ಆಡೂ... ಆಟ ಆಡು

7

ಆಡೂ... ಆಟ ಆಡು

Published:
Updated:
ಆಡೂ... ಆಟ ಆಡು

ಕಾರ್ಡ್ಸ್ ಪ್ರಿಯರಿಗೊಂದು ಸಂತಸದ ಸುದ್ದಿ. ಬೆಂಗಳೂರು ಸಿಟಿ ಇನ್ಸ್‌ಟಿಟ್ಯೂಟ್‌ನಲ್ಲಿ ಶನಿವಾರ  ಮತ್ತು ಭಾನುವಾರ `ವರ್ಲ್ಡ್ ರಮ್ಮಿ ಟೂರ್ನಿ~ ನಡೆಯಲಿದೆ. ಕಾರ್ಡ್ಸ್ ಆಡುವುದರಲ್ಲಿ ಪಂಟರ್ ಎನಿಸಿಕೊಂಡವರೆಲ್ಲರೂ ಇಲ್ಲಿ ತಮ್ಮ ಚಾಲಾಕಿತನ ಪ್ರದರ್ಶಿಸಬಹುದು. ವರ್ಲ್ಡ್ ರಮ್ಮಿ ಟೂರ್ನಿಯು ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಇಂತಹುದೊಂದು ದೊಡ್ಡ ವೇದಿಕೆಯನ್ನು ಇದೇ ಮೊದಲ ಬಾರಿಗೆ ಕಲ್ಪಿಸಿಕೊಟ್ಟಿದೆ.

ಈ ಟೂರ್ನಿಯಲ್ಲಿ ವಿಜೇತರಾದವರು ಗೋವಾದಲ್ಲಿ ಆಗಸ್ಟ್ 2012ರಂದು ನಡೆಯುವ ಗ್ರಾಂಡ್ ಫೈನಲ್‌ಗೆ ಪ್ರವೇಶ ಪಡೆಯಲಿದ್ದಾರೆ. ಇಲ್ಲಿ ವಿಜೇತರಾದವರು ಬರೋಬ್ಬರಿ 1 ಕೋಟಿ ರೂ. ಬಹುಮಾನ ಪಡೆದುಕೊಳ್ಳಲಿದ್ದಾರೆ. ಡಬ್ಲ್ಯೂಆರ್‌ಟಿ ರಮ್ಮಿ ಆಟದ ಆನಂದ ಮತ್ತು ರಮ್ಮಿ ಆಟಗಾರರಾಗಬೇಕೆನ್ನುವ ಯುವಜನರಿಗೆ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಈ ಟೂರ್ನಿಯಲ್ಲಿ ತಮ್ಮ ಆಟ ಪ್ರದರ್ಶಿಸಿ ಅಪಾರ ಬಹುಮಾನ ಗಳಿಸಲು ಇಚ್ಛಿಸುವ ರಮ್ಮಿ ಪ್ರೇಮಿಗಳಿಗೆ ಅತ್ಯಂತ ಆದ್ಯತೆಯ ತಾಣ. ವರ್ಲ್ಡ್ ರಮ್ಮಿ ಟೂರ್ನಿಯನ್ನು ರಮ್ಮಿಪ್ಲೇವಿನ್.ಕಾಂ ಆಯೋಜಿಸಿದ್ದು, ಇದು ಎಸ್ಸೆಲ್ ಸಮೂಹದ ಕಂಪೆನಿಗಳ ಅಂಗವಾದ ಪ್ಯಾನ್ ಇಂಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಗೇಮಿಂಗ್ ಬ್ರಾಂಡ್.

ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 11ರಿಂದ 6ರವರೆಗೆ ರಮ್ಮಿ ಟೂರ್ನಿ ನಡೆಯಲಿದೆ.

ಸ್ಥಳ: ದಿ ಬೆಂಗಳೂರು ಸಿಟಿ ಇನ್ಸ್‌ಟಿಟ್ಯೂಟ್(ಆರ್), ನಂ.8, ಪಂಪ ಮಹಾಕವಿ ರಸ್ತೆ, ಮಕ್ಕಳ ಕೂಟದ ಎದುರು, ಚಾಮರಾಜಪೇಟೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ:  89046 75138, 89046 75149.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry