ಆತ್ಮಾಹುತಿ ದಾಳಿಗೆ 20 ಬಲಿ

7

ಆತ್ಮಾಹುತಿ ದಾಳಿಗೆ 20 ಬಲಿ

Published:
Updated:

ಇಸ್ಲಾಮಾಬಾದ್ (ಪಿಟಿಐ): ಹದಿಹರೆಯದ ಯುವಕ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಿಂದ ಕನಿಷ್ಠ 20 ಜನರು ಮೃತರಾಗಿ, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಬಜೌರ್ ಬುಡಕಟ್ಟು ಪ್ರದೇಶದ ಜನದಟ್ಟಣೆಯ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆದಿದೆ.

 
ರಷ್ಯದಲ್ಲಿ 15 ಸಾವು

ಮಾಸ್ಕೊ (ಎಎಫ್‌ಪಿ):
ರಷ್ಯದ ವಿವಾದಿತ ಕಾಕಸಸ್ ಪ್ರಾಂತ್ಯದ ದಾಗೆಸ್ತಾನ್‌ನ ಪೊಲೀಸ್ ಠಾಣೆ ಸಮೀಪ ಜರುಗಿದ ಅವಳಿ ಬಾಂಬ್ ಸ್ಫೋಟದಲ್ಲಿ 15 ಜನ ಮೃತರಾಗಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ದಾಗೆಸ್ತಾನದ ರಾಜಧಾನಿ   ಮಖಚ್‌ಕಲಾದಲ್ಲಿ ಸಂಚಾರಿ ಪೊಲೀಸರು ಕಾರೊಂದನ್ನು ತಪಾಸಣೆಗಾಗಿ ನಿಲ್ಲಿಸಲು ಯತ್ನಿಸಿದಾಗ ಅದರಲ್ಲಿದ್ದ ಚಾಲಕ ತನ್ನನ್ನು ಸ್ಫೋಟಿಸಿಕೊಂಡ. ಇದರಿಂದ ಭಾರಿ ಬೆಂಕಿ ಕಾಣಿಸಿಕೊಂಡು ತುರ್ತು ಸೇವೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ ಕೆಲ ಹೊತ್ತಿನಲ್ಲಿ ಅದೇ ಸ್ಥಳದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿತು ಎಂದು ಸ್ಥಳೀಯರು ತಿಳಿಸಿದ್ದಾರೆ. 20ಕ್ಕೂ ಹೆಚ್ಚು ಕಾರುಗಳಿಗೆ ಹಾನಿಯಾಗಿದೆ.ಖಾರ್ ಪಟ್ಟಣದಲ್ಲಿ ಗಸ್ತು ನಡೆಸಿದ ಭದ್ರತಾ ಸಿಬ್ಬಂದಿ, ಅಲ್ಲಿನ ಮಾರುಕಟ್ಟೆಯ ಅಂಗಡಿಯೊಂದರ ಬಳಿ ಸೇರಿದ್ದಾಗ ಸ್ಥಳಕ್ಕೆ ಬಂದ 14- 17 ವರ್ಷದ ಯುವಕ ತನ್ನ ಸೊಂಟದಲ್ಲಿದ್ದ ಬಾಂಬ್‌ನ್ನು ಸ್ಫೋಟಿಸಿಕೊಂಡ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಮೃತರಲ್ಲಿ ಶೌರ್ಯ ಪ್ರಶಸ್ತಿ ಪಡೆದಿದ್ದ ಅಧಿಕಾರಿ ಸೇರಿದಂತೆ ನಾಲ್ವರು ಭದ್ರತಾ ಸಿಬ್ಬಂದಿ, ಒಬ್ಬ ಸರ್ಕಾರಿ ಅಧಿಕಾರಿ ಸೇರಿದ್ದಾರೆ. ಗಾಯಾಳುಗಳಲ್ಲಿ  ಹಲವರ ಸ್ಥಿತಿ ಚಿಂತಾಜನಕ ಆಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.ಸ್ಫೋಟದ ತೀವ್ರತೆಗೆ ಮಾರುಕಟ್ಟೆ ಪ್ರದೇಶವಿಡೀ ರಕ್ತಸಿಕ್ತವಾಗಿತ್ತು. ಹಲವಾರು ಮಳಿಗೆಗಳು ಬರೀ ಇಟ್ಟಿಗೆಯ ರಾಶಿಯಂತೆ ಗೋಚರಿಸುತ್ತಿದ್ದುದನ್ನು ಟಿ.ವಿ ವಾಹಿನಿಗಳು ಪ್ರಸಾರ ಮಾಡಿವೆ. ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಈ ಪ್ರದೇಶದಲ್ಲಿ ತಾಲಿಬಾನ್ ಉಗ್ರರ ವಿರುದ್ಧ ರಕ್ಷಣಾ ಪಡೆಗಳು ಬಹು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry