ಆತ್ಮರಕ್ಷಣೆಗೆ ಕರಾಟೆ ಕಲೆ ಅವಶ್ಯ: ಟೇಲರ್‌

7

ಆತ್ಮರಕ್ಷಣೆಗೆ ಕರಾಟೆ ಕಲೆ ಅವಶ್ಯ: ಟೇಲರ್‌

Published:
Updated:

ಹನುಮಸಾಗರ:  ಪ್ರತಿಯೊಬ್ಬರಿಗೂ ಕರಾಟೆ ಆತ್ಮರಕ್ಷಣೆ ಕಲೆಯಾಗಿರುವುದರಿಂದ ಹಾಗೂ ಇಂದಿನ ದಿನಗಳಲ್ಲಿ ಅದು ಅವಶ್ಯವಾಗಿರುವುದರಿಂದಲೇ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯದ ಪ್ರೌಢ ಶಾಲೆಗಳಲ್ಲಿ ಓದುತ್ತಿರುವ ಬಾಲಕಿಯರಿಗೆ ಕರಾಟೆ ಕಡ್ಡಾಯ ಮಾಡಿದೆ ಎಂದು ಪ್ರಗತಿ ಸ್ಪೋರ್ಟ್ಸ್‌್್ ಅಕಾಡೆಮಿಯ ಅಧ್ಯಕ್ಷ ಅಬ್ದುಲ್‌ರಜಾಕ್‌ ಟೇಲರ್ ಹೇಳಿದರು.ಬುಧವಾರ ಇಲ್ಲಿನ ಬಾಲಕಿಯರ ಪ್ರೌಢ ಶಾಲೆಯಲ್ಲಿ ಪ್ರಗತಿ ಸ್ಪೋಟ್ಸ್ ಅಕಾಡೆಮಿವತಿಯಿಂದ ಬಾಲಕಿಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ವಾಗಿ ಕರಾಟೆ ತರಬೇತಿ ನೀಡುವ ಸಂದರ್ಭದಲ್ಲಿ ಅವರು ಮಾತನಾಡಿದರು.ಕರಾಟೆಯಲ್ಲಿ ಸಾಕಷ್ಟು ಆಯಾಮಗಳಿದ್ದು ಹಂತ ಹಂತವಾಗಿ ಬಾಲಕಿಯರಿಗೆ ತಿಳಿಸಿಕೊಡಲಾಗುವುದು, ಸದ್ಯ ಹಲವಾರು ವಿದ್ಯಾರ್ಥಿನಿಯರು ಕರಾಟೆ ಕಲೆಯನ್ನು ಕರಗತ ಮಾಡಿಕೊಂಡಿದ್ದು ಹಲವಾರು ಬಹುಮಾನಗಳನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ, ಆರಂಭದಲ್ಲಿ ಕರಾಟೆ ಶಿಕ್ಷಣಕ್ಕೆ ಕೆಲ ಪಾಲಕರು ಒಲವು ತೋರಿಸದಿದ್ದರೂ ಇತ್ತೀಚೆಗೆ ಪಾಲಕ ಸಮೂಹದಿಂದ ಸಾಕಷ್ಟು ಪ್ರೋತ್ಸಾಹ ನಮಗೆ ದೊರಕುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.ಕರಾಟೆ ಶಿಕ್ಷಕರಾದ ವಿಜಯಕುಮಾರ ಹಂಚಿನಾಳ, ಮಹಾಂತೇಶ ಬೀಳಗಿ ತರಬೇತಿ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry