ಆತ್ಮಾಹುತಿ ಬಾಂಬರ್ ದಾಳಿ: 31 ಸೈನಿಕರ ಸಾವು

7

ಆತ್ಮಾಹುತಿ ಬಾಂಬರ್ ದಾಳಿ: 31 ಸೈನಿಕರ ಸಾವು

Published:
Updated:

ಪೇಶಾವರ(ಪಿಟಿಐ): ಶಾಲಾ ಸಮವಸ್ತ್ರ ತೊಟ್ಟ ಹನ್ನೆರಡು ವರ್ಷದ ಆತ್ಮಾಹುತಿ ಬಾಂಬರ್ ನೊಬ್ಬ ಗುರುವಾರ ಇಲ್ಲಿಂದ 60 ಕಿ.ಮೀ ದೂರದಲ್ಲಿನ ಮರ್ದಾನ್ ಎಂಬಲ್ಲಿರುವ ಪಾಕಿಸ್ತಾನದ ಸೈನಿಕ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿ ತನ್ನನ್ನು ತಾನು ಸ್ಫೋಟಿಸಿಕೊಂಡಾಗ, ಸ್ಫೋಟದಲ್ಲಿ 31 ಸೈನಿಕರು ಮೃತಪಟ್ಟ ಘಟನೆ ನಡೆದಿದೆ. ಈ ಸ್ಫೋಟದಲ್ಲಿ ಇತರೆ 40 ಜನರಿಗೆ ಗಾಯಗಳಾಗಿವೆ.

 ಈ ಸ್ಪೋಟದಲ್ಲಿ ಗಾಯಾಗೊಂಡಿರುವ ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ದಾಳಿಯ ಹೊಣೆ ಹೊತ್ತಿರುವ ತೆಹರೀಕ್ -ಎ- ತಾಲಿಬಾನ್ ಹೆಸರಿನ ಸಂಘಟನೆ, ಅಮೆರಿಕದ ~ದ್ರೋಣ ದಾಳಿ~ ಮತ್ತು ಆ ಪ್ರದೇಶದಲ್ಲಿನ ~ಸೇನಾ ಕಾರ್ಯಾಚರಣೆ~ ವಿರೋಧಿಸಿ ತಾನು ಇನ್ನೂ ದೊಡ್ಡ ಪ್ರಮಾಣದಲ್ಲಿ ಇಂಥ ದಾಳಿಗಳನ್ನು ನಡೆಸುವುದಾಗಿ ಬೆದರಿಕೆ ಹಾಕಿದೆ.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry