ಭಾನುವಾರ, ಮೇ 9, 2021
27 °C

ಆದರ್ಶದ ದಾರಿ ತೋರುವ ಬಾಡಗರಕೇರಿ ಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: `ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅಗತ್ಯ~ ಎಂಬುದು ಎಲ್ಲ ಶಿಕ್ಷಣ  ತಜ್ಞರ ಅಭಿಪ್ರಾಯ. ಇದಕ್ಕಾಗಿಯೇ ಸರ್ಕಾರ ಮತ್ತು ಸಮಾಜ ಸೇವಕರು ನೂರಾರು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲೂ ಶಾಲೆಗಳನ್ನು ತೆರೆದರು.ಇಂಥದ್ದೇ ಉದ್ದೇಶ ಇಟ್ಟುಕೊಂಡು ಶತಮಾನದ ಹಿಂದೆ ಆರಂಭವಾದ ಬಾಡಗರಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದಿಗೂ ಉತ್ತಮ ಶಿಕ್ಷಣ ನೀಡುವಲ್ಲಿ ಹೆಸರಾಗಿದೆ.ದಕ್ಷಿಣ ಕೊಡಗಿನ ಬಿರುನಾಣಿ ಬಳಿ ಇರುವ ಈ ಶಾಲೆ 1900ರಲ್ಲಿ ನಿರ್ಮಾಣಗೊಂಡಿತು. ಆಗ ಮಲ್ಲೇಂಗಡ ಕುಟುಂಬಸ್ಥರು 2.50 ಎಕರೆ ಜಾಗವನ್ನು ದಾನ ನೀಡಿ ಶಾಲೆ ಸ್ಥಾಪಿಸಲು ಪ್ರೋತ್ಸಾಹ ನೀಡಿದರು. ಅಂದಿನಿಂದ ಈ ಗ್ರಾಮೀಣ ಶಾಲೆ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿ, ಬದುಕಿಗೆ ದಾರಿ ತೋರಿದೆ. ಇಲ್ಲಿ ಅಕ್ಷರ ಕಲಿತ ನೂರಾರು ಮಂದಿ ಇಂದು ಉನ್ನತ ಹುದ್ದೆಗೇರಿದ್ದಾರೆ, ಆದರ್ಶದ ಬದುಕು ಸಾಗಿಸುತ್ತಿದ್ದಾರೆ.1ರಿಂದ 7ನೇ ತರಗತಿಯವರೆಗಿನ ಮಕ್ಕಳಿದ್ದು ಪರಿಹಾರ ಬೋಧನಾ ವಿಧಾನದಲ್ಲಿ ಪಾಠ ಮಾಡಿ ಕಲಿಕೆಗೆ ಹೆಚ್ಚಿನ ಪ್ರೇರಣೆ ನೀಡಲಾಗುತ್ತಿದೆ. ಟಿ.ಶೆಟ್ಟಿಗೇರಿ ಕ್ಲಸ್ಟರ್ ವ್ಯಾಪ್ತಿಗೆ ಒಳಪಡುವ ಈ ಶಾಲೆ 2007-08ನೇ ಸಾಲಿನಲ್ಲಿ `ನಮ್ಮೂರ ಶಾಲೆ-ಅತ್ಯುತ್ತಮ ಶಾಲೆ~ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ರೂ.7 ಸಾವಿರ ನಗದು ಬಹುಮಾನ ಪಡೆದುಕೊಂಡಿದೆ.ಕಾಫಿ  ತೋಟದ ಮಧ್ಯದಲ್ಲಿರುವ ಈ ಶಾಲೆಯ ಆವರಣ ಸ್ವಚ್ಛ ಸುಂದರ. ಹಸಿರು ಪರಿಸರದ ನಡುವೆ ಸ್ವಚ್ಛಂದವಾಗಿ ಓಡಾಡಿಕೊಂಡು ಮಕ್ಕಳು ಆರೋಗ್ಯಕರ ವಾತಾವರಣದಲ್ಲಿ ಓದು ಬರಹ ಕಲಿಯುವಂತಾಗಿದೆ.

ಪೀಠೋಪಕರಣಕ್ಕೆ ಕೊರತೆ ಇಲ್ಲ. ಕೆಲವನ್ನು ದಾನಿಗಳು ನೀಡಿದ್ದಾರೆ. ಮತ್ತೆ ಕೆಲವನ್ನು ಸರ್ಕಾರ ನೀಡಿದೆ. ಶಿಕ್ಷಕಿಯರಾದ ಪಿ.ಎ.ರಾಜೇಶ್ವರಿ, ಎಚ್.ಎಲ್.ಬೀನಾ, ನಿವೃತ್ತ ಶಿಕ್ಷಕ ಕೆ.ಕೆ.ಶ್ರೀನಿವಾಸ್ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.