ಮಂಗಳವಾರ, ಜೂನ್ 15, 2021
27 °C

ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಮಹಿಳೆಯರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ಮಹಿಳೆಯರು ತಮ್ಮ ಮೇಲೆ ನಡೆಯುವ ಶೋಷಣೆ ಮತ್ತು ದೌರ್ಜನ್ಯ ಮೆಟ್ಟಿ ನಿಲ್ಲಲು ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶು ಪಾಲ ಚಾಮರಾಜು ತಿಳಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮಹಿಳಾ ಹಕ್ಕು  ಸಮಿತಿಯಿಂದ ಶನಿವಾರ  ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.ಮಹಿಳೆ ಅಬಲೆ ಎನ್ನುವ ಮಾತು ಬದಲಾವಣೆಯಾಗಿದ್ದು, ನಾನಾ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದ್ದಾರೆ. ಹಾಗಾಗಿ ಬಾಧಿತರು ಕಾನೂನು ಬಳಸಬೇಕು ಎಂದರು.ಉಪನ್ಯಾಸಕಿ ಮಂಜುಳಾ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಎಂ. ಪೂರ್ಣಿಮಾ ವಂದಿಸಿದರು. ಹಿರಿಯ ವಕೀಲ ಪಾಪಣ್ಣಶೆಟ್ಟಿ, ವಕೀಲರ ಸಂಘದ ಅಧ್ಯಕ್ಷ  ಬಿ. ಶಿವಣ್ಣ, ಸರ್ಕಾರಿ ಅಭಿಯೋಜಕ ಮಂಜುನಾಥ್, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಗಣೇಶ್, ವಕೀಲರಾದ  ಟಿ.ಎಸ್. ವೆಂಕಟೇಶ್, ರಾಜಶೇಖರ್, ಬಿ.ಪಿ. ಪುಟ್ಟಸ್ವಾಮಿ, ಸತ್ಯನಾರಾಯಣ್, ಆಂಗ್ಲ ಉಪನ್ಯಾಸಕ ಗೋವಿಂದರಾಜು, ಉಪನ್ಯಾಸಕಿಯರಾದ ರೂಪಾ, ಆಶಾ, ಪ್ರಮೋದಿನಿ, ಗೌರಿ, ಮಹೇಶ್ವರಿ, ಗಂಗಾಧರ್‌, ರಮೇಶ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.