ಶುಕ್ರವಾರ, ಜೂನ್ 18, 2021
28 °C

ಆತ್ಮಹತ್ಯೆ ಶಿಕ್ಷಕ ಸುಡುಬಿಸಿಲ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆತ್ಮಹತ್ಯೆ ಶಿಕ್ಷಕ ಸುಡುಬಿಸಿಲ ಧರಣಿ

ಗುಲ್ಬರ್ಗ: ಶಿಕ್ಷಣ ಇಲಾಖೆಯ ಆಯುಕ್ತರ ನಿರ್ದೇಶನದಂತೆ ಗುರುದೇವ ಶಿಕ್ಷಣ ಸಂಸ್ಥೆಯ ಅಡಿಯಲ್ಲಿನ ನೆಹರೂ ನಗರದ ಶಂಕರಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಟ್ಟುಗೋಲು ಹಾಕಬೇಕು. ತಡೆ ಹಿಡಿದಿರುವ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಶಾಲೆಯ ಸಹಶಿಕ್ಷಕ, ಬಸವ ನಗರ ನಿವಾಸಿ ಶಿವಯೋಗಿ ಸೋಮವಾರ ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿ ಮುಂಭಾಗದಲ್ಲಿ ಧರಣಿ ಆರಂಭಿಸಿದರು.`ವೇತನ ಕಡಿತ ಮತ್ತಿತರ ಅಕ್ರಮಗಳ ಹಿನ್ನೆಲೆಯಲ್ಲಿ ಈ ಶಾಲೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ದೂರು ನೀಡಲಾಗಿತ್ತು.ಈ ದೂರನ್ನು ಪರಿಶೀಲಿಸಿದ ಶಿಕ್ಷಣ ಇಲಾಖೆಯ ಅಂದಿನ ಆಯುಕ್ತರು ಮುಟ್ಟುಗೋಲಿಗೆ ಆದೇಶಿಸಿದ್ದರು. ಆದರೆ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಂಡಿರುವುದಿಲ್ಲ.ಅಲ್ಲದೇ ದೂರು ನೀಡಿದ ತನಗೆ ಬೆದರಿಕೆ ಹಾಕಿ, ದೂರು ವಾಪಾಸ್ಸು ಪಡೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ~ ಎಂದು ಶಿವಯೋಗಿ ಆರೋಪಿಸಿದ್ದಾರೆ.ಈ ಸಂಬಂಧ ತಮ್ಮ ಕುಟುಂಬದ ಸದಸ್ಯರಾದ ಕಾವೇರಿ, ಸುಹಾಸಿನಿ, ಹಾಗೂ ಸುಂದ್ರಾಬಾಯಿ ಜೊತೆ ಸೇರಿ ಸುಡುಬಿಸಿಲಿನಲ್ಲಿ ಕುಳಿತು ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ.`ಆತ್ಮಹತ್ಯೆ~: ಇದೇ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಫೆ.2ರಂದು ಶಿವಯೋಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತಾಲಯದ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.ತಮ್ಮ ಸಂಬಳ ತಡೆ ಹಿಡಿಯಲಾಗಿದೆ. ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಇಲಾಖೆಯ ಕೆಲವು ಅಧಿಕಾರಿಗಳು ಕಿರುಕುಳ  ನೀಡುತ್ತಿದ್ದಾರೆ.ಒಂದು ವಾರದಲ್ಲಿ ಸಂಬಳ ಬಿಡುಗಡೆಗೆ ಕ್ರಮಕೈಗೊಳ್ಳದಿದ್ದಲ್ಲಿ ತಮ್ಮ ಕುಟುಂಬವು ಆತ್ಮಹತ್ಯೆಯ ದಾರಿ ಹಿಡಿಯಬೇಕಾಗುತ್ತದೆ ಎಂದು ಜನವರಿ 24ರಂದು ಕಚೇರಿಗೆ ಪತ್ರ ಬರೆದು ಎಚ್ಚರಿಸಿದ್ದರು.

ಆದರೂ ಇಲಾಖೆ ಹಾಗೂ ಆಡಳಿತ ಮಂಡಳಿ ಸ್ಪಂದಿಸದ ಪರಿಣಾಮ ಆತ್ಮಹತ್ಯೆಗೆ ಯತ್ನಿಸಿ, ಬದುಕುಳಿದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.