ಆತ್ಮಹತ್ಯಾ ದಾಳಿಗೆ ಐಎಸ್‌ಐ ತರಬೇತಿ

7

ಆತ್ಮಹತ್ಯಾ ದಾಳಿಗೆ ಐಎಸ್‌ಐ ತರಬೇತಿ

Published:
Updated:

ಇಸ್ಲಾಮಾಬಾದ್( ಪಿಟಿಐ): ಪಾಶ್ಚಿಮಾತ್ಯ ಮಿತ್ರ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಆತ್ಮಹತ್ಯಾ ಬಾಂಬರ್‌ಗಳಿಗೆ ತರಬೇತಿ ನೀಡುತ್ತಿದೆ ಎಂದು ಬಿಬಿಸಿ ದಾಖಲೆಗಳ ಸಹಿತ ವರದಿ ಮಾಡಿದೆ.ಆಫ್ಘಾನಿಸ್ತಾನದ ಗುಪ್ತಚರ ಸಂಸ್ಥೆ ಆತ್ಮಹತ್ಯಾ ದಾಳಿ ನಡೆಸಲು ತರಬೇತಿ ಪಡೆದಿದ್ದ ಯುವಕನೊಬ್ಬನನ್ನು ಸೆರೆಹಿಡಿದಿದ್ದು, ಆತನಿಂದ ಈ ಮಾಹಿತಿ ದೊರಕಿದೆ. ತಮಗೆ ತಾಲಿಬಾನ್ ಮಿಲಿಟರಿ ಶಿಬಿರಗಳಿಂದ ತರಬೇತಿ ನೀಡಲಾಗುತ್ತದೆ. ಬಳಿಕ ಮಿತ್ರ  ಪಡೆಗಳನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ದಾಳಿ ನಡೆಸಲಾಗುತ್ತದೆ ಎಂದು ಕಾಬೂಲ್ ಹೊರವಲಯದ ಜೈಲಿನಲ್ಲಿರುವ ಈ ಆತ್ಮಹತ್ಯಾ ದಾಳಿಕೋರ ಹೇಳಿದ್ದಾನೆ. `ತರಬೇತಿ ಶಿಬಿರಗಳಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‌ಐ) ಅಧಿಕಾರಿಗಳು ಪಾಲ್ಗೊಂಡು ಕಾರ್ಯಾಚರಣೆ ಮೇಲ್ವಿಚಾರಣೆ ನಡೆಸುತ್ತಾರೆ. ಹದಿನೈದು ದಿನಗಳ ತರಬೇತಿ ನಂತರ ದಾಳಿ ನಡೆಸಲು ಆಫ್ಘಾನಿಸ್ತಾನಕ್ಕೆ ಕಳುಹಿಸಲಾಗುತ್ತದೆ ಎಂದೂ ಆತ ಮಾಹಿತಿ ನೀಡಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry