗನೇ ಪ್ರೌಢಾವಸ್ಥೆಗೆ ಜಾರಿಕೊಳ್ಳುತ್ತಿದ್ದಾರೆ. ಇದು ಹುಡುಗಿಯರ ಸಾಮಾನ್ಯ ಗ್ರಂಥಿಯಲ್ಲಿನ ಬದಲಾವಣೆಗೂ ಕಾರಣವಾಗುತ್ತದೆ.ನೀತಿ (ಹೆಸರು ಬದಲಿಸಿದೆ) 5ನೇ ವರ್ಷಕ್ಕೇ ಮುಟ್ಟಾಗಿದ್ದಳು. ಹೆತ್ತವರು ಅವಳ ಸ್ತನ ಬೆಳವಣಿಗೆಯ ಆರಂಭಿಕ ಲಕ್ಷಣಗಳನ್ನು ಗುರುತಿಸಲು ವಿಫಲರಾಗಿದ್ದರು. ಐದು ವರ್ಷದ ಬಾಲಕಿಗೆ ರಜೋದರ್ಶನವಾಗುವ ಸಾಧ್ಯತೆಯನ್ನು ಅವರು ಈ ಮೊದಲು ಕೇಳಿಯೇ ಇರಲಿಲ್ಲ. ಗಾಬರಿಗೊಂಡ ಪೋಷಕರು ನಂತರ ವೈದ್ಯರ ಮೊರೆ ಹೋದರು.ಪರೀಕ್ಷೆಯಿಂದ ತಿಳಿದುಬಂದದ್ದೆಂದರೆ, ನೀತಿಯ ವೆುದುಳಿನಲ್ಲಿ ಉಂಟಾಗಿದ್ದ ಸಮಸ್ಯೆಯಿಂದಾಗಿ ಅಪ್ರಾಪ್ತ ವಯಸ್ಸಿನಲ್ಲೇ ಅವಳಿಗೆ ಪ್ರೌಢಾವಸ್ಥೆ ಆರಂಭವಾಗಿತ್ತು. ನಂತರ ಆರಂಭಿಕ ಹರೆಯ ನಿಲ್ಲಿಸಲು ಹಾರ್ಮೋನ್ ಚುಚ್ಚುಮದ್ದು ನೀಡಲಾಯಿತು. ಇಲ್ಲದಿದ್ದರೆ ನೀತಿ ಮುಂದೆ * ಅಡಿಗಿಂತ ಹೆಚ್ಚಾಗಿ ಬೆಳೆಯುತ್ತಲೇ ಇರಲಿಲ್ಲ.ರಿಷಿಕಾ ಮತ್ತು ನೀತಿ ನಮ್ಮ ಸಮಾಜದಲ್ಲಿನ ಸಾವಿರಾರು ಬಾಲಕಿಯರ ಸಮಸ್ಯೆಗಳನ್ನು ಬಿಂಬಿಸುತ್ತಿದ್ದಾರೆ. ಅದುವೇ ಅಪ್ರಾಪ್ತ ವಯಸ್ಸಿನಲ್ಲಿ ಋತುಮತಿಯರಾಗುವುದು. ಹೀಗೆ ಸಣ್ಣ ವಯಸ್ಸಿನಲ್ಲೇ ಪ್ರೌಢಾವಸ್ಥೆ ತಲುಪುವ ಸಮಸ್ಯೆ ಹುಡುಗರಿಗಿಂತ ಹುಡುಗಿಯರಲ್ಲಿ ಹತ್ತು ಪಟ್ಟು ಹೆಚ್ಚಾಗಿದೆ.ಪ್ರಾಪ್ತ ಪ್ರೌಢಾವಸ್ಥೆಯ ಲಕ್ಷಣಗಳು

ಹುಡುಗಿಯರಲ್ಲಿ ಪ್ರೌಢಾವಸ್ಥೆ ಬರುವಾಗ ಮೊದಲನೆಯ ಹಂತದಲ್ಲಿ ಸ್ತನಗಳ ಬೆಳವಣಿಗೆ ಪ್ರಾರಂಭವಾಗುತ್ತದೆ. ಇದು 8 ಮತ್ತು 13 ವರ್ಷಗಳ ನಡುವೆ ನಡೆಯುತ್ತದೆ. ಮುಟ್ಟಿನ ನಂತರ ಎರಡರಿಂದ ಎರಡೂವರೆ ವರ್ಷಗಳೊಳಗೆ ಸ್ತನಗಳು ಅಭಿವೃದ್ಧಿಯಾಗುತ್ತವೆ.ಆರಂಭದ ನಂತರ ಒಂದು ಹಂತದಲ್ಲಿ ಉತ್ತಮ ಬೆಳವಣಿಗೆಯಾಗುತ್ತದೆ. ಮುಟ್ಟಾದ ಎರಡು ವರ್ಷಗಳ ನಂತರ ಬೆಳವಣಿಗೆ ಮಂದಗತಿಗೆ ತಿರುಗುತ್ತದೆ. ನಂತರ ಕಂಕುಳಲ್ಲಿ ರೋಮ, ಮೊಡವೆ, ವರ್ತನೆಯಲ್ಲಿ ಬದಲಾವಣೆ ಇತ್ಯಾದಿಗಳನ್ನು ಗಮನಿಸಬಹುದು.ಹುಡುಗಿಯರಲ್ಲಿ 8 ವರ್ಷಕ್ಕೆ ಮೊದಲೇ ಪ್ರೌಢಾವಸ್ಥೆಯ ಲಕ್ಷಣಗಳು ಕಂಡುಬಂದರೆ ಇದನ್ನು ಅಪ್ರಾಪ್ತ ಪ್ರೌಢಾವಸ್ಥೆ ಎನ್ನಬಹುದು. ಕಳೆದ ಎರಡು ದಶಕಗಳಿಂದ ಹುಡುಗಿಯರ ಶೀಘ್ರ ಆರಂಭಿಕ ಪ್ರೌಢಾವಸ್ಥೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ವಿಶೇಷವಾಗಿ, ಅಭಿವೃದ್ಧಿಶೀಲ ದೇಶಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಪೌಷ್ಟಿಕ ಆಹಾರ ಲಭ್ಯತೆಯಲ್ಲಿ ಸುಧಾರಣೆ ಆಗಿರುವುದೂ ಇದಕ್ಕೆ ಕಾರಣ ಆಗಿರಬಹುದು.ಯಾಕೆ ಕೆಲವರು ವೇಗವಾಗಿ ಬೆಳೆಯುತ್ತಾರೆ?

ಅಪ್ರಾಪ್ತ ವಯಸ್ಸಿನಲ್ಲಿ ಪ್ರೌಢಾವಸ್ಥೆ ತಲುಪುವ ಬಹುತೇಕ ಹುಡುಗಿಯರು 6ರಿಂದ 8 ವರ್ಷಗಳಲ್ಲೇ ಸಾಮಾನ್ಯ ಪ್ರೌಢಾವಸ್ಥೆ ಪ್ರಕ್ರಿಯೆಗೆ ಒಳಗಾಗುತ್ತಾರೆ. ಇದಕ್ಕೆ ಕಾರಣ ಅವರ ಜೈವಿಕ ಗಡಿಯಾರ. ಇನ್ನು ಕೆಲವು ಹುಡುಗಿಯರಲ್ಲಿ ಇನ್ನೂ ಬೇಗ ಅಂದರೆ 6 ವರ್ಷಕ್ಕೆ ಮೊದಲೇ ಪ್ರೌಢಾವಸ್ಥೆಯ ಲಕ್ಷಣ ಕಂಡು ಬರುತ್ತದೆ.

 

ಇದಕ್ಕೆ ವೆುದುಳು, ಥೈರಾಯಿಡ್ ಮತ್ತು ಇತರ ಹಾರ್ಮೋನ್ ಸಮಸ್ಯೆಗಳು, ಗೆಡ್ಡೆ ಅಥವಾ ಸೋಂಕು ಕಾರಣ ಇರಬಹುದು. ಬೊಜ್ಜು ಅಥವಾ ತೂಕ ಹೆಚ್ಚಳದ ಪರಿಣಾಮ, ಸೌಂದರ್ಯ ಸಾಧನಗಳು, ಕೆಲ ಆಹಾರ ಪದಾರ್ಥಗಳ ಪರಿಣಾಮವೂ ಇದಾಗಿರಬಹುದು. ಅಪ್ರಾಪ್ತ ವಯಸ್ಸಿನಲ್ಲಿ ಪ್ರೌಢಾವಸ್ಥೆ ಬರುವುದರಿಂದ ದೈಹಿಕ ಬೆಳವಣಿಗೆ ಹಾಗೂ ಮೂಳೆ ಪಕ್ವತೆಯ ಸಮಸ್ಯೆ ಉಂಟಾಗಬಹುದು. ಹಾರ್ಮೋನುಗಳ ಬದಲಾವಣೆಯೂ ತೊಂದರೆ ಉಂಟು ಮಾಡುತ್ತದೆ. ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳು ಸಹ ಕಂಡುಬರಬಹುದು. ಏಳು ವರ್ಷದ ಮಗು 12 ವರ್ಷಕ್ಕೆ ಸಮನಾದ ಪ್ರೌಢಾವಸ್ಥೆಗೆ ಬಂದಾಗ ಆ ಎಳೆಯ ಬಾಲಕಿಗೆ ಅದನ್ನು ಎದುರಿಸುವುದು ತುಸು ಕಷ್ಟವಾಗಬಹುದು.ಇದಕ್ಕೆ ಹೇಗೆ ಪ್ರತಿಕ್ರಿಯಿಸುವುದು ಎಂದು ಗೊತ್ತಾಗದಿರಬಹುದು. ಅವರು ಲೈಂಗಿಕ ಶೋಷಣೆಗೆ ಒಳಗಾಗುವ ಸಾಧ್ಯತೆ ಸಹ ಹೆಚ್ಚು ಎಂದು ಅಧ್ಯಯನಗಳು ತಿಳಿಸುತ್ತವೆ. ನರ್ಸರಿ ಅಥವಾ ಪ್ರಾಥಮಿಕ ಶಾಲೆಯಲ್ಲಿ ಓದುವ ಬಾಲಕಿ ಮಾಸಿಕ ಋತುಚಕ್ರದ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟವೇ ಸರಿ.ಆದ್ದರಿಂದ ಮಕ್ಕಳ ಅಪ್ರಾಪ್ತ ಹರೆಯ ಎದುರಿಸಲು ಪೋಷಕರು ಮಾನಸಿಕವಾಗಿ ಸಿದ್ಧರಾಗಬೇಕು. ಈ ಬಗ್ಗೆ ಪೋಷಕರು ಮತ್ತು ಮಕ್ಕಳು ಇಬ್ಬರಿಗೂ ಸೂಕ್ತ ಶಿಕ್ಷಣದ ಅಗತ್ಯ ಇದೆ. ಮಕ್ಕಳು ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ, ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಹೊಣೆ ಪೋಷಕರ ಮೇಲಿರುತ್ತದೆ. ಅಲ್ಲದೆ ಶಾಲೆಗಳಲ್ಲಿ ಆರಂಭಿಕ ಹರೆಯದ ಬಗ್ಗೆ ನವೀನ ಬೋಧನೆ ಮತ್ತು ಜಾಗೃತಿ ಮೂಡಿಸಬೇಕಾದುದು ಸಹ ಅಗತ್ಯ.ತ್ವರಿತ ಪ್ರೌಢಾವಸ್ಥೆ ಹೇಗೆ ಎದುರಿಸಬೇಕು?

*ಪ್ರೌಢಾವಸ್ಥೆಯ ಲಕ್ಷಣಗಳು ಮತ್ತು ಅದನ್ನು ನಿರ್ವಹಿಸುವ ಬಗ್ಗೆ ಮಕ್ಕಳಿಗೆ ಪೋಷಕರು ತಿಳಿ ಹೇಳಬೇಕು*ಬಾಲಕಿಯರಲ್ಲಿ ಎಂಟು ವರ್ಷಕ್ಕೆ ಮೊದಲೇ ಸ್ತನಗಳ ಬೆಳವಣಿಗೆ ಕಂಡುಬಂದರೆ ವೈದ್ಯಕೀಯ ಸಲಹೆ ಪಡೆದುಕೊಳ್ಳಬೇಕು*ಬಾಲಕಿಯರ ವಯಸ್ಸನ್ನು ಆಧರಿಸಿ ಪೋಷಕರು ಇಂತಹ ಬೆಳವಣಿಗೆ ಸಾಮಾನ್ಯ ಎಂದು ಮಕ್ಕಳಿಗೆ ಧೈರ್ಯ ತುಂಬಬೇಕು. ಅರಿವು ಮೂಡಿಸಬೇಕು*ಸ್ವಯಂ ರಕ್ಷಣೆ, ವೈಯಕ್ತಿಕ ಆರೋಗ್ಯ ಮತ್ತು ಲೈಂಗಿಕ ಶಿಕ್ಷಣ ನೀಡಬೇಕು*ಮಕ್ಕಳ ಮೇಲೆ ಇತರರು ಶೋಷಣೆ ಮಾಡದಂತೆ ಎಚ್ಚರ ವಹಿಸಬೇಕು. ಮಕ್ಕಳ ಚಲನವಲನ, ಸ್ವಭಾವ ಪರಿವರ್ತನೆ ಬಗ್ಗೆ ಕಾಳಜಿ ವಹಿಸಬೇಕು*ಖಿನ್ನತೆಯಂತಹ ವರ್ತನಾ ಬದಲಾವಣೆಯನ್ನು ಗಮನಿಸಬೇಕು*ಇದಕ್ಕೆ ಸೂಕ್ತ ಚಿಕಿತ್ಸೆ ಸಹ ಈಗ ಲಭ್ಯವಿದೆಶೀಘ್ರ ಪ್ರೌಢಾವಸ್ಥೆಯ ಚಿಹ್ನೆಗಳು

*ಸ್ತನ ಅಭಿವೃದ್ಧಿ

*ಕಂಕುಳಲ್ಲಿ ಕೂದಲ ಬೆಳವಣಿಗೆ

*ಬಿರುಸಾದ ದೈಹಿಕ ಬೆಳವಣಿಗೆ

*ಮೊಡವೆ

*ಋತುಮತಿಯರಾಗುವುದು

*ದೇಹದಲ್ಲಿ ವಾಸನೆ

*ಭಾವನಾತ್ಮಕ ಬದಲಾವಣೆ

*ವಿರುದ್ಧ ಲಿಂಗದ ಕಡೆಗೆ ಆಕರ್ಷಣೆ

*ಖಿನ್ನತೆ ಮತ್ತು ಆತಂಕ

*ಕೀಳರಿಮೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry