ಆತ್ಮಹತ್ಯೆಗೆ ಶರಣಾದ ಆಶಾ ಭೋಸ್ಲೆ ಪುತ್ರಿ

7

ಆತ್ಮಹತ್ಯೆಗೆ ಶರಣಾದ ಆಶಾ ಭೋಸ್ಲೆ ಪುತ್ರಿ

Published:
Updated:

ಮುಂಬೈ (ಪಿಟಿಐ) ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ಪುತ್ರಿ ವರ್ಷಾ ಭೋಸ್ಲೆ ಅವರು ದಕ್ಷಿಣ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ರಿವಾಲ್ವರ್‌ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಗಾಯಕಿ ಹಾಗೂ ಅಂಕಣಗಾರ್ತಿಯಾಗಿದ್ದ ವರ್ಷಾ ಅವರು ಈ ಹಿಂದೆ ಕೂಡ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರೂ ಎಂದು ಪೊಲೀಸರು ತಿಳಿಸಿದ್ದಾರೆ.

 

ವರ್ಷಾ ಅವರು ಗುಂಡಿಕ್ಕಿಕೊಂಡ ಘಟನೆ ನಡೆಯುತ್ತಿದ್ದಂತೆ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದರು. ನಂತರ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜೆ.ಜೆ.ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು ಎಂದು ಪೊಲೀಸರು ಹೇಳಿದರು.ಹಿಂದಿ ಹಾಗೂ ಮರಾಠಿಯ ಕೆಲ ಸಿನಿಮಾಗಳಿಗೆ ಹಿನ್ನೆಲೆ ಗಾಯಕಿಯಾಗಿ ಕಾರ್ಯ ನಿರ್ವಹಿಸಿದ್ದ ವರ್ಷಾ ಅವರು ತಾಯಿ ಆಶಾ ಅವರೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಕೂಡ ನೀಡಿದ್ದರು. ಅಲ್ಲದೇ ಅವರು ಕೆಲ ವೆಬ್ ಪೋರ್ಟಲ್ ಹಾಗೂ ನಿಯತಕಾಲಿಕೆಗಳಿಗೆ ಅಂಕಣ ಬರೆಯುತ್ತಿದ್ದರು. ಕ್ರೀಡಾ ಬರಹಗಾರರೊಬ್ಬರೊಂದಿಗೆ ವಿವಾಹವಾಗಿದ್ದ ವರ್ಷಾ ಅವರು ಪತಿಯಿಂದ ವಿಚ್ಛೇದನ ಪಡೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry