ಆದರ್ಶ ಆಂಗ್ಲ ಶಾಲೆ: ಪ್ರವೇಶ ಪರೀಕ್ಷೆ

7

ಆದರ್ಶ ಆಂಗ್ಲ ಶಾಲೆ: ಪ್ರವೇಶ ಪರೀಕ್ಷೆ

Published:
Updated:
ಆದರ್ಶ ಆಂಗ್ಲ ಶಾಲೆ: ಪ್ರವೇಶ ಪರೀಕ್ಷೆ

ಹೊಳೆನರಸೀಪುರ: ಸರ್ಕಾರ ಹೊಸದಾಗಿ ಆರಂಭಿಸಿರುವ ಆದರ್ಶ ಆಂಗ್ಲ ಮಾಧ್ಯಮ ಶಾಲೆ ಪ್ರವೇಶಕ್ಕಾಗಿ ಪಟ್ಟಣದ ಬಾಲಕಿಯರ ಪಿಯು ಕಾಲೇಜಿನಲ್ಲಿ ಭಾನುವಾರ ಪ್ರವೇಶ ಪರೀಕ್ಷೆ ನಡೆಯಿತು. ಐದನೇ ತರಗತಿ ವ್ಯಾಸಂಗ ಮುಗಿಸಿರುವ ವಿದ್ಯಾರ್ಥಿಗಳನ್ನು ಆರನೇ ತರಗತಿಗೆ ಸೇರಿಕೊಳ್ಳಲು ಪ್ರವೇಶ ಪರೀಕ್ಷೆ ನಡೆಸಿದ್ದು ತಾಲ್ಲೂಕಿನ  ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು. 80 ವಿದ್ಯಾರ್ಥಿಗಳಿಗೆ ಅವಕಾಶವಿದ್ದು, 399 ವಿದ್ಯಾರ್ಥಿಗಳು  ಪರೀಕ್ಷೆ ಬರೆದರು.ಈ ಶಾಲೆಯಲ್ಲಿ ಸ್ನಾತಕೋತರ ಪದವಿ ಪಡೆದ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧಿಸುವರು. ಇಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪುಸ್ತಕ, ಶೈಕ್ಷಣಿಕ ಪ್ರವಾಸ ಸೌಲಭ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಟಿ.ಪುಟ್ಟರಾಜು ತಿಳಿಸಿದ್ದಾರೆ.ಫಲಿತಾಂಶವನ್ನು ಏ.20 ರಂದು ಇಂಟರ್‌ನೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಲೋಕೇಶ್ ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಲೋಕೇಶ್ ತಿಳಿಸಿದ್ದಾರೆ.ಡಯಟ್ ಅಧಿಕಾರಿ ಶಿವರಾಜ್, ಬಾಲಕಿಯರ ಪಿಯು ಕಾಲೇಜಿನ ಉಪ ಪ್ರಾಂಶುಪಾಲ ನಂಜೇಗೌಡ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry