ಭಾನುವಾರ, ಮೇ 16, 2021
27 °C

ಆತ್ಮವಿಶ್ವಾಸ ಹೆಚ್ಚಿಸಿದ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ (ಪಿಟಿಐ): ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಗೆಲುವಿನಲ್ಲಿ ಬೌಲರ್‌ಗಳ ಪಾತ್ರವೂ ಮಹತ್ವದ್ದಾಗಿತ್ತು ಎಂದು ತಂಡದ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.ಪುಣೆಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಗಂಗೂಲಿ ಬಳಗ ಏಳು ವಿಕೆಟ್‌ಗಳ ಜಯ ಸಾಧಿಸಿತ್ತು. ಗೆಲುವಿಗೆ ಅಗತ್ಯವಿದ್ದ 156 ರನ್‌ಗಳನ್ನು ವಾರಿಯರ್ಸ್ 19.2 ಓವರ್‌ಗಳಲ್ಲಿ ಗಳಿಸಿತ್ತು. ಜೆಸ್ಸಿ ರೈಡರ್ (73) ಮತ್ತು ಸ್ಟೀವನ್ ಸ್ಮಿತ್ (44) ಅವರ ಅಜೇಯ ಬ್ಯಾಟಿಂಗ್ ತಂಡದ ಗೆಲುವಿಗೆ ಕಾರಣವಾಗಿತ್ತು.ಆದರೆ ಗಂಗೂಲಿ ಈ ಜಯದ ಶ್ರೇಯವನ್ನು ಬ್ಯಾಟ್ಸ್‌ಮನ್‌ಗಳಿಗೆ ಮಾತ್ರ ನೀಡಲಿಲ್ಲ. `ಬೌಲರ್‌ಗಳು ತೋರಿದ ಪ್ರದರ್ಶನ ನನಗೆ ಹೆಮ್ಮೆ ತಂದಿತ್ತಿದೆ. ಆಶೀಶ್ ನೆಹ್ರಾ ಮತ್ತು ಅಶೋಕ್ ದಿಂಡಾ ಉತ್ತಮ ಕೆಲಸ ನಿರ್ವಹಿಸಿದರು. ಸ್ಟೀವನ್ ಸ್ಮಿತ್ ಅವರ ಬ್ಯಾಟಿಂಗ್ ಕಳೆದ ಸಲಕ್ಕಿಂತ ಈ ಬಾರಿ ಸಾಕಷ್ಟು ಸುಧಾರಣೆ ಕಂಡಿದೆ~ ಎಂದು ಪಂದ್ಯದ ಬಳಿಕ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.ಮಹೇಂದ್ರ ಸಿಂಗ್ ದೋನಿ ಬಳಗದ ವಿರುದ್ಧದ ಗೆಲುವು ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಗಂಗೂಲಿ ನುಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.