`ಆತುರದ ನಿರ್ಧಾರವಲ್ಲ'

7
ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ

`ಆತುರದ ನಿರ್ಧಾರವಲ್ಲ'

Published:
Updated:

ನವದೆಹಲಿ (ಪಿಟಿಐ): ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ `ಆಧಾರ್' ಆಧಾರಿತ ಯೋಜನೆಯನ್ನು ಆತುರಾತುರವಾಗಿ ಜಾರಿಗೊಳಿಸುತ್ತಿಲ್ಲ ಎಂದು ಸರ್ಕಾರ ಗುರುವಾರ ಸಮರ್ಥಿಸಿಕೊಂಡಿದೆ.ಹಂತ ಹಂತವಾಗಿ ಜಾರಿಯಾಗಲಿರುವ ಈ ಕ್ರಮವು ಹಣ ಸೋರಿಕೆ, ವಿಳಂಬ, ನಕಲು ಮಾಡುವಿಕೆ, ಒಬ್ಬರ ಹೆಸರಿನಲ್ಲಿ ಮತ್ತೊಬ್ಬರು ಸವಲತ್ತು ಪಡೆಯುವುದು ಇತ್ಯಾದಿ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ರಾಜ್ಯಸಭೆಯಲ್ಲಿ ಹೇಳಿದರು.ಬಿಜೆಪಿಯ ಪ್ರಕಾಶ್ ಜಾವಡೇಕರ್ ಅವರು ಕೇಳಿದ ಪ್ರಶ್ನೆಗೆ ಚಿದಂಬರಂ ಉತ್ತರ ನೀಡಿ, ಕೇಂದ್ರ/ ಕೇಂದ್ರ ಪ್ರಾಯೋಜಕತ್ವದ 34 ಕಾರ್ಯಕ್ರಮಗಳಿಗೆ ಅನ್ವಯವಾಗುವಂತೆ ಖಾತೆಗೆ ನೇರವಾಗಿ ಹಣ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ; ಜನವರಿ 1ರಿಂದ ರಾಷ್ಟ್ರದ 43 ಜಿಲ್ಲೆಗಳಲ್ಲಿ ಹಂತಹಂತವಾಗಿ ಇದನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.ಈ ವ್ಯವಸ್ಥೆ ಜಾರಿಗೊಳಿಸಲು ಬೇಕಾದ ತಂತ್ರಜ್ಞಾನ ನಮ್ಮಲ್ಲಿದೆ. ಆರಂಭದಲ್ಲಿ ಕೆಲವು ಎಡರುತೊಡರುಗಳು ಎದುರಾಗಬಹುದು.ಆದರೆ ಅವನ್ನೆಲ್ಲಾ ಆಗಿಂದಾಗ್ಗೇ ನಿವಾರಿಸಿಕೊಳ್ಳಲಾಗುವುದು. ಇದಕ್ಕೆ ಪೂರಕವಾಗಿ ಬ್ಯಾಂಕ್ ಮ್ಯಾನೇಜರುಗ ಮತ್ತಿತರ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry