ಆಣೆ ಮಾಡುವುದು ಮೂರ್ಖತನ: ಕಾಗೋಡು ತಿಮ್ಮಪ್ಪ

ಮಂಗಳವಾರ, ಜೂಲೈ 23, 2019
24 °C

ಆಣೆ ಮಾಡುವುದು ಮೂರ್ಖತನ: ಕಾಗೋಡು ತಿಮ್ಮಪ್ಪ

Published:
Updated:

ಚಿಕ್ಕಬಳ್ಳಾಪುರ: `ದೇವರ ಮೇಲೆ ಆಣೆ ಮಾಡುವುದು ಮೂರ್ಖತನದ ಪರಮಾವಧಿ. ಜನಪರ ಮತ್ತು ರಾಜ್ಯದ ಅಭಿವೃದ್ಧಿಪರ ಕೆಲಸ ಮಾಡುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ದೇವರ ಮೇಲೆ ಆಣೆ ಮಾಡುವ ನಿರ್ಣಯ ತೆಗೆದುಕೊಂಡಿರುವುದು ಸರಿಯಲ್ಲ~ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.`ಕಾಂಗ್ರೆಸ್ ನಡಿಗೆ-ಜನರ ಬಳಿಗೆ~ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ರಾಜಕೀಯ ಕ್ಷೇತ್ರದಲ್ಲಿ ಇಬ್ಬರೂ ಪ್ರಾಮಾಣಿಕರಲ್ಲ. ದೇವರ ಮೇಲೆ ಆಣೆ ಮಾಡುವುದರ ಬದಲು ಜನರ ಮುಂದೆ ತಮ್ಮ ಪ್ರಾಮಾಣಿಕತೆ ಮತ್ತು ಕಾರ್ಯಗಳನ್ನು ತಿಳಿಸಬೇಕು. ಆಣೆ ಮಾಡುವುದು ಮೂರ್ಖತನದ ಕೆಲಸವಲ್ಲದೇ ಮತ್ತೇನೂ ಅಲ್ಲ~ ಎಂದರು.`ರಾಜಕೀಯ ಕ್ಷೇತ್ರದಲ್ಲಿ ಯಾರನ್ನೂ ಯಾರೂ ನಿರ್ಮಾಮ ಮಾಡಲು ಆಗುವುದಿಲ್ಲ. ಅದೂ ಸಾಧ್ಯವೂ ಇಲ್ಲ. ಜನರ ಒಲವು ಮತ್ತು ಬೆಂಬಲ ಇರುವವರೆಗೆ ಮಾತ್ರ ನಾಯಕ ರಾಜಕೀಯ ಕ್ಷೇತ್ರದಲ್ಲಿ ಉಳಿಯಲು ಸಾಧ್ಯ~ ಎಂದು ಅವರು ತಿಳಿಸಿದರು.`ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇವಲ ಭರವಸೆಗಳನ್ನು ನೀಡುತ್ತಿದ್ದಾರೆ ಹೊರತು ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಜನರಿಗೆ ತಪ್ಪು ಮಾಹಿತಿಗಳನ್ನು ನೀಡಿ ಮರುಳು ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಾರಿಗೆ ತಂದಿದ್ದ ಯೋಜನೆಗಳ ಬದಲು ಬೇರೆ ರೀತಿಯದ್ದೇ ಯೋಜನೆಗಳನ್ನು ಜಾರಿ ತರುತ್ತಿದ್ದಾರೆ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.`ಕಾಂಗ್ರೆಸ್ ನಡಿಗೆ-ಜನರ ಬಳಿಗೆ~ ಕಾರ್ಯಕ್ರಮದ ಮೂಲಕ ನಾವು ಜನರಿಗೆ ಇನ್ನಷ್ಟು ಹತ್ತಿರವಾಗಲಿದ್ದೇವೆ. ಅವರ ಸಮಸ್ಯೆ-ಸಂಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಿದ್ದೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬಲಿಷ್ಠ ಪಕ್ಷವಾಗಿ ರೂಪುಗೊಳ್ಳಲಿದೆ~ ಎಂದು ಅವರು ತಿಳಿಸಿದರು.ಮಾಜಿ ಸಚಿವ ಮೊಹಿದ್ದೀನ್, ಶಾಸಕ ವಿ.ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿನ್ನಪ್ಪಯ್ಯ, ಸದಸ್ಯೆ ಭರಣಿ ವೆಂಕಟೇಶ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆಂಜನಪ್ಪ, ನಗರಸಭಾ ಸದಸ್ಯ ಎಂ.ಪ್ರಕಾಶ್, ಮುಖಂಡರಾದ ಅಡ್ಡಗಲ್ ಶ್ರೀಧರ್, ನಾರಾಯಣಸ್ವಾಮಿ, ಜೆ.ಎ.ಬಾವಾ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry