ಭಾನುವಾರ, ಅಕ್ಟೋಬರ್ 20, 2019
27 °C

ಆಣ್ಣಾ, ಬಿಜೆಪಿಯಿಂದ ಗೊಂದಲ ಸೃಷ್ಟಿ

Published:
Updated:

ಕೋಲ್ಕತ್ತ (ಐಎಎನ್‌ಎಸ್): ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಮತ್ತು ಅಣ್ಣಾ ಹಜಾರೆ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕೇಂದ್ರ ಕಂಪೆನಿ ವ್ಯವಹಾರ ಸಚಿವ ವೀರಪ್ಪ ಮೊಯಿಲಿ ಆರೋಪಿಸಿದ್ದಾರೆ.`ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಎಷ್ಟು ಕಾಲ ಚರ್ಚೆ ನಡೆಯಲಿದೆ ಎಂದು ನನಗೆ ಗೊತ್ತಿಲ್ಲ. 1966ರಿಂದಲೇ ಈ ಕುರಿತು ಸಾರ್ವಜನಿಕ ಚರ್ಚೆ ಆರಂಭವಾಗಿತ್ತು. ಸ್ವಾತಂತ್ರ್ಯ ದೊರೆತು ಸಾಕಷ್ಟು ವರ್ಷಗಳು ಕಳೆದಿದ್ದರೂ ಈಗಲೂ ಚರ್ಚೆ ನಡೆಯುತ್ತಿದೆ~ ಎಂದು ಮೊಯಿಲಿ ವರದಿಗಾರರಿಗೆ ತಿಳಿಸಿದರು.

Post Comments (+)