ಶುಕ್ರವಾರ, ಜೂನ್ 18, 2021
24 °C

ಆತಂಕ ಹುಟ್ಟಿಸಿದ್ದ ಮೊಸಳೆ: ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರು: ತಾಲ್ಲೂಕಿನ ಕರಡಕಲ್ಲ ಜಾಲಿಬೆಂಚಿ ರಸ್ತೆ ಮೇಲೆ ಗುರುವಾರ ರಾತ್ರಿ ಮೊಸಳೆ ಪ್ರತ್ಯಕ್ಷವಾಗಿ ದ್ವಿಚಕ್ರ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದ ಪ್ರಕರಣವು  ವರದಿಯಾಗಿದೆ.ಲಿಂಗಸುಗೂರುದಿಂದ ಮಿಂಚೇರಿತಾಂಡಾಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಏಕಾಏಕಿ 15 ಅಡಿ ಉದ್ದದ ಮೊಸಳೆ ಅಡ್ಡ ಬಂದಿತ್ತು. ಬೈಕ್‌ ಸವಾರ ಹರೀಶ ರಾಠೋಡ ಸ್ನೇಹಿತರಿಗೆ ಯಾವುದೇ ಅಪಾಯವಾಗಿಲ್ಲ.  ಮೊಸಳೆ ಬಂದಿರುವ ಮಾಹಿತಿಯನ್ನು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಎಸ್‌.ಬಿ. ಹೊಸಳ್ಳಿ ಅವರಿಗೆ ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಎಸ್‌.ಬಿ ಹೊಸಳ್ಳಿ ಮೊಸಳೆ ಹಿಡಿದು ಸಂಚಾರಕ್ಕೆ ಅನುವು ಮಾಡಿಕೊಡಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರೊಚ್ಚಿಗೆದ್ದ ಮೊಸಳೆ ಅರ್ಭಟ, ಕಿರುಚಾಟ, ಚೆಲ್ಲಾಟಕ್ಕೆ ಭಯಗೊಂಡ ಅರಣ್ಯ ಮತ್ತು ಪೊಲೀಸ್‌ ಸಿಬ್ಬಂದಿ ಅಗ್ನಿಶಾಮಕ ಸಿಬ್ಬಂದಿ ಸಹಾಯದೊಂದಿಗೆ ಹಿಡಿದು ನಾರಾಯಣಪುರ ಅಣೆಕಟ್ಟೆಗೆ ಹಿನ್ನೀರಿಗೆ ಬಿಡುವಲ್ಲಿ ಯಶಸ್ವಿಯಾದರು.ಮೊಸಳೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಎಸ್‌.ಬಿ ಹೊಸಳ್ಳಿ, ವಲಯ ಅರಣ್ಯಾಧಿಕಾರಿ ಪ್ರಭಾಕರ, ಅಗ್ನಿಶಾಮಕ ಠಾಣಾಧಿಕಾರಿ ರವೀಂದ್ರ ಘಾಟ್ಗೆ ಹಾಗೂ ಸಿಬ್ಬಂದಿ ವರ್ಗ ಮತ್ತು ಮಿಂಚೇರಿತಾಂಡಾದ ಸುರೇಶ, ರಮೇಶ, ವೆಂಕಟೇಶ, ಧರ್ಮಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.