ಬುಧವಾರ, ಅಕ್ಟೋಬರ್ 16, 2019
21 °C

ಆತಿಥ್ಯಕ್ಕೆ ಸಜ್ಜಾದ ಗುಲ್ಬರ್ಗ

Published:
Updated:

ಗುಲ್ಬರ್ಗ: ಖಾಜಾ ಎಜ್ಯುಕೇಶನ್ ಸೊಸೈಟಿ ಹಾಗೂ ಖಾಜಾ ಬಂದೇನವಾಜ್ ಹೌಸ್ ಆಫ್ ಸ್ಪೋರ್ಟ್ಸ್ ಆಶ್ರಯದಲ್ಲಿ ಇದೇ 15ರಿಂದ 22ವರೆಗೆ ಖಾಜಾ ಬಂದೇ ನವಾಜ್ ಗೋಲ್ಡ್ ಕಪ್ ಕ್ರಿಕೆಟ್ ಹಾಗೂ 27ರಿಂದ 29ವರೆಗೆ ಖಾಜಾ ಬಂದೇ ನವಾಜ್ ಗೋಲ್ಡ್ ಕಪ್ ಲೀಗ್ ಕಮ್ ನಾಕ್‌ಔಟ್ ಹಾಕಿ ಟೂರ್ನಿಯ ಆತಿಥ್ಯಕ್ಕೆ ಗುಲ್ಬರ್ಗ ಸಜ್ಜಾಗಿದೆ.ಸೈಯದ್ ಅಕ್ಬರ್ ಹುಸೈನಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಸೈಯದ್ ಷಾ ಖುಷ್ರೊ ಹುಸೇನಿ ಇಲ್ಲಿನ ಕಾಲೇಜು ಮೈದಾನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.16 ವರ್ಷ ವಯೋಮಿತಿ ಒಳಗಿನ ಬಾಲಕರಿಗೆ 50 ಓವರ್‌ಗಳ ಕ್ರಿಕೆಟ್ ಟೂರ್ನಿ ಹಾಗೂ 17 ವರ್ಷ ವಯೋಮಿತಿ ಒಳಗಿನ ಬಾಲಕರಿಗೆ ಲೀಗ್ ಕಮ್ ನಾಕೌಟ್ ರಾಷ್ಟ್ರ ಮಟ್ಟದ ಹಾಕಿ ಟೂರ್ನಿ ಹಮ್ಮಿಕೊಳ್ಳಲಾಗಿದೆ.ಅಂಜುಮನ್ ಇ- ಇಸ್ಲಾಂ ಮುಂಬೈ, ಕಿರಣ್ ಮೋರೆ ಆಕಾಡೆಮಿ ಬರೋಡಾ, ಪ್ರೆಸಿಡೆಂಟ್ ಇಲೆವೆನ್, ಕೆಬಿಎನ್ ಆಕಾಡೆಮಿ ಗುಲ್ಬರ್ಗ, ಪ್ರವೀಣ್ ಅಮ್ರೆ ಆಕಾಡೆಮಿ ಮುಂಬೈ, ವೆಂಗ್‌ಸರ್ಕರ್ ಆಕಾಡೆಮಿ ಮುಂಬೈ, ತೆಲಂಗಾಣ ಡಿಸ್ಟ್ರಿಕ್ಟ್ ಇಲೆವೆನ್, ಆಂಧ್ರಪ್ರದೇಶ, ಬೆಂಗಳೂರು ಅಕೇಶನಲ್ ಜಸ್ಟ್ ಕ್ರಿಕೆಟ್ ಆಕಾಡೆಮಿ, ಜವಾಹರ ಸ್ಪೋರ್ಟ್ಸ್ ಕ್ಲಬ್ ಮುಂತಾದ ತಂಡಗಳು ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.ತಮಿಳುನಾಡು, ಬೆಂಗಳೂರು, ಮುಂಬೈ, ಎಂಇಜಿ ಸ್ಪೋರ್ಟ್ಸ್ ಸ್ಕೂಲ್ ಬೆಂಗಳೂರು, ಸರ್ಕಾರಿ ಕ್ರೀಡಾ ಶಾಲೆ ಕೂಡಗಿ, ಕೇರಳ ತಂಡಗಳು ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ ಎಂದು ಡಾ. ಸೈಯದ್ ಷಾ ಖುಷ್ರೊ ಹುಸೈನಿ ತಿಳಿಸಿದರು. ಕ್ರಿಕೆಟಿಗರಾದ ಅಜರುದ್ದೀನ್, ವಿಜಯ್ ಭಾರದ್ವಾಜ್, ಭಾರತದ ಮಹಿಳಾ ಹಾಕಿ ತಂಡದ ನಾಯಕಿ ಸಭಾ ಅಂಜುಮ್ ಅವರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.ಖಾಜಾ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸೈಯದ್ ಅಲಿ ಅಲ್ ಹುಸೈನಿ, ಕಾರ್ಯದರ್ಶಿ ನಜೀರ್ ಅಹ್ಮದ್, ಎಂ.ಎಂ. ಲತೀಫ್ ಶರೀಫ್, ಎಂ.ಎ. ಹಬೀಬ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Post Comments (+)