ಶನಿವಾರ, ಮೇ 28, 2022
27 °C

ಆತ್ಮವಿಶ್ವಾಸದಲ್ಲಿ ತೇಲುತ್ತಿರುವ ಕೆನಡಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಿಶ್ವಕಪ್ ಟೂರ್ನಿಯಲ್ಲಿ ಸೋಮವಾರ ಕೀನ್ಯಾ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿದ ಕೆನಡಾ ತಂಡವು ಆತ್ಮವಿಶ್ವಾಸದಿಂದ ಬೀಗುತ್ತಿದೆ.ವಿಶ್ವಕಪ್ ಇತಿಹಾಸದಲ್ಲಿ  ಕೆನಡಾ ತಂಡಕ್ಕೆ ಇದು ಎರಡನೇ ಗೆಲುವು. ಕೆನಡಾ ತಂಡವು 2003ರ ವಿಶ್ವಕಪ್ ಟೂರ್ನಿಯಲ್ಲಿ  ಬಾಂಗ್ಲಾದೇಶ ವಿರುದ್ಧ 60 ರನ್ನುಗಳಿಂದ ಜಯ ಸಾಧಿಸಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ಆಶೀಶ್ ಬಗೈ, ‘2003ರ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಕೀನ್ಯಾ ತಂಡವನ್ನು ಸೋಲಿಸಿರುವ ನಮ್ಮ ತಂಡಕ್ಕೆ ಈಗ ತುಂಬು ಆತ್ಮವಿಶ್ವಾಸ. ಮುಂದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾವನ್ನು ಎದುರಿಸಲಿದ್ದು, ಉತ್ತಮ ಪ್ರದರ್ಶನ ನೀಡುವ ಸಂಪೂರ್ಣ ವಿಶ್ವಾಸವಿದೆ’ ಎಂದರು.ಬ್ಯಾಟಿಂಗ್ ವಿಭಾಗದಿಂದ ಉತ್ತಮ ಪ್ರದರ್ಶನ ತೋರಿದ ತಂಡದ ಆಟಗಾರರು ತಂಡಕ್ಕೆ ಈ ವಿಶ್ವಕಪ್‌ನಲ್ಲಿ ಮೊದಲ ಗೆಲುವು ಪಡೆಯಲು ನೆರವಾದರು. ಹಿಂದಿನ ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದರ ಬಗ್ಗೆ ಬೇಸರವಿದೆ ಎಂದ ನಾಯಕ ಬಾಗೈ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವುದರ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದರು. ‘ಹೇನ್ರಿ ಓಶಿಂಡೆ ಒಳ್ಳೆಯ ಪ್ರದರ್ಶನ ನೀಡಿದರು. ಅವರ ಆಟದಿಂದ ತಂಡಕ್ಕೆ ಗೆಲುವು ಸಾಧ್ಯವಾಯಿತು. ಈ ಪಿಚ್‌ನಲ್ಲಿ 4.5 ಸರಾಸರಿಯಲ್ಲಿ ರನ್ನುಗಳನ್ನು ಸಾಧಿಸುವುದು ಸುಲಭವಾಗಿತ್ತು’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.