ಆತ್ಮಾಹುತಿ ತಪ್ಪಿಸಲು ಒಡವೆಗೆ ಶರಣು!

ಮಂಗಳವಾರ, ಜೂಲೈ 16, 2019
24 °C

ಆತ್ಮಾಹುತಿ ತಪ್ಪಿಸಲು ಒಡವೆಗೆ ಶರಣು!

Published:
Updated:

ಚೆನ್ನೈ, (ಪಿಟಿಐ):  ನಿರಾಭರಣರಾಗಿಯೇ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಕಂಡಿದ್ದ ಜನ ಇದೀಗ ಅವರು ಕಿವಿಯೋಲೆ ಧರಿಸುತ್ತಿರುವುದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.ಹದಿನಾಲ್ಕು ವರ್ಷಗಳ ಹಿಂದೆ ಜಯಲಲಿತಾ ಆಭರಣಗಳನ್ನು ಧರಿಸುವುದನ್ನು ನಿಲ್ಲಿಸಿದ್ದರು. 1997ರಲ್ಲಿ ಅಂದಿನ ಡಿಎಂಕೆ ಸರ್ಕಾರ ಅಕ್ರಮ ಸಂಪತ್ತು ಸಂಪಾದನೆಯ ಹೆಸರಿನಲ್ಲಿ ಜಯಲಲಿತಾ ಅವರನ್ನು ವಿಚಾರಣೆಗೊಳಪಡಿಸಿದ್ದ ವೇಳೆ ಅವರ ಎಲ್ಲಾ ಆಭರಣಗಳನ್ನು ಮುಟ್ಟುಗೋಲು ಹಾಕಿತ್ತು. ಆ ಹಿನ್ನೆಲೆಯಲ್ಲಿ ತಾವು ಇನ್ನು ಮುಂದೆ ಆಭರಣ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.ಆದರೆ ಇದೀಗ ಜಯಲಲಿತಾ ಕಿವಿಯಲ್ಲಿ ಓಲೆ ಹೊಳೆಯುತ್ತಿರುವುದನ್ನು ನೋಡಿ ಆಶ್ಚರ್ಯಗೊಂಡ ವರದಿಗಾರರೊಬ್ಬರು ಆ ಕುರಿತು ಪ್ರಶ್ನಿಸಿಯೇ ಬಿಟ್ಟರು.ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಜಯಗಳಿಸಿದ್ದ ವೇಳೆ ಹಲವು ಕಾರ್ಯಕರ್ತರು ತಾನು ಆಭರಣ ಧರಿಸಬೇಕೆಂದು ಕೋರಿಕೊಂಡಿದ್ದರಲ್ಲದೆ ಕೆಲವರಂತೂ ತಾನು ಆಭರಣ ಧರಿಸದಿದ್ದಲ್ಲಿ ಸ್ವಯಂ ಆತ್ಮಾಹುತಿ ನಡೆಸುವುದಾಗಿ ಬೆದರಿಕೆ ಒಡ್ಡಿದ್ದರು. `ಎಷ್ಟೋ ಮಂದಿ ಪಕ್ಷಕ್ಕಾಗಿ ಜೀವತ್ಯಾಗ ಮಾಡಿದ್ದಾರೆ.ಆದರೆ ಪಕ್ಷ ಜಯಗಳಿಸಿದ ಇಂಥ ಸಂತೋಷದ ಸಂದರ್ಭದಲ್ಲಿ ಅವರು ಜೀವತ್ಯಾಗ ಮಾಡುವುದನ್ನು ನಾನು ಬಯಸುವುದಿಲ್ಲ. ಹಾಗಾಗಿ ನಾನು ನನ್ನ ನಿರ್ಧಾರವನ್ನು ಬದಲಿಸಿದೆ~ ಎಂದು ಜಯಲಲಿತಾ ಸ್ಪಷ್ಟಪಡಿಸುವುದರೊಂದಿಗೆ ಅವರ ಪ್ರತಿಜ್ಞೆಯೂ ಮುರಿದುಬಿದ್ದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry