ಆತಂಕ ಎಬ್ಬಿಸಿದ ಸುನಾಮಿ

7
ಜಪಾನ್‌ನಲ್ಲಿ ಪ್ರಬಲ ಭೂಕಂಪನ

ಆತಂಕ ಎಬ್ಬಿಸಿದ ಸುನಾಮಿ

Published:
Updated:

ಟೋಕಿಯೊ (ಪಿಟಿಐ): ಜಪಾನ್‌ನ ಈಶಾನ್ಯ ಸಮುದ್ರದಲ್ಲಿ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ಅಲ್ಲಿನ ಕರಾವಳಿ ತೀರದಲ್ಲಿ 1 ಮೀಟರ್ ಎತ್ತರದ ಸುನಾಮಿ ಅಲೆಗಳು ಎದ್ದು ಆತಂಕ ಉಂಟಾಯಿತು.ಇದರಿಂದಾಗಿ ಯಾವುದೇ ಸಾವು ನೋವು, ನಷ್ಟವಾದ ವರದಿಯಾಗಿಲ್ಲ.ರಿಕ್ಟರ್ ಮಾಪಕದಲ್ಲಿ 7.3ರಷ್ಟು ತೀವ್ರತೆಯ ಭೂಕಂಪನದಿಂದಾಗಿ ಟೋಕಿಯೊ ಸೇರಿದಂತೆ ಹಲವೆಡೆ ಕಟ್ಟಡಗಳು ನಡುಗಿದವು. ಸಾವಿರಾರು ಜನ ಮನೆಗಳನ್ನು ತೊರೆದು ಹೊರ ಓಡಿದರು.ಮಿಯಾಗಿಯಿಂದ 240 ಕಿ.ಮೀ ದೂರದ ಪೆಸಿಫಿಕ್ ಸಾಗರದಲ್ಲಿ,  ಸಾಗರದ 10 ಕಿ.ಮೀ. ಆಳದಲ್ಲಿ  ಈ ಭೂಕಂಪನದ ಕೇಂದ್ರ ಬಿಂದು ಇತ್ತು ಎಂದು ಜಪಾನಿನ ಹವಾಮಾನ ಸಂಸ್ಥೆ ತಿಳಿಸಿದೆ.ಸ್ಥಳೀಯ ಕಾಲಮಾನ ಸಂಜೆ 5.18ಕ್ಕೆ ಭೂಕಂಪನ ಸಂಭವಿಸಿತು. ನಂತರ ಮಿಯಾಗಿಯ ಇಶಿನೋಮಕಿಯಲ್ಲಿ ಸಂಜೆ 6.02ಕ್ಕೆ ಸುನಾಮಿ ಅಲೆಗಳು ಕಂಡುಬಂದವು. ಇವಾಟೆ, ಅಒಮೊರಿ, ಇಬರಾಕಿ ಮತ್ತು ತೊಚಿಗಿ ಪ್ರಾಂತ್ಯಗಳಲ್ಲೂ ಭೂಕಂಪನದ ಅನುಭವವಾಯಿತು. ಸೆಂಡೈ, ಇವಾನುಮ, ಇಶಿನೋಮಕಿಗಳಲ್ಲಿ ಜನರನ್ನು ಮನೆಗಳಿಂದ ಸ್ಥಳಾಂತರಿಸಲಾಯಿತು.ಜಪಾನ್ ಹವಾಮಾನ ಸಂಸ್ಥೆಯು ಪೆಸಿಫಿಕ್ ದಂಡೆಯುದ್ದಕ್ಕೂ ಅನ್ವಯವಾಗುವಂತೆ ಸುನಾಮಿ ಎಚ್ಚರಿಕೆ ಪ್ರಕಟಿಸಿತ್ತು. ಹೋದ ವರ್ಷ ಇಲ್ಲಿ ಇದೇ ರೀತಿ ಪ್ರಬಲ ಭೂಕಂಪನದಿಂದಾಗಿ ರಕ್ಕಸ ಸುನಾಮಿ ಅಲೆಗಳು ಎದ್ದು 20,000ಕ್ಕೂ ಜನ ಸಾವಿಗೀಡಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry